ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಂಗಾಲೇಶ್ವರ ಶ್ರೀಗಳು ಪ್ರತಿಭಟನೆ ಬಿಟ್ಟು ಮಠ ಸುಧಾರಿಸಲಿ: ಸೋಮಣ್ಣ ಮುಳಗುಂದ

Last Updated 22 ಏಪ್ರಿಲ್ 2022, 12:38 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ (ಗದಗ ಜಿಲ್ಲೆ): ‘ದಿಂಗಾಲೇಶ್ವರ ಶ್ರೀಗಳು ಸಚಿವ ಸಿ.ಸಿ. ಪಾಟೀಲ ಅವರ ಮನೆ ಎದುರು ಪ್ರತಿಭಟನೆ ಮಾಡುವುದನ್ನು ಬಿಟ್ಟು ಮಠ ಸುಧಾರಿಸಲು ಮುಂದಾಗಬೇಕು’ ಎಂದು ಲಕ್ಷ್ಮೇಶ್ವರದ ಹಿರಿಯ ಮುಖಂಡ ಸೋಮಣ್ಣ ಮುಳಗುಂದ, ಷಣ್ಮುಖಪ್ಪ ಗೋಡಿ, ಸುರೇಶ ಕುಂದ್ರಳ್ಳಿ, ಬಸವರಾಜ ಅಣ್ಣಿಗೇರಿ, ಮಂಜುನಾಥ ಮುಳಗುಂದ ಆಗ್ರಹಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಿಂಗಾಲೇಶ್ವರ ಶ್ರೀಗಳು ಯಾರನ್ನೋ ತೃಪ್ತಿಪಡಿಸುವ ಸಲುವಾಗಿ ಸರ್ಕಾರ ಮತ್ತು ಸಚಿವರ ವಿರುದ್ಧ ಹೇಳಿಕೆ ನೀಡುತ್ತಿರುವುದು ಸರಿ ಅಲ್ಲ. ಮಠಾಧೀಶರು ಸಮಾಜಮುಖಿ ಕೆಲಸ ಮಾಡುವ ಮೂಲಕ ಸಮಾಜ ಸೇವೆ ಮಾಡಬೇಕು. ಈ ನಿಟ್ಟಿನಲ್ಲಿ ದಿಂಗಾಲೇಶ್ವರ ಶ್ರೀಗಳು ಚಿಂತನೆ ನಡೆಸುವುದು ಉತ್ತಮ’ ಎಂದು ಸಲಹೆ ನೀಡಿದರು.

‘ಸರ್ಕಾರದ ವಿರುದ್ಧ ವಿನಾಕಾರಣ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು. ಕಮಿಷನ್ ಕೊಡುವಾಗಲೇ ಪ್ರತಿಭಟಿಸಬೇಕಿದ್ದ ಶ್ರೀಗಳು ಈಗೇಕೆ ಆ ವಿಷಯವನ್ನು ಪ್ರಸ್ತಾಪಿಸಿದ್ದಾರೋ ಗೊತ್ತಿಲ್ಲ. ಸಾಕಷ್ಟು ಓದಿಕೊಂಡಿರುವ ಶ್ರೀಗಳು ತಮ್ಮ ಜ್ಞಾನವನ್ನು ಸಮಾಜದ ಒಳತಿಗೆ ಬಳಸಿದರೆ ಇನ್ನೂ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಅವರು ತಿಳಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT