ನರೇಗಲ್: ‘ವಿಶ್ವಗುರು ಭಾರತ’ ಸಿದ್ಧಾಂತದ ಆಧಾರದ ಮೇಲೆ ಹಾಗೂ ಬಡವರ, ದೀನದಲಿತರ ಏಳಿಗೆಗಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ದೇಶದ ಒಗ್ಗಟ್ಟನ್ನು ಮತ್ತಷ್ಟು ಸದೃಢಗೊಳಿಸುತ್ತಿದೆ ಎಂದು ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ತೋಟಪ್ಪ ಕಡಗದ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದೇಶಾಭಿಮಾನದ ಪಕ್ಷವನ್ನು ಕಟ್ಟುವಲ್ಲಿ ಅನೇಕ ವರ್ಷಗಳಿಂದ ಹಿರಿಯ ನಾಯಕರು, ಕಾರ್ಯಕರ್ತರು ಮಾಡಿದ ಶ್ರಮ, ಹೋರಾಟ ಮತ್ತು ತ್ಯಾಗದ ಫಲದಿಂದ ಪಕ್ಷ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ ಎಂದರು.

‘ರೈತರಿಗಾಗಿ, ಮಹಿಳೆಯರಿಗಾಗಿ, ಬಡವರಿಗೆ, ದೀನದಲಿತರಿಗೆ ಹಾಗೂ ಸಮಗ್ರ ಭಾರತದ ಅಭಿವೃದ್ಧಿಗೆ ತಂದಿರುವ ಯೋಜನೆಗಳನ್ನು ಜನರಿಗೆ ತಿಳಿಸಬೇಕಿದೆ’ ಎಂದರು.

ಶೇಖಪ್ಪ ಮಾರನಬಸರಿ, ಚನ್ನಬಸಪ್ಪ ಕೊಪ್ಪದ, ಬಸವರಾಜ ಶ್ಯಾಶೇಟ್ಟಿ, ಗುರುಪಾದ ವಾಲಿ, ಶರಣಪ್ಪ ಕೋರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.