ಧಾರವಾಡ: `ನಾನು ಉಳ್ಳಾಗಡ್ಡಿ ಬೀಜ ಬಿತ್ತನೆ ಮಾಡುವ ಯಂತ್ರ ಬಳಕೆ ಮಾಡಲು ಶುರುಮಾಡಿದ ಮೇಲೆ ಇಳುವರಿಯಲ್ಲಿ ಸಾಕಷ್ಟು ಏರಿಕೆ ಕಂಡಿದೆ. ಇದರಿಂದ ಹತ್ತಾರು ಎಕರೆ ಹೊಲ ಖರೀದಿ ಮಾಡಲೂ ನನ್ನಿಂದ ಸಾಧ್ಯವಾಗಿದೆ~ ಎಂದು ಮುಧೋಳದ ರೈತ ಪ್ರಭು ಬಸಪ್ಪ ಅಕ್ಕಿಮರಡಿ ಹೆಮ್ಮೆಯಿಂದ ಹೇಳಿಕೊಂಡರು.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಏರ್ಪಡಿಸಿರುವ ಕೃಷಿ ಮೇಳದಲ್ಲಿ ಶುಕ್ರವಾರ ನಡೆದ `ರೈತರಿಂದ ರೈತರಿಗಾಗಿ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಮನೆಯಲ್ಲಿ ಬಿದ್ದ ಕೆಲಸಕ್ಕೆ ಬಾರದ ವಸ್ತುಗಳು, ಅಂಗಡಿಯಲ್ಲಿ ಖರೀದಿಸಿ ತಂದ ಕೆಲವು ಸಲಕರಣೆಗಳಿಂದ ಈ ಯಂತ್ರ ಮಾಡಿದ್ದೇನೆ. ಗುಂಪಾಗಿ ಬೀಜ ಎಸೆಯುತ್ತಿದ್ದರಿಂದ ಗಡ್ಡಿ ಸರಿಯಾಗಿ ಬೆಳೆಯುತ್ತಿರಲಿಲ್ಲ. ಈ ಯಂತ್ರದ ಬಳಕೆಯಿಂದ ಆ ಸಮಸ್ಯೆ ಇಲ್ಲ. ಇಳುವರಿಯೂ ಚೆನ್ನಾಗಿ ಬಂದಿದೆ. ಎಕರೆಗೆ 150 ಪಿಸಿಯಷ್ಟು ಬೆಳೆ ತೆಗೆದಿದ್ದೇನೆ~ ಎಂದು ಅವರು ತಿಳಿಸಿದರು.

ರೈತರಿಗೆ ಉಪಯೋಗ ಪಡೆಯಬೇಕು ಎಂಬ ಉದ್ದೇಶದಿಂದ ತಾವು ತಯಾರಿಸಿದ ಆ ಯಂತ್ರವನ್ನು ಪ್ರದರ್ಶನಕ್ಕಾಗಿ ತಂದಿದ್ದರು. ಯಾವುದೇ ಇಂಧನವಿಲ್ಲದೆ ಬಿತ್ತನೆ ಮಾಡಲು ಸಾಧ್ಯವಾಗುವಂತೆ ಆ ಯಂತ್ರವನ್ನು ರೂಪಿಸಲಾಗಿದೆ.

ಶಿರಸಿಯ ರಾಘವೇಂದ್ರ ಹೆಗಡೆ ಸಹ ಇಂಧನರಹಿತವಾದ ಭತ್ತದ ನಾಟಿ ಯಂತ್ರವನ್ನು ಹಿಡಿದುಕೊಂಡು ಬಂದಿದ್ದರು. `ನನ್ನ ಈ ಯಂತ್ರಕ್ಕೆ ಯಾವ ಇಂಧನವೂ ಬೇಕಾಗಿಲ್ಲ. ರಟ್ಟೆ ಬಲವೊಂದೇ ಸಾಕು~ ಎಂದು ಅವರು ತಿಳಿಸಿದರು. `ಕೆಟ್ಟರೆ ರಿಪೇರಿಗೆ ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲೇ ರೈತರೇ ರಿಪೇರಿ ಮಾಡಬಹುದು. ಈ ಯಂತ್ರ ತಯಾರಿಕೆಗೆ ರೂ 20 ಸಾವಿರದವರೆಗೆ ಖರ್ಚಾಗಬಹುದು~ ಎಂದು ಅವರು ವಿವರಿಸಿದರು.

ಅಡಿಕೆಕಾಯಿ, ಶೇಂಗಾ, ಸೂರ್ಯಕಾಂತಿ, ಜೋಳ ಮೊದಲಾದ ಬೆಳೆಗಳನ್ನು ಒಣಗಿಸಲು ತಾವೇ ಸಿದ್ಧಪಡಿಸಿದ ವಾರ್ಮ್ ಯಾರ್ಡ್ಅನ್ನು ಅವರು ಅಲ್ಲಿ ಪ್ರದರ್ಶಿಸಿದರು. ಅದೇ ಊರಿನಿಂದ ಬಂದಿದ್ದ ಸಂಜಯ ಮಧುಕೇಶ್ವರ ಕಾಳು ಮೆಣಸಿನ ಯಂತ್ರವನ್ನು ತೆಗೆದುಕೊಂಡು ಬಂದಿದ್ದರು. ಬಳ್ಳಿಯಿಂದ ಕಾಳು ಬಿಡಿಸುತ್ತದೆ ಈ ಯಂತ್ರ.

ನರಗುಂದ ತಾಲ್ಲೂಕು ಹದಲಿ ಗ್ರಾಮದಿಂದ ಬಂದಿದ್ದ ಚಂದ್ರಗೌಡ ಲಿಂಗದಾಳ ಅವರದ್ದು ಅಪರೂಪದ ಸಾಧನೆ. ಮಾತನಾಡಲು ವಿಪರೀತವಾಗಿ ಸಂಕೋಚಪಟ್ಟ ಚಂದ್ರಗೌಡರು, ಕೃಷಿ ವಿವಿ ಸಿಬ್ಬಂದಿಯೊಬ್ಬರ ಸಹಾಯದಿಂದ ಮಾತನಾಡಿದರು. ಎಂ-80 ಗಾಡಿಗೆ ಔಷಧಿ ಸಿಂಪರಣೆ ಯಂತ್ರ ಜೋಡಿಸಿ ಹೊಲದಲ್ಲಿ ಔಷಧಿ ಹೊಡೆಯುತ್ತಿದ್ದರಂತೆ. ಅದೇ ಯಂತ್ರವನ್ನು ಮಾರ್ಪಡಿಸಿ ಟ್ರ್ಯಾಕ್ಟರ್ಗೆ ಅಳವಡಿಸಿ ಔಷಧಿ ಸಿಂಪರಣೆ ಆರಂಭಿಸಿದರು.

ಚಂದ್ರಗೌಡರ ಸಾಹಸ ಮೆಚ್ಚಿ ಹಲವು ರೈತರು ಅವರ ಸೇವೆ ಪಡೆಯಲು ಮುಂದೆ ಬಂದರು. ಹದಲಿ ಗ್ರಾಮದಲ್ಲಿ ನೂರಾರು ಹೊಲಗಳಿಗೆ ಅವರು ಔಷಧಿ ಸಿಂಪರಣೆ ಮಾಡಿದ್ದಾರೆ. ದೊಡ್ಡದಾದ ಯಂತ್ರವನ್ನು ಮೇಳಕ್ಕೆ ತರಲು ಅವರಿಂದ ಸಾಧ್ಯವಾಗಿಲ್ಲ. ಸೊರಬದ ವಿ.ಎ. ಬಸವರಾಜ ಅವರು ಭತ್ತದ ಬೀಜ ಸಿದ್ಧಪಡಿಸುವ ತಮ್ಮ ಸಾಹಸವನ್ನು ಹೇಳಿಕೊಂಡರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ, ಇಳಕಲ್ಲಿನ ವಿಜಯಮಹಾಂತೇಶ ಚಿತ್ತರಗಿ ಪೀಠದ ವಿಜಯ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೃಷಿ ವಿವಿ ಕುಲಪತಿ ಪ್ರೊ.ಆರ್.ಆರ್.ಹಂಚಿನಾಳ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.