ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಂಬಳ | ಅಳಿವಿನ ಅಂಚಿನಲ್ಲಿದೆ ಐತಿಹಾಸಿಕ ಕೋಟೆ

ಜೀರ್ಣೋದ್ಧಾರಕ್ಕೆ ಕಾಯುತ್ತಿರುವ ಡಂಬಳದ ಸುಂದರ, ಅಬೇಧ್ಯ ಕೊತ್ತಲು
ಲಕ್ಷ್ಮಣ.ಎಚ್.ದೊಡ್ಡಮನಿ
Published 24 ಡಿಸೆಂಬರ್ 2023, 5:49 IST
Last Updated 24 ಡಿಸೆಂಬರ್ 2023, 5:49 IST
ಅಕ್ಷರ ಗಾತ್ರ

ಡಂಬಳ: ಪ್ರಥಮವಾಗಿ ಕನ್ನಡ ನೆಲೆಯಲ್ಲಿ ಕೋಟೆಗಳ ನಿರ್ಮಾಣ ಕಾರ್ಯವು ಕ್ರಿ.ಶ.3ನೇ ಶತಮಾನದಿಂದ 4ನೇ ಶತಮಾನಗಳವರೆಗೆ ಶಾತವಾಹನರಿಂದ ಪ್ರಾರಂಭವಾಗಿದೆ. ರಾಜ್ಯದ ಕೆಲವು ಕೋಟೆಗಳು ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿವೆ.

ಪ್ರಾಚೀನ, ಮಧ್ಯಯುಗ, ಆಧುನಿಕ ಯುಗಗಳಲ್ಲಿ ಯುದ್ಧಕಲೆ ಹಾಗೂ ಯುದ್ಧೋಪಕರಣಗಳು ಬದಲಾದಂತೆ ಅವುಗಳ ವಿನ್ಯಾಸ ಹಾಗೂ ನಿರ್ಮಾಣ ಪದ್ದತಿಯಲ್ಲಿ ಬದಲಾಗಿವೆ. ವೈಭವದ ಬದುಕಿನ ಕಥೆಯನ್ನು ಹೇಳುತ್ತಿದ್ದ ಕೋಟೆಗಳು ಇಂದು ಅಳಿವಿನ ಹಂಚಿನಲ್ಲಿದ್ದು, ಸರ್ಕಾರ ಹಾಗೂ ಪುರಾತತ್ವ ಇಲಾಖೆ ಕೋಟೆಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಸಂರಕ್ಷಣೆ ಮಾಡುವ ಕಾರ್ಯಕ್ಕೆ ಮುಂದಾಗಬೇಕಿದೆ.

ತ್ಯಾಗ, ಭೋಗ, ಬಲಿದಾನದ ವೈಭವದ ಬದುಕಿನ ಕಥೆಯನ್ನು ಹೇಳುತ್ತಿದ್ದ ಕೋಟೆ ಕಟ್ಟಿಸಿದವರು ಕಾಲಗರ್ಭ ಸೇರಿದಂತೆ ಕೋಟೆ ನಿರ್ಮಿಸಿದವರ ಗತಿಯೇ ಕೋಟೆಗಳಿಗೂ ಇಂದು ಬಂದೂದಗಿದೆ. ರಾಜ್ಯದ ಸಂರಕ್ಷಣೆಯ ಸಲುವಾಗಿ ಅಂದಿನ ಯುದ್ಧ ಕೌಶಲಕ್ಕೆ ಅನುಗುಣವಾಗಿ ಶತ್ರುಗಳನ್ನು ಪರಿಣಾಮಕಾರಿಯಾಗಿ ಪ್ರತಿರೋಧಿಸುವುದಕ್ಕಾಗಿ ಕೋಟೆಗಳು ನಿರ್ಮಾಣವದವು.

ಆದರೆ ಇಂದಿನ ಸ್ಥಿತಿ ಗತಿ ಯುದ್ಧ ತಂತ್ರಗಳಲ್ಲಿ ಉಂಟಾದ ಬದಲಾವಣೆಯಿಂದ ಈ ಕೋಟೆಗಳು ಮಹತ್ವ ಕಳೆದುಕೊಂಡು ಕೇವಲ ಸ್ಮಾರಕಗಳಾಗಿ ಉಳಿದಿದೆ. ಕೋಟೆಗಳ ಸಂರಕ್ಷಣೆ ಮಾಡುವುದು ಸರ್ಕಾರ ಆದ್ಯತೆ ಕರ್ತವ್ಯವಾಗಿದ್ದು, ಅವುಗಳ ಜೀರ್ಣೋದ್ದಾರವಾಗಬೇಕು.

‘ಡಂಬಳ ಗ್ರಾಮವನ್ನು ಸುತ್ತುವರೆದಿರುವ ಬೃಹತ್ ಕರಿಕಲ್ಲಿನ ಸುಂದರ ಕೋಟೆಯನ್ನು ಕ್ರಿ.ಶ. 11 ಮತ್ತು 12ನೇ ಶತಮಾನದಲ್ಲಿ ನಿರ್ಮಿಸಿರುವ ಕುರಿತು ಇತಿಹಾಸದ ದಾಖಲೆಗಳಿಂದ ತಿಳಿದುಬರುತ್ತದೆ’ ಎನ್ನುತ್ತಾರೆ ಉಪನ್ಯಾಸಕ ರಮೇಶ ಕೊರ್ಲಹಳ್ಳಿ.

ಕೋಟೆಯ ಬಹುಭಾಗ ಭಗ್ನವಾಗಿದ್ದು, ಉತ್ತರಭಾರತದಲ್ಲಿ ಮಾತ್ರ ಗೋಪುರಗಳು ಉಳಿದುಕೊಂಡಿವೆ. ಕೋಟೆಯ ಸುತ್ತಲು ಆಳವಾದ ಕಂದಕವಿದೆ. ಕೋಟೆಯ ಹಿಂಬಾಗದಲ್ಲಿ ಬೃಹತ್ ಕೆರೆ ನಿರ್ಮಿಸಲಾಗಿದೆ. ಕೆರೆಯ ನೀರು ಕಂದಕಕ್ಕೆ ಹರಿದು ಬರಲು ವ್ಯವಸ್ಥೆ ಮಾಡಲಾಗಿದೆ. ತಾಂಬೋಟಿಯವರ ತೋಟದಲ್ಲಿ ಕೋಟೆಯ ಒಳಗಡೆಯಿಂದ ಹೋಗಲು ಸುಮಾರು ಒಂದು ಕಾಲುವೆ ಅಗಲ ಒಳಮಾರ್ಗವಿದ್ದು, 8 ಕಿ.ಮೀ ದೂರದ ಹಿರೇವಡ್ಡಟ್ಟಿ ಗ್ರಾಮದವರಿಗೆ ಹೋಗಿದೆ ಎನ್ನುವ ಮಾತುಗಳು ಹಿರಿಯರಿಂದ ಕೇಳಿ ಬರುತ್ತವೆ.

ಈಗ ಕೋಟೆ ಅಳಿವಿನ ಅಂಚಿನಲ್ಲಿದ್ದು ಪ್ರಾಚ್ಯ ಇಲಾಖೆಯವರು ಇತ್ತ ಗಮನಹರಿಸಿ ಅಭಿವೃದ್ಧಿಗೆ ಮುಂದಾದರೆ ಇನ್ನೂ ನೂರಾರು ವರ್ಷಗಳ ಕಾಲ ಕೋಟೆ ಬಾಳಬಹುದು. ಇಲ್ಲವಾದರೆ ಕೋಟೆ ಮಾಯವಾಗಿ ಅರಸರು ಸೃಷ್ಟಿಸಿದ ಇತಿಹಾಸ ಸಂಪೂರ್ಣ ಮರೆಯುವಂತಾಗುತ್ತದೆ.

‘ನಮ್ಮ ಪರಂಪರೆಯ ಕೊಂಡಿಗಳು ಕಳಚಿ ಹೋಗುತ್ತವೆ. ಡಂಬಳದಲ್ಲಿ ಕೋಟೆ ಸೇರಿದಂತೆ ಹಲವು ಪ್ರಾಚೀನಕಾಲದ ದೇವಸ್ಥಾನ, ಸ್ಮಾರಕ, ಪ್ರವಾಸಿ ತಾಣಗಳು ಇದ್ದು ಅವುಗಳನ್ನು ಅಭಿವೃದ್ಧಿ ಮಾಡಿ ಅಗತ್ಯಮೂಲ ಸೌಲಭ್ಯ ಮಾಡಿದರೆ ಪ್ರಾಚೀನಕಾಲದ ಇತಿಹಾಸ ಇಂದಿನ ಯುವಸಮೂಹ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಗವಿಸಿದ್ದಪ್ಪ ಬಿಸನಹಳ್ಳಿ ಮತ್ತು ಚಂದ್ರು ಯಳಮಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT