ನರಗುಂದ: ಪಟ್ಟಣದ ಗಾಂಧಿಚೌಕನಲ್ಲಿ ಲೋಕೋಪಯೋಗಿ ಇಲಾಖೆಯ ₹80 ಲಕ್ಷ ಅನುದಾನದಲ್ಲಿ ನಡೆಯುತ್ತಿರುವ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಸಿ ಪಾಟೀಲ ಸಮ್ಮುಖದಲ್ಲಿ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ, ‘ಪಟ್ಟಣದ ಕೆಂಪಗಸಿಯಿಂದ ಗಾಂಧಿಚೌಕ, ಸೋಮಾಪೂರದ ಜಮಾದಾರ ಫ್ಲಾಟ್, ಜಮಲಾಪೂರ ಪಠಾಣ ಓಣಿ, ಅಳಿಯ ನಗರಗಳ ಆಯ್ದ ಭಾಗಗಳಲ್ಲಿ ಸಿಸಿ ರಸ್ತೆ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಂಪೂರ್ಣ ಅಭಿವೃದ್ಧಿ ಮಯವಾಗಿದೆ. ಈಗ ಉಳಿದ ಕೆಲವು ಕಾಮಗಾರಿಗಳನ್ನು ಪೂರ್ಣ ಗೊಳಿಸಲಾಗುತ್ತಿದೆ’ ಎಂದರು.

ಶಾಸಕ ಸಿ.ಸಿ ಪಾಟೀಲ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಪಡೆದು ತಿಂಗಳು ಗತಿಸಿದ ನಂತರ ಮೊದಲ ಬಾರಿಗೆ ಪಟ್ಟಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಾಜಿ ಅಧ್ಯಕ್ಷ ಸಂಭಾಜಿ ಕಾಶೀದ, ಉಮೇಶಗೌಡ ಪಾಟೀಲ, ವಸಂತ ಜೋಗಣ್ಣವರ, ಹನುಮಂತ ಹವಾಲ್ದಾರ, ಪ್ರಶಾಂತ ಜೋಶಿ, ಸಂಗಪ್ಪ ಪೂಜಾರ, ಮಾಜಿ ಅಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ, ಮಹೇಶ ಹಟ್ಟಿ, ಮಾಜಿ ಅಧ್ಯಕ್ಷ ಚಂದ್ರಶೇಖರ ಕೋಟಿ, ದೇವಣ್ಣ ಕಲಾಲ, ಪವಾಡೆಪ್ಪ ವಡ್ಡಿಗೇರಿ, ಸಿ.ಕೆ ಪಾಟೀಲ, ಮಹಾದೇವ ಪವಾರ, ವಿಠ್ಠಲ ಹವಾಲ್ದಾರ, ನಾಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.