ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ | ಆಸನ ವ್ಯವಸ್ಥೆ ಇಲ್ಲದೆ ಪರದಾಟ

ತಹಶೀಲ್ದಾರ್‌ ಕಚೇರಿ; ನೆಲದ ಮೇಲೆ ಕುಳಿತುಕೊಳ್ಳಬೇಕಾದ ದುಃಸ್ಥಿತಿ
Published 8 ಜೂನ್ 2024, 6:20 IST
Last Updated 8 ಜೂನ್ 2024, 6:20 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲದೆ, ಜನರಿಗೆ ತೊಂದರೆಯಾಗುತ್ತಿದೆ.

ಉತಾರ, ಜಾತಿ, ಆದಾಯ, ಪಹಣಿ, ಆಧಾರ ಕಾರ್ಡ್ ತಿದ್ದುಪಡಿ ಸೇರಿದಂತೆ ಹಲವಾರು ಕೆಲಸಗಳಿಗಾಗಿ ನಿತ್ಯ ನೂರಾರು ಜನರು ತಹಶೀಲ್ದಾರ್‌ ಕಚೇರಿಗೆ ಬರುತ್ತಾರೆ. ಹೆಚ್ಚು ಜನರು ಬಂದಾಗ ಸರದಿಯಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. ಅವರು ಕುಳಿತುಕೊಳ್ಳಲು ಕಚೇರಿ ಆವರಣದಲ್ಲಿ ಆಸನಗಳ ವ್ಯವಸ್ಥೆಯನ್ನೇ ಮಾಡಿಲ್ಲ.

ವೃದ್ಧರು, ಮಹಿಳೆಯರು, ಮಕ್ಕಳು ಕಚೇರಿಗೆ ಭೇಟಿ ನೀಡುತ್ತಾರೆ. ತಕ್ಷಣಕ್ಕೆ ಯಾವುದೇ ಕೆಲಸ ಮುಗಿಯುವುದಿಲ್ಲ. ಇಂಥ ಸಮಯದಲ್ಲಿ ಅವರು ಕುಳಿತುಕೊಳ್ಳಲು ಆಸನಗಳಿದ್ದು ತೀವ್ರ ಸಮಸ್ಯೆಗೆ ಕಾರಣವಾಗುತ್ತಿದೆ. ಹೆಚ್ಚು ಕಾಲ ನಿಲ್ಲಲು ಆಗದವರು ನೆಲದ ಮೇಲೆಯೇ ಕುಳಿತುಕೊಳ್ಳಬೇಕಿದೆ.

‘ತಹಶೀಲ್ದಾರ್‌ ಕಚೇರಿಗೆ ಬಂದರೆ ಗಂಟೆಗಟ್ಟಲೆ ನಿಂತು ಸುಸ್ತಾಗುತ್ತೇವೆ. ಕುಳಿತುಕೊಳ್ಳಲು ಒಂದೂ ಆಸನ ಇಲ್ಲ.  ಆಸನಗಳ ವ್ಯವಸ್ಥೆ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ’ ಎಂದು ಮಕ್ಕಳ ಸಾಹಿತಿ ಪೂರ್ಣಾಜಿ ಖರಾಟೆ ಹೇಳಿದರು.

‘ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗಳ ಜನರು ವಿವಿಧ ಕೆಲಸಗಳಿಗೆ ಈ ಕಚೇರಿಗೆ ಬರಬೇಕು. ಆಸನ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಲಕ್ಷ್ಮೇಶ್ವರ ವಕೀಲರ ಸಂಘದ ಅಧ್ಯಕ್ಷ  ಬಿ.ಎಸ್. ಬಾಳೇಶ್ವರಮಠ ಹಾಗೂ ರಾಮಗೇರಿ ಗ್ರಾಮದ ನಿವಾಸಿ ಸೋಮಣ್ಣ ಬೆಟಗೇರಿ ಆಗ್ರಹಿಸಿದರು.

ಕಚೇರಿ ಆವರಣದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಆದಷ್ಟು ಬೇಗ ಆಸನಗಳ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗುವುದು
ವಾಸುದೇವ ಸ್ವಾಮಿ ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT