ಮಂಗಳವಾರ, ಸೆಪ್ಟೆಂಬರ್ 21, 2021
21 °C

ಡ್ರಗ್ಸ್‌ ಜಾಲ ತುಂಡರಿಸಲು ದಿಟ್ಟ ನಿರ್ಧಾರ ಅಗತ್ಯ: ಶಾಸಕ ಎಚ್‌.ಕೆ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಡ್ರಗ್ಸ್‌ ಜಾಲ ರಾಜ್ಯದಲ್ಲಿ ತುಂಬ ಹಿಂದಿನಿಂದಲೂ ಇದೆ. ಈಗ ಚಿತ್ರರಂಗದವರ ಹೆಸರು ಆಚೆಗೆ ಬಂದಿರುವುದರಿಂದ ಕೇವಲ ಅವರತ್ತ ಮಾತ್ರ ಬೊಟ್ಟು ಮಾಡಿ ತೋರಿಸುವುದಲ್ಲ. ಇದರ ಹಿಂದೆ ರಾಜಕಾರಣಿಗಳು, ರೌಡಿಗಳು, ಅಧಿಕಾರಿಗಳು ಇದ್ದಾರೆ. ಇವರೆಲ್ಲರಿಗೂ ಸರ್ಕಾರಿ ವ್ಯವಸ್ಥೆ ಕೈ ಜೋಡಿಸುತ್ತಿದೆ’ ಎಂದು ಶಾಸಕ ಎಚ್‌.ಕೆ.‍ಪಾಟೀಲ ಆರೋಪ ಮಾಡಿದರು.

ಶನಿವಾರ ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಡ್ರಗ್ಸ್‌ ಜಾಲ ಈ ಮಟ್ಟಕ್ಕೆ ವಿಸ್ತರಿಸಿಕೊಳ್ಳಲು ಮುಖ್ಯ ಕಾರಣ ಸರ್ಕಾರಿ ವ್ಯವಸ್ಥೆ. ಹಾಗಾಗಿ, ಈ ಕೊಂಡಿಯನ್ನು ತುಂಡರಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಗಟ್ಟಿಯಾದ ಕ್ರಮ ಕೈಗೊಳ್ಳಬೇಕು. ಯಾರ ಒತ್ತಡಕ್ಕೂ ಮಣಿಯದೇ ಧೈರ್ಯದಿಂದ ಮುನ್ನಡೆಯಬೇಕು. ನಾವೆಲ್ಲರೂ ಅದಕ್ಕೆ ಕೈ ಜೋಡಿಸುತ್ತೇವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು