ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಗಿರಿಯಾಲ ಗ್ರಾಮದ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಗಿಡಗಳನ್ನು ನೆಡಲಾಯಿತು
ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಕುಸಗಲ್– ಕಿರೆಸೂರು ಮಾರ್ಗದ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನೆಡುತೋಪು ಮಾಡಿದರು
ಧಾರವಾಡ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಸಸಿಗಳು

ಜಿಲ್ಲೆಯ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಪ್ರಸ್ತುತ ಮಳೆಗಾಲದ ಅವಧಿಯಲ್ಲಿ ರಸ್ತೆ ಬದಿಯಲ್ಲಿ ಒಟ್ಟು 80 ಸಾವಿರ ಸಸಿಗಳನ್ನು ನೆಡಲಾಗಿದೆ. 2026ರ ಮುಂಗಾರು ಅವಧಿಯವರೆಗೆ ಇನ್ನೂ 63 ಸಾವಿರ ಸಸಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಬ್ಸಿಡಿ ದರದಲ್ಲಿ ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ
ವಿವೇಕ್ ಟಿ. ಉಪ ಅರಣ್ಯ ಸಂರಕ್ಷಣಾಧಿಕಾರಿ ಧಾರವಾಡ ಪ್ರಾದೇಶಿಕ ವಿಭಾಗ
ಪ್ರಸ್ತುತ ಮಳೆಗಾಲದಲ್ಲಿ ಹುಬ್ಬಳ್ಳಿ ಶಹರ ಗ್ರಾಮೀಣ ನವಲಗುಂದ ಅಣ್ಣಿಗೇರಿ ಕುಂದಗೊಳ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 60 ಸಾವಿರ ಗಿಡಗಳನ್ನು ರಸ್ತೆಬದಿಯಲ್ಲಿ ನೆಡುತೋಪು ಮಾಡಲಾಗಿದೆ
ಆರ್.ಎಸ್.ಉಪ್ಪಾರ ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ವಲಯ ಹುಬ್ಬಳ್ಳಿ
ಪ್ರತಿ ಮಳೆಗಾಲದ ಅವಧಿಯಲ್ಲಿ ಅರಣ್ಯ ಇಲಾಖೆಯಿಂದ ಜಿಲ್ಲಾ ವ್ಯಾಪ್ತಿಯ ರಸ್ತೆಗಳ ಬದಿಯಲ್ಲಿ ಸಸಿಗಳನ್ನು ನೆಡಲಾಗುತ್ತದೆ. ಇದರಿಂದ ನೀರಿನ ನಿರ್ವಹಣೆ ಇಲ್ಲದೇ ಸಹಜವಾಗಿಯೇ ಗಿಡಗಳು ಬೆಳೆಯುತ್ತವೆ
ಅರಣ್ಯ ಇಲಾಖೆಯ ಸಿಬ್ಬಂದಿ63 ಸಾವಿರ ಸಸಿ ವಿತರಿಸುವ ಗುರಿ...
ಈ ಬಾರಿಯ ಮಳೆಗಾಲದ ಅವಧಿಯಲ್ಲಿ ಧಾರವಾಡ ಅಳ್ನಾವರ ಹುಬ್ಬಳ್ಳಿ ಕುಂದಗೋಳ ಕಲಘಟಗಿ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಇದುವರೆಗೂ ಒಟ್ಟು 77967 ಸಸಿಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗಿದೆ. ‘ಹಸಿರು ಕರ್ನಾಟಕ’ ಯೋಜನೆಯಡಿಯಲ್ಲಿ 3ಸಾವಿರ ಸಸಿಗಳನ್ನು ವನಮಹೋತ್ಸವ ಕಾರ್ಯಕ್ರಮದ ಅಡಿಯಲ್ಲಿ ಶಾಲೆ ಕಾಲೇಜು ಸರ್ಕಾರಿ ಕಚೇರಿಗಳ ಆವರಣದಲ್ಲಿ ನೆಡಲಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಒಟ್ಟು 80967 ಸಸಿಗಳನ್ನು ನಡೆಲಾಗಿದೆ. ಇದರೊಂದಿಗೆ 2026ರ ಮುಂಗಾರು ಅವಧಿಯವರಿಗೆ ರಸ್ತೆ ಬದಿಯಲ್ಲಿ 60 ಸಾವಿರ ಹಸಿರು ಕರ್ನಾಟಕ ಯೋಜನೆಯಲ್ಲಿ 3 ಸಾವಿರ ಸಸಿಗಳು ಸೇರಿದಂತೆ ಇನ್ನೂ 63 ಸಾವಿರ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಗುರಿ ಹೊಂದಲಾಗಿದೆ’ ಎನ್ನುತ್ತಾರೆ ಧಾರವಾಡ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ್ ಟಿ. ಮಾಹಿತಿ ನೀಡುತ್ತಾರೆ.