ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಬ್ಜರ ವಿಶ್ವ ಕ್ರೀಡಾಕೂಟ; ಜರ್ಮನಿಗೆ ತೆರಳಿದ ಭಾರತ ತಂಡ

Published 28 ಜುಲೈ 2023, 16:01 IST
Last Updated 28 ಜುಲೈ 2023, 16:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜರ್ಮನಿಯಲ್ಲಿ ನಡೆಯಲಿರುವ ಕುಬ್ಜರ ಎಂಟನೇ ವಿಶ್ವ ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತ ತಂಡ ಶುಕ್ರವಾರ ಪ್ರಯಾಣ ಬೆಳೆಸಿತು. 

ಕರ್ನಾಟಕದ ಎಂಟು ಸೇರಿದಂತೆ 18 ಕ್ರೀಡಾಪಟುಗಳು ಭಾರತ ತಂಡದಲ್ಲಿದ್ದಾರೆ. ರಾಜ್ಯದ ಆಟಗಾರರು ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ, ಅಲ್ಲಿಂದ ಇನ್ನುಳಿದ ರಾಷ್ಟ್ರೀಯ ತಂಡದ ಆಟಗಾರರ ಜೊತೆಗೂಡಿ ಜರ್ಮಿನಿಗೆ ಪ್ರಯಾಣ ಬೆಳೆಸಿದರು. ಆಗಸ್ಟ್ 5 ರವರೆಗೆ ಕ್ರೀಡಾಕೂಟ ನಡೆಯಲಿದೆ.

'ವೀಸಾ ಸಮಸ್ಯೆಯಿಂದಾಗಿ ತಡವಾಗಿ ಜರ್ಮನಿ ತಲುಪಿದೆವು. ಇದರಿಂದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಶನಿವಾರದಿಂದ ಸ್ಪರ್ಧೆಗಳು ಆರಂಭವಾಗಲಿವೆ' ಭಾರತ ತಂಡದ ವ್ಯವಸ್ಥಾಪಕ ಶಿವಾನಂದ ಗುಂಜಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಕರ್ನಾಟಕದ ಕ್ರೀಡಾಪಟುಗಳು: ದೇವಪ್ಪ ಮೋರೆ (ಧಾರವಾಡ ಜಿಲ್ಲೆ), ನಾಗೇಶ ಕದ್ರಿಪುರ (ಕೋಲಾರ ಜಿಲ್ಲೆ), ಪ್ರಕಾಶ್‌ ಎಂ. (ಬೆಂಗಳೂರು), ಮಂಜುಳಾ ಗೊರಗುದ್ದಿ ಚಿಕ್ಕನಂದಿ (ಬೆಳಗಾವಿ ಜಿಲ್ಲೆ), ಮಧುಸೂದನ ಡಿ. (ಮೈಸೂರು), ತುಳಸಿದರ ಜಿ.ಎಚ್‌. (ಬೆಂಗಳೂರು), ಶಾಂತಕುಮಾರ್‌ ಕೆ.ಆರ್.ಕೊಳ್ಳಂಗಿ (ಹಾಸನ ಜಿಲ್ಲೆ) ಮತ್ತು ಸಿ.ವಿ.ರಾಜಣ್ಣ (ಬೆಂಗಳೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT