ಗದಗ: ವ್ಯಾಪಾರ ವಹಿವಾಟಿನ ಲೆಕ್ಕಪತ್ರದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ದಕ್ಷತೆ ಇದ್ದಲ್ಲಿ ಯಶಸ್ವಿ ವ್ಯಾಪಾರಸ್ಥನಾಗಲು ಸಾಧ್ಯ ಎಂದು ಲೆಕ್ಕಪರಿಶೋಧಕ ನರೇಶ್ ಶಹಾ ಹೇಳಿದರು.

ನಗರದ ಕ್ಲಾಥ್ ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆದ ಗದಗ ಜಿಲ್ಲಾ ಕ್ಲಾಥ್ ಮರ್ಚೆಂಟ್ಸ್ ಅಸೋಸಿಯೇಷನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

‘ನಿತ್ಯದ ವ್ಯವಹಾರದ ಜಮಾ ಖರ್ಚು ಸರಿಯಾಗಿದ್ದರೆ ವ್ಯವಹಾರದಲ್ಲಿ ಸ್ಪಷ್ಠತೆ ಬರುವುದು. ಈ ವಿಷಯವಾಗಿ ಕಾಳಜಿ ಅವಶ್ಯಕ. ತೆರಿಗೆ ವಿಷಯಗಳ ಬಗ್ಗೆ ವ್ಯಾಪಾರಸ್ಥರಿಗೆ ಮಾಹಿತಿ ಇರಬೇಕು. ಲೆಕ್ಕಪರಿಶೋಧಕರ ಮಾರ್ಗದರ್ಶನ ಪಡೆದು ಅವರ ಸಲಹೆ ಅನುಸರಿಸಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುರೇಶ ಬನ್ಸಾಲಿ ಮಾತನಾಡಿ, ‘ಸಂಘಟನೆಯ ಏಕತೆ, ವ್ಯಾಪಾರಿಗಳ ಹಿತಾಸಕ್ತಿಗಾಗಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು’ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಸೋಹನ್ರಾಜ್ ಶಹಾ ಹಾಗೂ ಹರೀಶ್ ಜಮತಾನಿ ಅವರನ್ನು ಗೌರವಿಸಲಾಯಿತು.

ಸಂಘದ ಕಾರ್ಯದರ್ಶಿ ಹೀರಾಚಂದ್ ಸೇಮಲಾನಿ, ಖಜಾಂಚಿ ಮಹಾವೀರ ಸೊಲಂಕಿ, ಸಲಹೆಗಾರ ಹರೀಶ್ ಶಹಾ ಹಾಗೂ ಸದಸ್ಯರಾದ ಪೃಥ್ವಿರಾಜ್ ಬನ್ಸಾಲಿ, ಪ್ರವೀಣ ಸಂಕಲೇಚಾ, ಸ್ವರೂಪ್, ರಾಜೇಂದ್ರ ಸಿಂಘ್ವಿ, ಮಹಾವೀರ ಸಂಕಲೇಚಾ, ರಾಜೇಂದ್ರ ಪಾರ್ಲೇಚಾ ಇದ್ದರು. ಕಿಶನ್ ಬಾಗಮಾರ ನಿರೂಪಿಸಿದರು.