ಭಾನುವಾರ, ಡಿಸೆಂಬರ್ 6, 2020
19 °C

ವಿಷ್ಣುವರ್ಧನ್‌ ಜನ್ಮದಿನ: ರಕ್ತದಾನ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಟ ದಿವಂಗತ ವಿಷ್ಣವರ್ಧನ್‌ ಜನ್ಮದಿನದ ಅಂಗವಾಗಿ ನಗರದ ಯಲ್ಲಾಪುರ ಓಣಿಯ ಹನುಮಂತ ದೇವರ ಗುಡಿ ಆವರಣದಲ್ಲಿ ಶುಕ್ರವಾರ ವಿಷ್ಣು ಸೇನಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ರಕ್ತದಾನ ಶಿಬಿರ ನಡೆಯಿತು.

ಉದ್ಯಮಿ ಸಂತೋಷ ಆರ್‌. ಶೆಟ್ಟಿ ಸಸಿಗೆ ನೀರು ಹಾಕುವ ಮೂಲಕ ಶಿಬಿರ ಉದ್ಘಾಟಿಸಿ ‘ನಟರ ಅಭಿಮಾನಿ ವರ್ಗ ಏನೆಲ್ಲಾ ಮಾಡಬಹುದು; ಅದನ್ನು ವಿಷ್ಣು ಸೇನಾಸಮಿತಿ ಮಾಡಿ ತೋರಿಸಿದೆ. ಕೋವಿಡ್‌ ಸಂಕಷ್ಟದ ಕಾಲದಲ್ಲಿ ರಕ್ತದ ಅಗತ್ಯತೆ ಹೆಚ್ಚಿದೆ. ರಕ್ತದಾನ ಆಯೋಜಿಸಿದ್ದು ಹೆಮ್ಮೆಯ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮೃತ್ಯುಂಜಯ ಹಿರೇಮಠ, ರಾಷ್ಟ್ರೋತ್ಥಾನ ರಕ್ತಭಂಡಾರದ ದತ್ತಮೂರ್ತಿ ಕುಲಕರ್ಣಿ, ನಾದಲೋಕ ಅಧ್ಯಕ್ಷ ಆರ್‌.ಎಂ. ಗೋಗೇರಿ, ಶಂಭು ಪೂಜಾರ, ಬಸವರಾಜ ಕುಂದನಹಳ್ಳಿ, ಅನಿಲ ಪೂಜಾರ, ಶಂಕರ ಸಿದ್ಧಾಪುರ, ಮಂಜು ಸಾಮ್ರಾಟ್, ನಾಗರಾಜ ಅಂಬಿಗೇರ, ಓಂಕಾರ ಜುಂಜಣ್ಣವರ, ಕುಮಾರ, ಸುನೀಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು