ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ಪಾದಗಟ್ಟಿಯಿಂದ ಹಳೇ ಬಸ್ ನಿಲ್ದಾಣದವರೆಗಿನ ರಸ್ತೆಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಶ ಶೆಟ್ಟಿ) ಬಣದ ಕಾರ್ಯಕರ್ತರು ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಪಾದಗಟ್ಟಿಯಿಂದ ಹಳೇ ಬಸ್ ನಿಲ್ದಾಣದವರೆಗಿನ ರಸ್ತೆಯನ್ನು ಎಂಟು ವರ್ಷಗಳ ಹಿಂದೆ ಪುರಸಭೆ ವಿಸ್ತರಣೆ ಮಾಡಿತ್ತು. ಆದರೆ ನಂತರ ಹೊಸದಾಗಿ ರಸ್ತೆ ನಿರ್ಮಿಸಿರಲಿಲ್ಲ. ಇದರಿಂದಾಗಿ ಈ ಭಾಗದ ಜನರು ಪ್ರತಿದಿನ ದೂಳಿನ ಸಮಸ್ಯೆಯಿಂದಾಗಿ ರೋಸಿ ಹೋಗಿದ್ದರು. ರಸ್ತೆ ನಿರ್ಮಿಸಬೇಕು ಎಂದು ಅನೇಕ ಬಾರಿ ನಿವಾಸಿಗಳು ಪುರಸಭೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಇದರಿಂದಾಗಿ ಆಕ್ರೋಶಗೊಂಡ ನಿವಾಸಿಗಳು ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗಿದ್ದರು.

ಪ್ರತಿಭಟನೆಕಾರರು ಬಸ್ತಿಬಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಚೆನ್ನಮ್ಮನ ವನಕ್ಕೆ ಹೋಗುವ ರಸ್ತೆ, ಪರ್ವತ ಮಲ್ಲಯ್ಯನ ದೇವಸ್ಥಾನದಿಂದ ವಿದ್ಯಾರಣ್ಯ ವರ್ತುಲಕ್ಕೆ ತೆರಳುವ ಮಾರ್ಗ ಹಾಗೂ ಪುರಸಭೆಯಿಂದ ಬಜಾರಕ್ಕೆ ಬರುವ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಿದ್ದರು. ಎಲ್ಲ ಕಡೆ ರಸ್ತೆ ಸಂಚಾರ ಬಂದ್ ಆಗಿದ್ದರಿಂದ ಸಾರ್ವಜನಿಕರು ಸಾಕಷ್ಟು ಪರದಾಡಿದರು.

ಶಾಸಕ ಡಾ.ಚಂದ್ರು ಲಮಾಣಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕರವೇ ಕಾರ್ಯಕರ್ತರು ಮತ್ತು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಎಂಜಿನಿಯರ್ ವೀರೇಂದ್ರಸಿಂಗ್ ಕಾಟೆವಾಲೆ ಅವರೊಂದಿಗೆ ಚರ್ಚಿಸಿದರು. ಏಳೆಂಟು ವರ್ಷಗಳಿಂದ ರಸ್ತೆ ನಿರ್ಮಿಸದಿರುವುದು ಪುರಸಭೆ ನಿರ್ಲಕ್ಷ್ಯವನ್ನು ತೋರಿಸುತ್ತಿದೆ. ಮೊದಲು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದರು.

‘ಪುರಸಭೆ ಸಾಮಾನ್ಯ ನಿಧಿಯಡಿ ರಸ್ತೆ ನಿರ್ಮಿಸಲು ಎಲ್ಲ ವ್ಯವಸ್ಥೆ ಮಾಡಿದ್ದೇವೆ. ಸದ್ಯ ಲಭ್ಯ ಇರುವ ಅನುದಾನದಲ್ಲಿ ಪಾದಗಟ್ಟಿಯಿಂದ ಪರ್ವತಮಲ್ಲಯ್ಯನ ದೇವಸ್ಥಾನದವರೆಗೆ ಸಿಸಿ ರಸ್ತೆ ನಿರ್ಮಿಸಿ ನಂತರ ಮುಂದಿನ ದಿನಗಳಲ್ಲಿ ಉಳಿದ ರಸ್ತೆ ನಿರ್ಮಿಸಲಾಗುವುದು’ ಎಂದು ಮುಖ್ಯಾಧಿಕಾರ ಮಹಾಂತೇಶ ಬೀಳಗಿ ತಿಳಿಸಿದರು.

ಇದಕ್ಕೆ ಪ್ರತಿಭಟನೆಕಾರರು ಒಪ್ಪದೇ ಪೂರ್ಣ ರಸ್ತೆ ನಿರ್ಮಿಸಬೇಕು ಎಂದು ಪಟ್ಟು ಹಿಡಿದರು. ಆಗ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ಸಮಾಧಾನಪಡಿಸಿ ‘ಈಗ ಇರುವ ಅನುದಾನದಲ್ಲಿ ರಸ್ತೆ ನಿರ್ಮಿಸಲಿ. ಈ ಕಾಮಗಾರಿ ಮುಗಿಯುವುದರೊಳಗಾಗಿ ಉಳಿದ ರಸ್ತೆಯನ್ನೂ ನಿರ್ಮಿಸಲು ಅನುದಾನ ಹೊಂದಿಸೋಣ’ ಎಂದು ತಿಳಿಸಿದರು. ಶಾಸಕರ ಮಾತಿಗೆ ಬೆಲೆ ಕೊಟ್ಟು ಕಾರ್ಯಕರ್ತರು ಪ್ರತಿಭಟನೆ ನಿಲ್ಲಿಸಿದರು.

ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಕಲಘಟಗಿ, ಶಕ್ತಿ ಕತ್ತಿ, ಮಂಜಣ್ಣ ಗಾಂಜಿ, ಅಂಬರೀಶ್ ಗಾಂಜಿ, ಶಿವಾನಂದ ಮೆಕ್ಕಿ, ನಾಗರಾಜ ಬಟಗುರ್ಕಿ, ಬಸವರಾಜ ಕುಂಬಿ, ಆನಂದ ತಟ್ಟಿ, ಆಕಾಶ ಸೌದತ್ತಿ, ಮಲ್ಲನಗೌಡ ಪಾಟೀಲ, ಹಡಗಲಿಮಠ, ಮಂಜುನಾಥ ಗಾಂಜಿ, ಕೊಟ್ರೇಶ ಕತ್ತಿ, ಈಶ್ವರಗೌಡ ಪಾಣಿಗಟ್ಟಿ, ಪ್ರವೀಣ್ ದಶಮನಿ, ಶ್ರೇಯಾಂಕ ಹಿರೇಮಠ, ಭರಮಣ್ಣ ಗೌಳಿ, ಪವನ್ ಹಗ್ರದ, ಹನುಮಂತ ಕುಂಬಾರ, ಅಭಿಷೇಕ್ ಗೋಂಗಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.