ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ನೇಹಿಯಾಗಿ ಕೆಲಸ ಮಾಡಿ: ಪ್ರಸಾದ್‌

ಕರ್ಣಾಟಕ ಬ್ಯಾಂಕ್‌ನ 887ನೇ ಶಾಖೆ ಉದ್ಘಾಟನೆ
Last Updated 31 ಮಾರ್ಚ್ 2022, 14:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬ್ಯಾಂಕ್‌ ಸಿಬ್ಬಂದಿ ನಗುಮೊಗದಿಂದ ಜನಪರವಾಗಿ ಕೆಲಸ ಮಾಡಿದರೆ ಹೆಚ್ಚು ಗ್ರಾಹಕರು ಬರುತ್ತಾರೆ. ಇದರಿಂದ ಶಾಖೆ ವೇಗವಾಗಿ ಅಭಿವೃದ್ಧಿಯಾಗುತ್ತದೆ ಎಂದು ಸ್ವರ್ಣ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ವಿಎಸ್‌ವಿ ಪ್ರಸಾದ್ ಹೇಳಿದರು.

ನಗರದ ಕೇಶ್ವಾಪುರ ರಸ್ತೆಯ ನವೀನ್‌ ಪಾರ್ಕ್‌ನಲ್ಲಿ ಶುಕ್ರವಾರ ಕರ್ಣಾಟಕ ಬ್ಯಾಂಕ್‌ನ 887ನೇ ಶಾಖೆ ಹಾಗೂ ಮಿನಿ ಇ ಲಾಬಿ ಉದ್ಘಾಟಿಸಿ ಮಾತನಾಡಿದ ಅವರು ‘ನವೀನ್‌ ಪಾರ್ಕ್ ಬಡಾವಣೆಯಲ್ಲಿ ಸ್ಥಿತಿವಂತರೇ ಹೆಚ್ಚು ವಾಸವಾಗಿದ್ದಾರೆ. ಇಲ್ಲಿನ ಬಡಾವಣೆ ಹಾಗೂ ಸುತ್ತಮುತ್ತಲಿನ ಜನರಿಗೆ ಹೊಸ ಶಾಖೆಯಿಂದ ಅನುಕೂಲವಾಗುತ್ತದೆ. ಅವರ ಅಗತ್ಯಕ್ಕೆ ತಕ್ಕಂತೆ ಶಾಖೆ ಸೇವೆ ಒದಗಿಸಬೇಕು’ ಎಂದರು.

ಬ್ಯಾಂಕ್‌ ನಿರ್ದೇಶಕ ಕೇಶವ ಕೃಷ್ಣರಾವ್ ದೇಸಾಯಿ ಮಾತನಾಡಿ ‘ಇಲ್ಲಿನ ಶಾಖೆಯಲ್ಲಿ ಸದ್ಯಕ್ಕೆ ಒಂದು ಲಾಕರ್‌ ಸೌಲಭ್ಯ ಮಾತ್ರ ಇದ್ದು, ಇದನ್ನು ಮೂರಕ್ಕೆ ಹೆಚ್ಚಿಸಲಾಗುವುದು. ಕರ್ಣಾಟಕ ಬ್ಯಾಂಕ್‌ ಆರಂಭವಾಗಿ 2023–24ರಲ್ಲಿ ನೂರು ವರ್ಷ ಪೂರ್ಣಗೊಳಲಿದ್ದು, ಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ. ವಾದಿರಾಜ ಮಾತನಾಡಿ ‘ಬ್ಯಾಂಕ್‌ ಭಾರತದ ಹೊರಗೂ ವಹಿವಾಟು ವಿಸ್ತರಿಸಿದೆ. ಈ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ವರದಿಯ ಪ್ರಕಾರ ಒಟ್ಟು ₹1,33,918 ಕೋಟಿ ವಹಿವಾಟು ಆಗಿದೆ. ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಖೆಗಳ ಒಟ್ಟು ವ್ಯವಹಾರ ₹6,774 ಕೋಟಿ ವ್ಯವಹಾರವಾಗಿದೆ. ಅದರಲ್ಲಿ ಠೇವಣೆ ₹4,869 ಕೋಟಿ ಹಾಗೂ ಮುಂಗಡ ₹1,905 ಕೋಟಿ ಇದೆ. ಅವಳಿ ನಗರದ 16ನೇ ಶಾಖೆ ಇದಾಗಿದೆ’ ಎಂದು ತಿಳಿಸಿದರು.

ಶಾಖಾ ವ್ಯವಸ್ಥಾಪಕ ಗಣಪತಿ ಭಟ್ಟ, ದಿವಾಕರ, ಅರುಣ, ಗಿರೀಶ ಉಪಧ್ಯಾಯ, ರಮಣಮೂರ್ತಿ, ಅರವಿಂದ ಕಲಬುರ್ಗಿ, ನೇತ್ರಾವತಿ, ವಿದ್ಯಾವತಿ, ಶಾಂತಿಲಾಲ್‌ ಹಾಗೂ ರಜತ್ ಭಂಡಾರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT