ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಣ ವಿಧಾನಸಭಾ ಕ್ಷೇತ್ರ: ಅಸಹಾಯಕರ ನೆರವಿಗೂ ಅನುದಾನ ವಿನಿಯೋಗ

ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆ
Last Updated 6 ಅಕ್ಟೋಬರ್ 2021, 5:46 IST
ಅಕ್ಷರ ಗಾತ್ರ

ಗದಗ/ಗಜೇಂದ್ರಗಡ: ರೋಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ಕಳಕಪ್ಪ ಬಂಡಿ ಅವರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯನ್ನು ಹೆಚ್ಚಾಗಿ ಸಮುದಾಯ ಭವನ ನಿರ್ಮಾಣ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಗಳಿಗೆ ಬಳಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅವರು ವಿವಿಧ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಅದರಲ್ಲಿ ಹೆಚ್ಚಿನ ಪಾಲು ಸಮುದಾಯ ಭವನಗಳ ನಿರ್ಮಾಣಕ್ಕೆ ವಿನಿಯೋಗ ಆಗಿದೆ. 2021–22ನೇ ಸಾಲಿನಲ್ಲಿ ರೋಣ ಮತಕ್ಷೇತ್ರಕ್ಕೆ ಒಳಪಡುವ ರೋಣ, ಗಜೇಂದ್ರಗಡ ಹಾಗೂ ಮುಂಡರಗಿ ತಾಲ್ಲೂಕು ವ್ಯಾಪ್ತಿಯ ಸಹಕಾರ ಸಂಘದ ಕಟ್ಟಡಗಳ ಮುಂದುವರಿದ ಕಾಮಗಾರಿ, ಯಂತ್ರಚಾಲಿತ ತ್ರಿಚಕ್ರ ವಾಹನ, ಶ್ರವಣಯಂತ್ರ ಸಾಧನ, ಮಂದಮತಿ ಮಕ್ಕಳ ವಸತಿಯುತ ವಿಶೇಷ ಶಾಲೆಯ ಕಟ್ಟಡ ಕಾಮಗಾರಿ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನವನ್ನು ವಿನಿಯೋಗಿಸಿದ್ದಾರೆ.

ಶಾಸಕ ಕಳಕಪ್ಪ ಬಂಡಿ ಅವರ ಪ್ರದೇಶಾಭಿವೃದ್ಧಿ ನಿಧಿಗೆ ಈವರೆಗೆ ಅಂದರೆ 2018-19ರಿಂದ 2021-22ರವರೆಗೆ ಒಟ್ಟು ₹5.61 ಕೋಟಿ ಅನುದಾನ ಬಿಡುಗಡೆ ಆಗಿದ್ದು, ಅದರಲ್ಲಿ ರೂ.3.97 ಕೋಟಿ ಖರ್ಚಾಗಿದೆ. ₹1.02 ಕೋಟಿ ಹಣ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ ಇಲಾಖೆಗೆ ಬಿಡುಗಡೆ ಆಗಬೇಕಿದೆ.

ಪ್ರತಿವರ್ಷ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ರೂಪದಲ್ಲಿ ₹2 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತದೆ. ಅದರಂತೆ ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಅವರಿಗೆ 2018-19ನೇ ಸಾಲಿನಲ್ಲಿ ₹1.61 ಕೋಟಿ ಬಿಡುಗಡೆ ಆಗಿದ್ದು, ಅದರಲ್ಲಿ ಅವರು ₹1.53 ಕೋಟಿ ನಿಧಿ ಬಳಕೆ ಮಾಡಿದ್ದಾರೆ.

2019-20ನೇ ಸಾಲಿನಲ್ಲಿ ₹2 ಕೋಟಿ ಅನುದಾನ ಬಿಡುಗಡೆ ಆಗಿದ್ದು, ಆ ಹಣ ಸಂಪೂರ್ಣ ಖರ್ಚಾಗಿದೆ. ಆದರೆ, 2020-21ನೇ ಸಾಲಿನಲ್ಲಿ ಕೋವಿಡ್ ಕಾರಣದಿಂದಾಗಿ ₹1 ಕೋಟಿ ಮಾತ್ರ ಅನುದಾನ ಬಿಡುಗಡೆ ಆಗಿತ್ತು. ಅದರಲ್ಲಿ ₹78 ಲಕ್ಷ ಖರ್ಚಾಗಿದೆ. ₹21 ಲಕ್ಷ ಅನುಷ್ಠಾನಗೊಳಿಸಿದ ಇಲಾಖೆಗೆ ಬಿಡುಗಡೆ ಆಗಬೇಕಿದೆ. 2021-22ನೇ ಸಾಲಿನಲ್ಲಿ ₹1 ಕೋಟಿ ಬಿಡುಗಡೆ ಆಗಿದ್ದು, ಈವರೆಗೆ ₹40 ಲಕ್ಷ ಖರ್ಚಾಗಿದ್ದು, ₹60 ಲಕ್ಷ ಉಳಿದಿದೆ.

ಸಮುದಾಯ ಭವನ ನಿರ್ಮಾಣಗಳ ಜತೆಗೆ ದೇವಸ್ಥಾನ ಜೀರ್ಣೋದ್ಧಾರ, ಶಾಲೆಗಳ ಅಭಿವೃದ್ಧಿ, ಸಿಸಿ ರಸ್ತೆ ಸೇರಿದಂತೆ ಸಂಘ ಸಂಸ್ಥೆಗಳಿಗೆ ಅನುದಾನ ನೀಡಿದ್ದಾರೆ.

ವಾರ್ಷಿಕ ಅನುದಾನ ಬಳಕೆ ಅಂಕಿ ಅಂಶ

ವರ್ಷ;ಬಿಡುಗಡೆ;ಬಳಕೆ;ಇಲಾಖೆಗೆ ಬಿಡುಗಡೆ ಆಗಬೇಕಿರುವ ಅನುದಾನ;ಉಳಿಕೆ

2018–19;₹1.61 ಕೋಟಿ;₹1.53 ಕೋಟಿ;₹6.53 ಲಕ್ಷ;₹1 ಲಕ್ಷ

2019–20;₹2 ಕೋಟಿ;₹1.27 ಕೋಟಿ;₹72.25 ಲಕ್ಷ;0.00

2020–21;₹1 ಕೋಟಿ;₹78.38 ಲಕ್ಷ;₹21.62 ಲಕ್ಷ;0.00

2021–22;₹1 ಕೋಟಿ;₹37 ಲಕ್ಷ;₹3 ಲಕ್ಷ;₹60 ಲಕ್ಷ;

ಅಂಕಿ ಅಂಶ

₹5.61 ಕೋಟಿ-ಕಳೆದ ನಾಲ್ಕು ವರ್ಷಗಳಲ್ಲಿ ಬಿಡುಗಡೆಯಾದ ಒಟ್ಟು ಅನುದಾನ

₹5 ಕೋಟಿ-ವಿವಿಧ ಕಾಮಗಾರಿಗಳಿಗೆ ಹಂಚಿಕೆಯಾದ ಅನುದಾನ

₹61 ಲಕ್ಷ-ಉಳಿಕೆ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT