ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಸಪ್ತ ಗ್ರಾಮಗಳಲ್ಲಿ ಬಣ್ಣದೋಕುಳಿ ನಿಷಿದ್ಧ!

ಲಕ್ಷ್ಮೀಕನಕನರಸಿಂಹನ ಜಾತ್ರೆ, ಕಲ್ಯಾಣ ಕಾರ್ಯ
Published : 14 ಮಾರ್ಚ್ 2025, 8:06 IST
Last Updated : 14 ಮಾರ್ಚ್ 2025, 8:06 IST
ಫಾಲೋ ಮಾಡಿ
Comments
ದೇವಸ್ಥಾನದಲ್ಲಿರುವ ಉದ್ಭವ ಲಕ್ಷ್ಮಿಕನಕನರಸಿಂಹ ದೇವರು
ದೇವಸ್ಥಾನದಲ್ಲಿರುವ ಉದ್ಭವ ಲಕ್ಷ್ಮಿಕನಕನರಸಿಂಹ ದೇವರು
ಹೋಳಿ ಹುಣ್ಣಿಮೆಯ ಸಮಯದಲ್ಲಿ ಲಕ್ಷ್ಮೀಕನಕನರಸಿಂಹನ ಜಾತ್ರೆ ಜರುಗುತ್ತದೆ. ಹೀಗಾಗಿ 400 ವರ್ಷಗಳಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಏಳು ಗ್ರಾಮಗಳಲ್ಲಿ ಕಾಮದಹನ ಹಾಗೂ ಬಣ್ಣದೋಕುಳಿ ನಿಷೇಧಿಸಲಾಗಿದೆ
ವಿ.ಎಲ್.ನಾಡಗೌಡರ ರಂಗರಾವ್ ವಂಶಸ್ಥರು ಮುಂಡರಗಿ
ಲಕ್ಷ್ಮೀಕನಕನರಸಿಂಹ ರೂಪದಲ್ಲಿ ನೆಲೆ
17ನೇ ಶತಮಾನದಲ್ಲಿ ಪಟ್ಟಣದ ನಾಡಗೌಡರ ಮನೆತನದ ರಂಗರಾವ್ ಎಂಬುವವರು ಹೋಳಿ ಹುಣ್ಣಿಮೆಯಂದು ಕನಕಗಿರಿಯ ಲಕ್ಷ್ಮೀಕನಕನರಸಿಂಹ ದೇವಸ್ಥಾನಕ್ಕೆ ತಪ್ಪದೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡು ಬರುತ್ತಿದ್ದರು. ಒಂದು ಸಾರಿ ಅನಾರೋಗ್ಯದ ಕಾರಣದಿಂದ ರಂಗರಾಯರಿಗೆ ಕನಕಗಿರಿಗೆ ತೆರಳಲಾಗಲಿಲ್ಲ. ಮನಸ್ಸಿಗೆ ನೋವು ಮಾಡಿಕೊಂಡು ಮಲಗಿದಾಗ ಲಕ್ಷ್ಮೀಕನಕನರಸಿಂಹನು ರಂಗರಾಯರ ಕನಸಿನಲ್ಲಿ ಬಂದು ‘ನಾನು ಕನಕಪ್ಪನ ಗುಡ್ಡದಲ್ಲಿ ಸಾಲಿಗ್ರಾಮದ ರೂಪದಲ್ಲಿ ನಿನಗೆ ದರ್ಶನ ನೀಡುತ್ತೇನೆ. ಅಲ್ಲಿ ದೇವಸ್ಥಾನ ನಿರ್ಮಿಸಿ ನಿತ್ಯ ನನ್ನನ್ನು ಪೂಜಿಸು’ ಎಂದು ತಿಳಿಸುತ್ತಾನೆ. ಅಂದು ಅಲ್ಲಿ ಉದ್ಭವಗೊಂಡ ಸಾಲಿಗ್ರಾಮವು ಲಕ್ಷ್ಮೀಕನಕನರಸಿಂಹ ರೂಪದಲ್ಲಿ ನೆಲೆ ನಿಂತಿದ್ದಾನೆ ಎಂಬ ಪ್ರತೀತಿ ಇಲ್ಲಿಯ ಜನರಲ್ಲಿ ಮನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT