ಲಕ್ಷ್ಮೇಶ್ವರ: ಈ ವರ್ಷ ಬಿಟ್ಟೂ ಬಿಡದೆ ಸುರಿದ ಮುಂಗಾರು ಮಳೆ ಹೆಚ್ಚು ಕಡಿಮೆ ಮುಂಗಾರು ಹಂಗಾಮಿನ ಎಲ್ಲ ಬೆಳೆಗಳನ್ನು ಶೇ 80ರಷ್ಟು ಆಹುತಿ ಪಡೆದಿದೆ. ಅದರಲ್ಲೂ ತೋಟಗಾರಿಕೆ ಬೆಳೆಗಳಲ್ಲಿ ಪ್ರಮುಖವಾದ ಬೆಳ್ಳುಳ್ಳಿಯಂತೂ ತೇವಾಂಶ ಹೆಚ್ಚಾಗಿ ಕೊಳೆಯುವ ಸ್ಥಿತಿ ತಲುಪಿದೆ.

ಕಪ್ಪು ಭೂಮಿ ಹೊಂದಿರುವ ತಾಲ್ಲೂಕಿನ ರಾಮಗೇರಿ, ಬಸಾಪುರ, ಮಾಡಳ್ಳಿ, ಯತ್ನಳ್ಳಿ, ಯಳವತ್ತಿ, ಗೋವನಾಳ, ಗೊಜನೂರುಗಳಲ್ಲಿ ಹೆಚ್ಚಾಗಿ ರೈತರು ಬೆಳ್ಳುಳ್ಳಿಯನ್ನು ಬೆಳೆಯುತ್ತಾರೆ. ಅದರಂತೆ ಈ ವರ್ಷ ಕೂಡ ನೂರಾರು ಎಕರೆಯಲ್ಲಿ ಬಿತ್ತನೆ ಆಗಿತ್ತು.

ಆರಂಭದಲ್ಲಿ ಉತ್ತಮ ಮಳೆ ಆಗಿದ್ದರಿಂದ ಬೆಳೆಯೂ ಚೆನ್ನಾಗಿ ಬೆಳೆದಿತ್ತು. ಗಡ್ಡಿ ಕಟ್ಟುವ ಸಮಯದಲ್ಲಿ ಆರಂಭವಾದ ಮಳೆ ಅದು ಕೊಯ್ಲಿಗೆ ಬಂದರೂ ಕೂಡ ಸುರಿಯುತ್ತಲೇ ಇದ್ದು ಬೆಳ್ಳುಳ್ಳಿ ಬೆಳೆದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಮೂರು ತಿಂಗಳಲ್ಲಿ ಕೊಯ್ಲಿಗೆ ಬರುವ ಬೆಳ್ಳುಳ್ಳಿ ಪ್ರಮುಖ ಮಸಾಲೆ ಬೆಳೆ. ಆದರೆ, ಬೆಳ್ಳುಳ್ಳಿಗೆ ಹೆಚ್ಚಿನ ಮಳೆಯ ಅಗತ್ಯ ಇಲ್ಲ. ಸಣ್ಣ ಮಳೆಯಾದರೂ ಸಹ ಚೆನ್ನಾಗಿ ಬೆಳೆಯಬಲ್ಲದು. ಉತ್ತಮ ವಾತಾವರಣ ಇದ್ದರೆ ಎಕರೆಗೆ ಐದರಿಂದ ಆರು ಕ್ವಿಂಟಲ್ನಷ್ಟು ಇಳುವರಿ ಸಿಗುತ್ತದೆ. ಎಕರೆಗೆ ₹30 ಸಾವಿರ ಖರ್ಚು ಬರುತ್ತದೆ. ಕ್ವಿಂಟಲ್ಗೆ ₹10ರಿಂದ ₹12 ಸಾವಿರ ದರ ಸಿಕ್ಕರೆ ಬೆಳೆಗಾರರಿಗೆ ಸ್ವಲ್ಪ ಲಾಭ ಆಗುತ್ತದೆ. ಆದರೆ, ಈ ವರ್ಷದ ಅತಿವೃಷ್ಟಿ ಬೆಳೆಯನ್ನು ಆಪೋಶನ ಪಡೆದಿದೆ.

ಮಳೆ ಕಡಿಮೆ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಬೆಳ್ಳುಳ್ಳಿ ಕಿತ್ತು ಮಾರಾಟ ಆಗಬೇಕಾಗಿತ್ತು. ಆದರೆ ಸತತ ಸುರಿಯುತ್ತಿರುವ ಮಳೆ ಇದಕ್ಕೆ ಅಡ್ಡಿಯಾಗಿದೆ. ಕಾರಣ ರೈತರು ಬೆಳ್ಳುಳ್ಳಿ ಕಿತ್ತು ಕಣದಲ್ಲಿಯೇ ಇಟ್ಟುಕೊಂಡಿದ್ದಾರೆ. ಸ್ವಲ್ಪ ಬಿಸಿಲು ಬಿದ್ದಾಗ ಒಣ ಹಾಕುತ್ತಾರೆ. ಆದರೆ ಅದರ ಹಿಂದೆಯೇ ಮಳೆ ಬರುತ್ತಿದ್ದು ರೈತರಿಗೆ ತಲೆನೋವು ತಂದಿದೆ. ಸತತ ಮಳೆಗೆ ಗಡ್ಡಿ ಕೊಳೆಯುವ ಸ್ಥಿತಿಗೆ ಬಂದಿದ್ದು ಇದರಿಂದಾಗಿ ದರವೂ ಪಾತಾಳಕ್ಕೆ ಕುಸಿದಿದೆ. ಕ್ವಿಂಟಲ್ಗೆ ₹10ರಿಂದ ₹12 ಸಾವಿರಕ್ಕೆ ಮಾರಾಟ ಆಗಬೇಕಾಗಿದ್ದ ಬೆಳ್ಳುಳ್ಳಿ ಈ ವರ್ಷ ₹3ರಿಂದ ₹6 ಸಾವಿರಕ್ಕೆ ಮಾರಾಟ ಆಗುತ್ತಿದೆ.

‘ಈ ವರ್ಷ ಬಳ್ಳೊಳ್ಳಿ ಚಲೋ ಬೆಳದಿತ್ರೀ. ಆದರ ಹತ್ತಿದ ಮಳಿ ಬಿಡವಲ್ದು. ಹಿಂಗಾಗಿ ಗಡ್ಡಿ ಒಣಗವಲ್ದು. ಅಲ್ಲದ ಮಳಿಗೆ ಭಾಳಷ್ಟು ಪೀಕು ಹಾಳಾಗೇತ್ರೀ’ ಎಂದು ರಾಮಗೇರಿ ಗ್ರಾಮದ ಬೆಳ್ಳುಳ್ಳಿ ಬೆಳೆಗಾರರಾದ ಪರಶುರಾಮ ಲಕ್ಕಣ್ಣವರ, ಯಲ್ಲಪ್ಪ ಹುಣಸಿಮರದ, ಉಡಚಪ್ಪ ಯರಗುಪ್ಪಿ, ಗಾಳೆಪ್ಪ ಕಡೇಮನಿ, ರಮೇಶ ಜೋಗಿ, ನಾಗಪ್ಪ ಹುಣಸಿಮರದ, ದೇವಪ್ಪ ಹಿತ್ತಲಮನಿ, ರಮೇಶ ಜುಲ್ಪಿ, ಮುದಕಪ್ಪ ಗೊಂದಿ ನೋವು ತೋಡಿಕೊಂಡರು.

Quote - ಈ ವರ್ಷದ ಅತಿವೃಷ್ಟಿಗೆ ಬೆಳ್ಳುಳ್ಳಿ ಬೆಳೆ ಸಂಪೂರ್ಣ ಹಾಳಾಗಿದೆ. ಕಾರಣ ತೋಟಗಾರಿಕೆ ಇಲಾಖೆ ಬೆಳೆಗಾರರಿಗೆ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಬಸಣ್ಣ ಬೆಟಗೇರಿ ಲಕ್ಷ್ಮೇಶ್ವರ ಎಪಿಎಂಸಿ ಮಾಜಿ ಅಧ್ಯಕ್ಷ ರಾಮಗೇರಿ ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.