ಲಕ್ಷ್ಮೇಶ್ವರ: ‘ನ್ಯಾಯಮೂರ್ತಿ ನಾಗಮೋಹನ ದಾಸ ಅವರ ಒಳ ಮೀಸಲಾತಿ ವರದಿ ಅನುಸಾರ ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ನೀಡಲು ಆಗ್ರಹಿಸಿ ಆ. 1ರಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ಬಸ್ ನಿಲ್ದಾಣ ವರೆಗೆ ರಾಜ್ಯ ಸರ್ಕಾರದ ಅಣಕು ಶವ ಯಾತ್ರೆ ನಡೆಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಡಿಎಸ್ಎಸ್ ಸಂಚಾಲಕ ಮುಖಂಡ ಸುರೇಶ ನಂದೆಣ್ಣವರ ಮತ್ತು ಫಕ್ಕೀರೇಶ ಮ್ಯಾಟಣ್ಣವರ ಆಗ್ರಹಿಸಿದರು.

ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಉದ್ಧೇಶಿಸಿ ಅವರು ಮಾತನಾಡಿದ ಅವರು, ‘ಒಳ ಮೀಸಲಾತಿ ಪರ ಮತ್ತು ವಿರೋಧ ವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ವರ್ಗೀಕರಣದ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಕಾರಣ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸದೇ ಒಳಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.

ದೇವಪ್ಪ ನಂದೆಣ್ಣವರ, ನಾಗೇಶ ಅಮರಾಪುರ, ಫಕ್ಕೀರೇಶ ಭಜಕ್ಕನವರ, ರಾಮು ಅಡಗಿಮನಿ, ಕರಿಯಪ್ಪ ಶಿರಹಟ್ಟಿ, ಹನಮಂತ ಹರಿಜನ, ಮನೋಹರ ಕರ್ಜಗಿ, ಜಗದೀಶ ಹುಲಿಗೆಮ್ಮನವರ, ಅಜಯ ಮಕರಬ್ಬಿ, ಅನಿಲ ನಂದೆಣ್ಣವರ, ಎಂ.ಬಿ. ಬಸವನಾಯಕರ, ಹನಮಂತ ದೊಡ್ಡಮನಿ, ಫಕ್ಕೀರೇಶ ಪೂಜಾರ, ರಜು ಕಮತದ, ಮಲ್ಲೇಶ ಮಣ್ಣಮ್ಮನವರ, ಮಲ್ಲೇಶ ಬಸವನಾಯಕರ, ಗುಡ್ಡಪ್ಪ ಮತ್ತೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.