ನರೇಗಲ್: ಹೋಬಳಿಯ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ 175ನೇ ಜಾತ್ರಾ ಮಹೋತ್ಸವವು ಡಿ 18 ರಿಂದ ಡಿ 24ರವರೆಗೆ ಜರುಗಲಿವೆ.

ಡಿ.18 ರಂದು ಬೆಳಿಗ್ಗೆ 9 ಗಂಟೆಗೆ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸ ಸ್ವಾಮೀಜಿ ಅವರಿಂದ ಷಟಸ್ಥಲ ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರಕಲಿದೆ.

ಡಿ.19 ರಿಂದ ಡಿ. 22 ರ ವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಲಘು ರಥೋತ್ಸವ ಜರುಗಲಿದೆ. ಡಿ.21 ಮತ್ತು 22 ರಂದು ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳ ಉತ್ತೇಜನಕ್ಕಾಗಿ ಭಜನಾ ಸ್ಪರ್ಧೆ ಮತ್ತು ಪಗಡೆ ಆಟದ ಸ್ಪರ್ಧೆಗಳು ಜರುಗಲಿವೆ.

ಡಿ. 23ರಂದು ಮಧ್ಯಾಹ್ನ 12 ಗಂಟೆಗೆ ಮಹಾಗಣಾರಾಧನೆ, 12.30 ಗಂಟೆಗೆ ನರೇಗಲ್ ಪಟ್ಟಣದ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ವಿದ್ಯಾರ್ಥಿಗಳು ಪ್ರತಿ ವರ್ಷದದಂತೆ ಸಾವಿರಾರೂ ವಿದ್ಯಾರ್ಥಿಗಳು ಪಾದಯಾತ್ರೆಯ ಮೂಲಕ ಹಾಲಕೆರೆಯ ಶ್ರೀಮಠಕ್ಕೆ ಆಗಮಿಸುವರು. ಹಿರಿಯ ಶಿಕ್ಷಕ ಎಂ. ಎ. ಹಿರೇವಡೆಯರವರ ಅಭಿನಂದನಾ ಗ್ರಂಥ ಒಲವಿನ ಒಡೆಯ ಬಿಡುಗಡೆ ಸಮಾರಂಭ ಜರುಗಲಿದ್ದು, ಶಿರಹಟ್ಟಿ, ಬಾಲೇಹೊಸೂರ ಭಾವೈಕ್ಯತಾ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಗ್ರಂಥ ಪರಿಚಯವನ್ನು ಶಿವಾನಂದಯ್ಯ ಚರಂತಿಮಠ, ಪ್ರಧಾನ ಸಂಪಾದಕ ಸಿ. ಆರ್. ಯರವಿನತೇಲಿಮಠ ಸೇರಿದಂತೆ ಇತರರು ಆಗಮಿಸಲಿದ್ದಾರೆ.

ಡಿ. 23 ರಂದು ಸಂಜೆ 6.30 ಗಂಟೆಗೆ ಲಿಂ.ಹಿರಿಯ ಅನ್ನದಾನ ಶಿವಯೋಗಿಗಳವರ 113ನೇ ಹಾಗೂ ಲಿಂ. ಅಭಿನವ ಅನ್ನದಾನ ಸ್ವಾಮೀಜಿಗಳ ಚತುರ್ಥ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯವನ್ನು ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸಲಿದ್ದಾರೆ.

ಡಿ.24 ರಂದು ಬೆಳಿಗ್ಗೆ 5 ಗಂಟೆಯಿಂದ 7 ವರೆಗೆ ಶ್ರೀಗಳ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರುತಿ ಜರುಗಲಿವೆ. 10 ಗಂಟೆಗೆ ಸೋಮಸಮುದ್ರದ ಸಿದ್ದಲಿಂಗ ಸ್ವಾಮೀಜಿಯವರಿಂದ ಜಂಗಮೋತ್ಸವ ಜರುಗಲಿದೆ. 10.30 ಗಂಟೆಗೆ ಧಾರವಾಡದ ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಜರುಗಲಿದೆ. ಮಧ್ಯಾಹ್ನ 12.20ಕ್ಕೆ ಅಕ್ಷರಯೋಗಿ, ಕಾಯಕಯೋಗಿ ಲಿಂ. ಗುರು ಅನ್ನದಾನ ಮಹಾಶಿವಯೋಗಿಗಳ ಜೀವನಾಧಾರಿತ ಚಲನಚಿತ್ರ ಬೆತ್ತದ ಅಜ್ಜ ಮಹೊರ್ತ ಜರುಗಲಿದೆ.

ಸಂಜೆ 5 ಗಂಟೆಗೆ ಅನ್ನದಾನೇಶ್ವರ ಮಹಾರಥೋತ್ಸವ ಜರುಗಲಿದೆ. ಸಂಜೆ 6:30 ಗಂಟೆಗೆ ಕೃಷಿ ವಿಚಾರ ಗೋಷ್ಠಿ ಜರುಗಲಿದ್ದು, ಖೇಳಗಿ ಶಿವಲಿಂಗೇಶ್ವರ ಸಂಸ್ಥಾನಮಠದ ಶಿವಲಿಂಗ ಸ್ವಾಮೀಜಿ, ಗುರುಸಿದ್ದ ಶಿವಾಚಾರ್ಯರು, ಅಭಿನವ ಪಂಚಾಕ್ಷರ ಶಿವಾಚಾರ್ಯರು, ಕಾಡಸಿದ್ದೇಶ್ವರ ಶಿವಾಚಾರ್ಯರು, ಶಿವಲಿಂಗದೇಶಿಕರು, ಶರಣಬಸ ದೇವರು, ಶರಣಬಸವ ಶರಣರು ಸಮ್ಮುಖ ವಹಿಸುವರು

ಹಾಸ್ಯ ಸಂಜೆ: ಗಂಗಾವತಿ ಬಿ. ಪ್ರಾಣೇಶ, ಬಸವರಾಜ ಮಹಾಮನಿ, ನರಸಿಂಹ ಜೋಶಿ ತಂಡದಿಂದ ಹಾಸ್ಯ ಸಂಜೆ ಜರುಗಲಿದೆ ಎಂದು ಶ್ರೀಮಠದಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.