ಮುಂಡರಗಿ: ‘ಉದ್ಯೋಗ, ವೃತ್ತಿ ನಿರ್ವಹಣೆ, ಕುಟುಂಬ ಹೀಗೆ ನೌಕರರು ನಿತ್ಯ ಹಲವಾರು ಒತ್ತಡಗಳನ್ನು ಎದುರಿಸಬೇಕಿದ್ದು, ಬಿಡುವಿನ ವೇಳೆಯಲ್ಲಿ ಅವರಿಗೆ ಅಲ್ಪ ಮನೋರಂಜನೆಯ ಅಗತ್ಯವಿರುತ್ತದೆ. ಈ ಕಾರಣದಿಂದ ನೌಕರರು ಆಗಾಗ ಆಟೋಟಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್.ಸಲಹೆ ನೀಡಿದರು.

ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕವು ಶನಿವಾರ ಪಟ್ಟಣದಲ್ಲಿ ನೌಕರರಿಗಾಗಿ ಹಮ್ಮಿಕೊಂಡಿದ್ದ ಮುಂಡರಗಿ ನೌಕರರ ಕ್ರಿಕೇಟ್ ಪ್ರಿಮೀಯರ್ ಲೀಗ್ ಸೀಸನ್-2 (ಎಂ.ಇ.ಪಿ.ಎಲ್-ಟಿ.10) ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರಿ ನೌಕಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಳ್ಳಾರಿ ಮಾತನಾಡಿ, ನೌಕರರ ಸಂಘದ ತಾಲ್ಲೂಕು ಘಟಕವು ಹಲವಾರು ನೌಕರ ಹಾಗೂ ಜನಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲೆಯ ಇತರ ಘಟಕಗಳಿಗೆ ಇಲ್ಲಿಯ ಸಂಘವು ಮಾದರಿಯಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಮಾತನಾಡಿ, ಎಲ್ಲ ನೌಕರರಲ್ಲಿ ಸೌಹಾರ್ದ ಭಾವ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವು ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯಾವಳಿಯು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಮಾತನಾಡಿ, ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಒಳಗೊಂಡ 10 ತಂಡಗಳು ಡಿ.13ರಿಂದ ಜ.18ರವರೆಗೆ ಪ್ರತಿ ಭಾನುವಾರ ಹಾಗೂ 2ನೇ ಹಾಗೂ 4ನೇ ಶನಿವಾರ ಪಂದ್ಯಗಳನ್ನಾಡಲಿವೆ ಎಂದು ಮಾಹಿತಿ ನೀಡಿದರು.

ಶಂಕರ ಸರ್ವದೆ ಸರ್ವರನ್ನು ಸ್ವಾಗತಿಸಿದರು. ಶರಣು ಕಲಾಲ ಕಾರ್ಯಕ್ರಮ ನಿರೂಪಿಸಿದರು.
ಮಂಜುನಾಥ ಮೇಗಳಮನಿ, ಕೀರ್ತಿಹಾಸ ಎಚ್.ಪಿ, ಶಿವಕುಮಾರ ವಿಭೂತಿ, ರಾಘವೇಂದ್ರ.ಜೆ, ಶಿವಮೂರ್ತಿ ನಾಯ್ಕ, ವಿಜಯಕುಮಾರ ಬೆಣ್ಣಿ, ಮಲ್ಲಿಕಾರ್ಜುನ ಕಲಕಂಬಿ, ಶ್ರೀಧರ ದಾನಿ, ಗೌರವಾಧ್ಯಕ್ಷ ನಾಗೇಂದ್ರ ಪಟ್ಟಣಶೆಟ್ಟಿ, ಎಸ್.ಸಿ.ಹರ್ತಿ, ಜಗದೀಶ.ಎ., ಎಸ್.ಎಸ್.ಮೇಟಿ, ಜಗದೀಶ ಗುಳ್ಳಾರಿ, ಮಹೇಶ ಅಲ್ಲಿಪುರ, ಮುತ್ತಪ್ಪ ಭಜಂತ್ರಿ, ಮೈಲಾರಪ್ಪ ಬೂದಿಹಾಳ, ಮೌಲಾಸಾಬ ಬನ್ನಿಕೊಪ್ಪ, ಹನುಮಂತಪ್ಪ ಹುಡೇದ, ಶ್ರೀಕಾಂತ ಅರಹುಣಸಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.