ಲಕ್ಷ್ಮೇಶ್ವರ: ನಿರಂತರವಾಗಿ ಸುರಿದ ಮಳೆಗೆ ತಾಲ್ಲೂಕಿನಾದ್ಯಂತ ಬಿತ್ತನೆ ಮಾಡಿದ್ದ ಹೆಸರು ಬೆಳೆ ಹಾಳಾಗಿದೆ. ಮಳೆಗೆ ಸಿಕ್ಕ ಹೆಸರು ಕಾಳು ಹಸಿಯಾಗಿದ್ದು, ಅದನ್ನು ಒಣಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ.

ಐದಾರು ದಿನಗಳ ಹಿಂದೆ ಸ್ವಲ್ಪ ಬಿಡುವು ನೀಡಿದ್ದ ಮಳೆರಾಯನ ಕೃಪೆಯಿಂದಾಗಿ ಕೊಯ್ಲಿಗೆ ಬಂದಿದ್ದ ಹೆಸರು ಕಾಯಿಯನ್ನು ರೈತರು ದೊಡ್ಡ ದೊಡ್ಡ ಯಂತ್ರಗಳ ಸಹಾಯದಿಂದ ಬಿಡಿಸಿ ಬಿಸಿಲಿಗೆ ಒಣ ಹಾಕಿದ್ದರು. ಆದರೆ ಎರಡು ದಿನಗಳಿಂದ ಮತ್ತೆ ಆಗಾಗ ಸುರಿಯುತ್ತಿರುವ ಮಳೆ ಮತ್ತೆ ಆತಂಕ ಮೂಡಿಸಿದ್ದಾನೆ.

ದರ ಕುಸಿತ: ಈಗಾಗಲೇ ಹೊಸ ಹೆಸರುಕಾಳು ಮಾರಾಟಕ್ಕಾಗಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದೆ. ಆದರೆ ಕಾಳು ಸಂಪೂರ್ಣವಾಗಿ ಇನ್ನೂ ಒಣಗಿಲ್ಲ. ಹೆಚ್ಚು ತೇವಾಂಶ ಇರುವುದರಿಂದ ಯೋಗ್ಯ ಬೆಲೆ ಸಿಗುತ್ತಿಲ್ಲ. ಕಳೆದ ವಾರ ₹ 10 ಸಾವಿರಕ್ಕೆ ಮಾರಾಟವಾಗಿತ್ತು. ಆದರೆ ಇದೀಗ ಒಂದೂವರೆ ಈ ವರ್ಷ ಹೆಸರು ಬೆಳೆ ಉತ್ತಮ ಲಾಭ ಕೊಡುತ್ತದೆ ಎಂದು ನಂಬಿದ್ದ ರೈತರು ಬೆಲೆ ಕುಸಿತಕ್ಕೆ ಹೌಹಾರಿದ್ದಾರೆ.

ಈ ಬಾರಿ ತಾಲ್ಲೂಕಿನಲ್ಲಿ ಅಂದಾಜು ಐದು ಸಾವಿರ ಹೆಕ್ಟೇರ್ನಲ್ಲಿ ಹೆಸರು ಬಿತ್ತನೆ ನಡೆದಿತ್ತು. ಉತ್ತಮ ತೇವಾಂಶದಿಂದಾಗಿ ಬೆಳೆಯೂ ಚೆನ್ನಾಗಿ ಬೆಳೆದು ಕಾಯಿ ಕಟ್ಟಿತ್ತು. ಇನ್ನೇನು ಒಂದು ವಾರದಲ್ಲಿ ಕಾಯಿ ಬಿಡಿಸಲು ರೈತರು ಸಿದ್ಧತೆ ನಡೆಸಿದ್ದರು. ಆದರೆ ಅಷ್ಟರಲ್ಲಿ ಮಳೆ ಸುರಿದು ಅವರ ಜಂಘಾಬಲವನ್ನೇ ಉಡುಗಿಸಿ ಬಿಟ್ಟ.

ಕಟಾವಿಗೆ ಬಂದಿದ್ದ ಹೆಸರುಕಾಯಿ ಬಿಡಿಸಲೂ ಸಹ ಮಳೆ ರೈತರಿಗೆ ಅವಕಾಶ ನೀಡಲಿಲ್ಲ. ಇದರಿಂದಾಗಿ ಬಳ್ಳಿಯಲ್ಲಿಯೇ ಹೆಸರುಕಾಳು ಮೊಳಕೆಯೊಡೆಯಲು ಆರಂಭವಾಗಿತ್ತು. ಬಂದಷ್ಟು ಫಸಲನ್ನಾದರೂ ತೆಗೆದುಕೊಳ್ಳುವ ಉದ್ಧೇಶದಿಂದ ರೈತರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಯಂತ್ರಗಳ ಸಹಾಯದಿಂದ ಹೆಸರುಕಾಯಿ ಬಿಡಿಸಿ ಒಕ್ಕಣಿ ಮಾಡಿದ್ದಾರೆ. ಆದರೆ ಮಳೆಯಲ್ಲಿ ಸಿಕ್ಕು ನೆನೆದಿರುವ ಹೆಸರುಕಾಳು ಬೆಲೆಯನ್ನೂ ಕಳೆದುಕೊಂಡಿದೆ.

‘ಈ ವರ್ಷದ ಅತೀವೃಷ್ಟಿಗೆ ಹೆಸರು ಬೆಳೆ ಹಾಳಾಗಿದೆ. ಕಾರಣ ಸರ್ಕಾರ ಕೂಡಲೇ ಬೆಳೆಗಾರರಿಗೆ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಪರಿಹಾರ ನೀಡಬೇಕು’ ಎಂದು ತಾಲ್ಲೂಕು ಕೃಷಿಕ ಸಂಘದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.