ಸಂಕಷ್ಟಕ್ಕೆ ದೂಡಿದ್ದಂತೂ ಸತ್ಯ: ನಿರಂತರ ಮಳೆ ಸುರಿದ ಕಾರಣ ಹೆಸರು ಬೆಳೆ ಹಾನಿಯಾಗಿದೆ. ಆದ್ದರಿಂದ ಈಗಾಗಲೇ ಹೆಚ್ಚಿನ ರೈತರು ಬೆಳೆ ವಿಮೆ ಕಂತು ಪಾವತಿಸಿದ್ದಾರೆ. ಅವರ ದೂರು, ಇತರೆ ಚರ್ಚೆಗೆ ವಿಮಾ ಕಂಪನಿ ಸಹಾಯವಾಣಿ ಸ್ಥಾಪಿಸಿದೆ. ದೂರು ಆಧರಿಸಿ ಕಂಪನಿ ಸಮೀಕ್ಷೆ ಮಾಡಿ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತದೆ. ವಿಮೆ ಕಂತು ಪಾವತಿಸದ ರೈತರ ಬೆಳೆ ಹಾನಿಯಾಗಿದ್ದರೆ ಅಂತಹ ರೈತರ ವಿವರ ಪಡೆದು ತಹಶೀಲ್ದಾರ್ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿಮೆ ಏಜೆಂಟರ ಹಾವಳಿ ನಿಯಂತ್ರಣಕ್ಕೆ ರೈತರು ಸಹಕಾರ ನೀಡಿದರೆ ಅದನ್ನು ನಿಶ್ಚಿತವಾಗಿ ತಡೆಯಬಹುದು.ಎಂ.ಎಸ್.ಕುಲಕರ್ಣಿ, ಕೃಷಿ ಸಹಾಯಕ ನಿರ್ದೇಶಕ, ನರಗುಂದ
ವಿಮಾ ಕಂಪನಿ ಜತೆಗೆ ಚರ್ಚೆ: ಮಳೆಗೆ ಹಾನಿ ಸಂಭವಿಸಿದೆ. ಕೃಷಿ ಇಲಾಖೆಯ ಮಾಹಿತಿ ಆಧರಿಸಿ ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ಮಾಡಲಾಗುವುದು. ಬೆಳೆ ವಿಮೆ ಬಿಡುಗಡೆ ಕುರಿತು ಸಂಬಂಧಿಸಿದ ವಿಮೆ ಕಂಪನಿ ಜೊತೆ ಚರ್ಚಿಸಲಾಗುವುದು. ಬೆಳೆ ವಿಮೆ ಎಲ್ಲ ರೈತರಿಗೆ ತಲುಪದಿರುವುದಕ್ಕೆ ಏಜೆಂಟರ ಹಾವಳಿ ಕಾರಣ ಎನ್ನುವ ರೈತರು ಅಂಥವರ ಪತ್ತೆಗೆ ಸಹಕರಿಸಿದರೆ ನಿಯಂತ್ರಣ ಮಾಡಲಾಗುವುದು.ಶ್ರೀಶೈಲ ತಳವಾರ, ತಹಶೀಲ್ದಾರ್, ನರಗುಂದ
ಬೆಳೆ ವಿಮೆ ಹಣ ಬಂದಿಲ್ಲ: ನಿರಂತರ ಬೆಳೆ ವಿಮೆ ಕಂತು ಪಾವತಿಸಿದರೂ ನಮಗೆ ಬೆಳೆ ವಿಮೆ ಹಣ ಬಂದಿಲ್ಲ. ಕಡಿಮೆ ಬೆಳೆ ಬೆಳೆದಂತಹ ಬೆಳೆಗೆ ಮಾತ್ರ ವಿಮೆ ಸಿಗುತ್ತದೆ. ಇಲ್ಲಿ ಮೋಸ ನಡೆಯುತ್ತಿದೆ. ವಿಮಾ ಕಂಪನಿ ವಿರುದ್ಧ ಹೋರಾಟದ ಅಗತ್ಯವಿದೆ.ಅರ್ಜುನಪ್ಪ ಮಾನೆ, ರೈತ, ನರಗುಂದ
ನನಗ್ಯಾಕೆ ವಿಮೆ ಸಿಕ್ಕಿಲ್ಲ: ಕಳೆದ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೆಲವರಿಗೆ ಕಡಲೆ ಬೆಳೆ ವಿಮೆ ಬಿಡುಗಡೆಯಾಗಿದೆ. ನಾನು ಕಂತು ಪಾವತಿಸಿದರೂ ವಿಮೆ ಬಂದಿಲ್ಲ? ವಿಮಾ ಕಂಪನಿ ನಿಖರ ಬೆಳೆ ಹಾನಿ ಸಮೀಕ್ಷೆ ಮಾಡಿ ಹಣ ನೀಡಬೇಕುರವೀಂದ್ರಗೌಡ ಪಾಟೀಲ, ಬನಹಟ್ಟಿ
ಬೇಸರ ತರಿಸಿದೆ: ಕಳೆದ ಸಾಲಿನ ಮುಂಗಾರು ಹಂಗಾಮಿನ ವಿಮೆ ಬಿಡುಗಡೆಯಾಗಿದೆ. ಆದರೆ ಕೆಲವು ರೈತರಿಗೆ ಮಾತ್ರ ಬಂದಿರುವುದು ಬೇಸರ ತರಿಸಿದೆ. ವಿಮಾ ಕಂಪನಿ ಸಮರ್ಪಕವಾಗಿ ಬೆಳೆ ಹಾನಿ ಸಮೀಕ್ಷೆ ಮಾಡಿ ಬೆಳೆ ವಿಮೆ ಬಿಡುಗಡೆ ಮಾಡಬೇಕುಲಿಂಗನಗೌಡ ಪಾಟೀಲ, ಬೈರನಹಟ್ಟಿ
ರೈತರಿಗೆ ಅನ್ಯಾಯ: ನಿರಂತರ ಮಳೆಯಿಂದ ಕಂಗಾಲಾಗಿದ್ದೇವೆ. ಈಗಷ್ಟೇ ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ವಿಮೆ ಬಿಡುಗಡೆಯಾಗಿದೆ. ಆದರೆ ಏಜೆಂಟ್‌ಗಳ ಮೂಲಕ ಕಂತು ಪಾವತಿ ಮಾಡಿದ ಹಣ ಮಾತ್ರ ಬಿಡುಗಡೆಯಾಗಿದೆ. ನಮಗೇಕೆ ಬಿಡುಗಡೆಯಾಗಿಲ್ಲ. ಇದರಲ್ಲಿ ಏಜೆಂಟರು, ಕಂಪನಿ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿವೆಶರಣಪ್ಪ ನಾಯ್ಕ, ಸಂಕದಾಳ
ಎಕರೆಗೆ ₹50 ಸಾವಿರ ಪರಿಹಾರ ಕೊಡಿ: ಎರಡು ವಾರದ ನಿರಂತರ ಮಳೆಗೆ ಹೆಸರು, ಗೋವಿನಜೋಳ ಸಂಪೂರ್ಣ ಹಾನಿಯಾಗಿದೆ. ಆದ್ದರಿಂದ ವಾಸ್ತವ ಪರಿಸ್ಥಿತಿ ಅರಿತು ಎಕರೆಗೆ ₹50 ಸಾವಿರ ಬೆಳೆ ಹಾನಿ ಪರಿಹಾರ ನೀಡಬೇಕುವಿಠಲ ಜಾಧವ, ರೈತ ಮುಖಂಡ, ನರಗುಂದ
ಟೋಲ್ ಫ್ರೀ ನಂಬರ್ ಸ್ಥಾಪನೆ: ಗದಗ ಜಿಲ್ಲೆಯಲ್ಲಿ ಓರಿಯೆಂಟಲ್ ಬೆಳೆ ವಿಮೆ ಕಂಪನಿ ವಿಮಾ ಕಂತು ಭರಣ ಮಾಡಿಕೊಳ್ಳುತ್ತಿದೆ. ಏಜೆಂಟರ ಹಾವಳಿ ಬಗ್ಗೆ ರೈತರು ದೂರು ನೀಡುತ್ತಿದ್ದಾರೆ. ಅದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ರೈತರು ಅಂಥವರ ಸುಳಿವು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಈ ಸಾಲಿನ ಮುಂಗಾರು ಹಂಗಾಮಿನ ಬೆಳೆಗೆ ವಿಮಾ ಕಂತು ಪಾವತಿಸಿದವರು ಟೋಲ್ ಫ್ರೀ ನಂ 18004256678ಕ್ಕೆ ಕರೆ ಮಾಡಿ ದೂರು ನೀಡಬಹುದುಕರಿಯಪ್ಪ ಹಿರೇಕುರುಬರ, ನರಗುಂದ ತಾಲ್ಲೂಕು ಪ್ರತಿನಿಧಿ, ಓರಿಯೆಂಟಲ್ ಕಂಪನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.