ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಆವರಣದಲ್ಲಿ ಈರುಳ್ಳಿ ಸುರಿದು ಪ್ರತಿಭಟನೆ

ಪ್ರೋತ್ಸಾಹ ಧನದ ಬದಲು ಕ್ವಿಂಟಲ್‌ಗೆ ₹ 1,000 ಬೆಂಬಲ ಬೆಲೆ ಪ್ರಕಟಿಸಲು ಆಗ್ರಹ
Last Updated 5 ಡಿಸೆಂಬರ್ 2018, 17:20 IST
ಅಕ್ಷರ ಗಾತ್ರ

ಗದಗ: ಈರುಳ್ಳಿ ಬೆಳೆಗೆ ಕ್ವಿಂಟಲ್‌ಗೆ ₹ 1,000ದಿಂದ ₹ 1,500ರವರೆಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಬುಧವಾರ ಇಲ್ಲಿನ ಎಪಿಎಂಸಿ ಆವರಣದ ರಸ್ತೆ ಮೇಲೆ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.

ರೈತರು ಸಾಲ ಮಾಡಿ, ಈರುಳ್ಳಿ ಬೆಳೆದ್ದಾರೆ. ಮಳೆ, ಗಾಳಿ, ಚಳಿ ಎನ್ನದೇ ಹಗಲಿರಳು ಹೊಲದಲ್ಲಿ ದುಡಿದಿದ್ದಾರೆ. ಪ್ರತಿ ಎಕರೆಗೆ ಈರುಳ್ಳಿ ಬೆಳೆಗೆ ಅಂದಾಜು ₹ 30 ಸಾವಿರ ಖರ್ಚು ಮಾಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಬೆಲೆ ನೆಲಕಚ್ಚಿದ್ದು, ಹಾಕಿದ ಬಂಡವಾಳವೂ ಬಾರದಂತಾಗಿದೆ’ ಎಂದು ದೂರಿದರು.

‘ಸರ್ಕಾರ ಈರುಳ್ಳಿಗೆ ಕ್ವಿಂಟಲ್‌ಗೆ 200 ಪ್ರೋತ್ಸಾಹ ಧನ ನಿಗದಿ ಮಾಡಿದೆ. ಇದರ ಬದಲು ನ್ಯಾಯಯುತವಾಗಿ ಬೆಂಬಲ ಬೆಲೆ ಪ್ರಕಟಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವಂತೆ ಪಟ್ಟು ಹಿಡಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಸಂಘಟನೆಯ ಚಂದ್ರಕಾಂತ ಚವ್ಹಾಣ, ಹಾಲಪ್ಪ ವರವಿ, ಗವಿಸಿದ್ದಯ್ಯ ಹಳ್ಳಿಕೆರಿಮಠ, ರಮೇಶ ರಾಠೋಡ, ಸಂಗು ಅಂಗಡಿ, ಈಶ್ವರ ಲಕ್ಷ್ಮೇಶ್ವರ, ನಾಗರಾಜ ಕ್ಷತ್ರೀಯ, ಮುತ್ತು ಮಳವಾಡ, ಪುರುಷೋತ್ತಮ, ರಾಜು, ವಿಠ್ಠಲ ಬೆಂತೂರ, ಮೇಗರಾಜ, ರಾಜು ತಳವಾರ, ಯಲ್ಲಪ್ಪ, ಮಾಹಾಂತೇಶ, ಗಣೇಶ, ಕನಕಪ್ಪ, ಆನಂದ, ಸುರೇಶ, ಶೇಖಪ್ಪ, ಸಚ್ಚಿನ್ ಗೌಡ, ಹನಮಂತ ಗೌಡ, ಮೌನೇಶ ವರವಿ, ಮಲ್ಲಯ್ಯ ನೆಲ್ಲೂರ, ಬಾಲಚಂದ್ರ ಕುರಿ, ರಾಜು ಹೂಲ್ಲೂರ, ಮತ್ತು ಹೂಲ್ಲೂರ, ವಿಕಾಸ ಕ್ಷೀರಸಾಗರ, ಇಮಾಸಾಬ್ ಸೊರಟೂರ, ಜಯನಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT