ಮುಂಡರಗಿ: ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ವೀರಭದ್ರೇಶ್ವರ ಸರ್ಕಾರಿ ಪ್ರೌಡಶಾಲೆಯ ದ್ವಿತಿಯ ದರ್ಜೆ ಸಹಾಯಕ ಸಂತೋಷ ಅಂಗಡಿ ಅವರ ‘ಭವದ ಅಗುಳಿ’ ಚೊಚ್ಚಲ ಕವನ ಸಂಕಲನಕ್ಕೆ ಡಾ.ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ ದೊರೆತಿದ್ದು, ಸಾಹಿತ್ಯಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಶಿರಹಟ್ಟಿ ತಾಲ್ಲೂಕಿನ ರಣತೂರು ಗ್ರಾಮದವರಾದ ಕವಿ ಸಂತೋಷ ಅಂಗಡಿ ಬಿಎಸ್ಸಿ ಪದವೀಧರರಾಗಿದ್ದು, ಬಾಲ್ಯದಲ್ಲಿಯೇ ಕಾವ್ಯಪ್ರಕಾರದ ಬಗ್ಗೆ ಆಸಕ್ತಿ ತಳೆದು ಕವಿತೆ ಬರೆಯಲಾರಂಭಿಸಿದರು. ನಂತರದ ದಿನಗಳಲ್ಲಿ ಅವರು ಕಾವ್ಯಾಧ್ಯಾಯನ ಹಾಗೂ ಕಾವ್ಯ ರಚನೆಯನ್ನು ಗಂಭೀರವಾಗಿ ತಗೆದುಕೊಂಡು ವೈವಿಧ್ಯ ಕವಿತೆಗಳನ್ನು ರಚಿಸಿದರು.

ಸಂತೋಷ ಅವರು ಬರೆದಿರುವ ‘ಭವದ ಅಗುಳಿ’ ಕವನ ಸಂಕಲನವು ‘ಮಾತು ಮೌನದ ಸೆಳಕುಗಳು’, ‘ಬಾರಿಗೆ ಬಂದ ಪದ್ಯ’, ‘ಕಣ್ಣ ಹಾದಿಯ ಕನಸು’, ‘ಬಾ ನೀನು ಮಳೆಯಂತೆ’ ಸೇರಿದಂತೆ 37 ಕವಿತೆಗಳ ಗುಚ್ಛವಾಗಿದೆ. ಪ್ರೀತಿ, ಪ್ರೇಮ, ರಾಗ, ದ್ವೇಷ, ಅಸಹನೆ, ಅಸಹಾಯಕತೆ, ಸಿಟ್ಟು, ಸೆಡವು ಮೊದಲಾದ ಭಾವಗಳು ಕವಿತೆಗಳಲ್ಲಿ ಅಡಗಿವೆ.

ಸಂತೋಷ ಅಂಗಡಿ ಅವರು ಕಾವ್ಯ ರಚನೆಯೊಂದಿಗೆ ನಿರಂತರವಾಗಿ ರಂಗಭೂಮಿಯ ಒಡನಾಟವನ್ನೂ ಹೊಂದಿದ್ದಾರೆ. ಸಾಣೇಹಳ್ಳಿಯ ಶಿವಕುಮಾರ ರಂಗ ಪ್ರಯೋಗ ಶಾಲೆಯಲ್ಲಿ ರಂಗ ಶಿಕ್ಷಣದಲ್ಲಿ ಪದವಿ ಪಡೆದುಕೊಂಡಿದ್ದು, ಶಿವಸಂಚಾರ ನಾಟಕ ತಂಡದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸುಮಾರು 145 ಪ್ರಯೋಗಗಳಲ್ಲಿ ಸಂತೋಷ ಅವರು ಬಣ್ಣ ಹಚ್ಚಿದ್ದಾರೆ. ಹಲವು ನಾಟಕಗಳನ್ನು ನಿರ್ದೇಶಿಸಿ ರಂಗಾಸಕ್ತರ ಗಮನ ಸೆಳೆದಿದ್ದಾರೆ.

ಇಂದು ಪ್ರಶಸ್ತಿ ಪ್ರದಾನ ಹುಬ್ಬಳ್ಳಿಯ ಡಾ.ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆಯು ಸಂತೋಷ ಅವರ ಕಾವ್ಯ ಪ್ರತಿಭೆಯನ್ನು ಕಂಡು 2023-24ನೇ ಸಾಲಿನ ಡಾ.ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ ಘೋಷಿಸಿದೆ. ನ.16ರಂದು ಹುಬ್ಬಳ್ಳಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಪ್ರಶಸ್ತಿಯು ₹10 ಸಾವಿರ ನಗದು ಫಲಕ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.