ಗುರುವಾರ , ಆಗಸ್ಟ್ 11, 2022
21 °C
ಸರಳೀಕೃತ ಸಮ್ಮತಿ ಪತ್ರ ನೋಂದಣಿ ಅಭಿಯಾನ ವಿಚಾರ ಸಂಕಿರಣ

‘ಕೆಂಪು ವಿಭಾಗದಲ್ಲಿ ಹೆಚ್ಚು ಮಾಲಿನ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಉದ್ದಿಮೆಗಳಿಂದಾಗುವ ವಾಯುಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ದುಷ್ಪಪರಿಣಾಮ ಉಂಟಾಗಿ ಪರಿಸರ ಹದಗೆಡುತ್ತಿದೆ. ಈ ನಿಟ್ಟಿನಲ್ಲಿ ಉದ್ಯಮ ಪ್ರಾರಂಭಿಸುವ ಪೂರ್ವದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು’ ಎಂದು ಪ್ರಾದೇಶಿಕ ಅಧಿಕಾರಿ ಬಿ.ರುದ್ರೇಶ ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಹಯೋಗದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಗದುಗಿನಲ್ಲಿ ಉದ್ಯಮಗಳು ವಿರಳವಾಗಿವೆ. ಜಿಲ್ಲೆಯಲ್ಲಿನ ದೊಡ್ಡ ಉದ್ಯಮವೆಂದರೆ ಮುಂಡರಗಿ ನಗರದ ವಿಜಯನಗರ ಸಕ್ಕರೆ ಕಾರ್ಖಾನೆ. ಸರ್ಕಾರ ಉದ್ಯಮಗಳನ್ನು ನಾಲ್ಕು ವಿಭಾಗವಾಗಿ ವಿಂಗಡಿಸಿದ್ದು, ಅದರಲ್ಲಿ ಕೆಂಪು ವಿಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಯುಮಾಲಿನ್ಯ ಮಾಡುವಂತಹ ಉದ್ಯಮಗಳು ಬರುತ್ತವೆ’ ಎಂದು ತಿಳಿಸಿದರು.

‘ಗದಗ ಜಿಲ್ಲೆಯಲ್ಲಿ ಶೇ 95ರಷ್ಟು ಉದ್ಯಮಗಳು ಹಸಿರು ಮತ್ತು ಬಿಳಿ ವಿಭಾಗದಲ್ಲಿ ಬರುತ್ತವೆ. ಆದರೆ, ಇಲ್ಲಿರುವ ಸಾಕಷ್ಟು ಉದ್ಯಮಗಳು ಈವರೆಗೆ ಪರವಾನಗಿ ಪಡೆದುಕೊಂಡಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯ ಲೇಬೇಕು. ಸರ್ಕಾರದ ಕೆಲವೊಂದು ಮಾನದಂಡಗಳನ್ನು ಉದ್ಯಮಗಳು ಅನುಸರಿಸಬೇಕು’ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಗದಗ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಆನಂದ ಎಲ್. ಪೊತ್ನೀಸ್‌ ಮಾತನಾಡಿ, ‘ಯಾವುದೇ ಉದ್ಯಮ ಸ್ಥಾಪನೆ ಮಾಡುವ ಪೂರ್ವದಲ್ಲಿ ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆಯಬೇಕು. ಉದ್ಯಮ ಪ್ರಾರಂಭವಾದ ನಂತರ ಚಾಲನಾ ಪ್ರಮಾಣಪತ್ರ ಪಡೆಯಬೇಕು. ಉದ್ದಿಮೆದಾರರಿಗೆ ಈ ಬಗ್ಗೆ ಸಾಕಷ್ಟು ತಿಳಿವಳಿಕೆ ಇರಬೇಕು. ಹಾಗಾಗಿ, ಎಲ್ಲರೂ ಸಂಸ್ಥೆಯಿಂದ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ನರಸಾಪೂರ ಇಂಡಸ್ಟ್ರಿಯಲ್‌ ಅಸೋಸಿಯೇಷನ್‌ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ, ಹಾತಲಗೇರಿ ನಾಕಾ ಕೆಎಸ್‌ಎಸ್‌ಐಡಿಸಿ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಹುಚ್ಚಪ್ಪ ಭಜಂತ್ರಿ, ಎಸ್.ಪಿ. ಸಂಶಿಮಠ, ಸಂಸ್ಥೆಯ ಗೌರವ ಕಾರ್ಯದರ್ಶಿ ವೀರೇಶ ಎಸ್. ಕೂಗು, ಸಹ ಗೌರವ ಕಾರ್ಯದರ್ಶಿ ಸೋಮನಾಥ ಕೆ. ಜಾಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.