ದೇಶದಲ್ಲಿ ಉನ್ನತಮಟ್ಟದ ಗೌರವಯುತ ಹುದ್ದೆ ಎಂದರೆ ಅದು ಶಿಕ್ಷಕ ವೃತ್ತಿ. ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕ ಪಾತ್ರ ಮಹತ್ವದ್ದಾಗಿದೆ
ಡಾ. ಚಂದ್ರು ಲಮಾಣಿ ಶಾಸಕ
ರಾಜ್ಯ ಪುರಸ್ಕೃತ ಶಿಕ್ಷಕ ಬಿ.ಜಿ.ಅಣ್ಣಿಗೇರಿ ಕೂಡ ಉತ್ತಮ ಶಿಕ್ಷಕರಾಗಿದ್ದರು. ಅವರ ಹೆಸರನ್ನು ನಗರದ ಒಂದು ಉದ್ಯಾನಕ್ಕೆ ನಾಮಕರಣ ಮಾಡಲಾಗಿದೆ
ಬಿ.ಬಿ.ಅಸೂಟಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ
ಒಬ್ಬ ಒಳ್ಳೆ ಶಿಕ್ಷಕ ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಶಿಕ್ಷಕರಾದವರು ತಮ್ಮ ಕರ್ತವ್ಯ ಜವಾಬ್ದಾರಿಗಳನ್ನು ಅರಿತು ಪ್ರಾಮಾಣಿಕವಾಗಿ ಪಾಠ ಮಾಡಬೇಕು
ಆರ್.ಎಸ್.ಬುರಡಿ ಡಿಡಿಪಿಐ
‘ಬದಲಾವಣೆಗೆ ತೆರೆದುಕೊಳ್ಳಿ’
‘ಈಗಿನವರು ಆಲ್ಪಾ ಬೀಟಾ ಜನರೇಷನ್‌ನ ಮಕ್ಕಳಾಗಿದ್ದಾರೆ. ಮಕ್ಕಳದ್ದು ಮುದ್ರಣರಹಿತ ಅಭ್ಯಾಸ ಆಗಿದೆ. ಇದಕ್ಕಾಗಿ ನಾವು ಸಹ ಆಧುನೀಕತೆಗೆ ಹೊಂದಿಕೊಳ್ಳಬೇಕು’ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಉಪನಿರ್ದೇಶಕ ಡಾ.ಹರಿಪ್ರಸಾದ್ ಜಿ.ವಿ. ಹೇಳಿದರು. ‘ಇಂದಿನ ಮಕ್ಕಳಿಗೆ ಓದುವುದೆಂದರೆ ಕೇಳಿಸಿಕೊಳ್ಳುವುದು; ಬರೆಯುವುದೆಂದರೆ ಹೇಳುವುದಾಗಿದೆ. ಅದಕ್ಕೆ ತಕ್ಕಂತೆ ಶಿಕ್ಷಕರು ಬದಲಾಗಿ ಮಕ್ಕಳಿಗೆ ಕಲಿಸುವ ಹೊಣೆಗಾರಿಕೆ ನಿಭಾಯಿಸಬೇಕು’ ಎಂದರು.