ಕನ್ನಡ ಉಸಿರಾಗಲಿ: ಪ್ರೊ. ಸುಧಾ
‘ಕನ್ನಡ ನಾಡು ಕನ್ನಡ ಭಾಷೆಗೆ ತನ್ನದೇ ಆದ ಘನತೆ ಇದೆ. ಜತೆಗೆ 2000 ವರ್ಷಗಳ ಇತಿಹಾಸ ಹೊಂದಿದೆ’ ಎಂದು ಪ್ರೊ. ಸುಧಾ ಕೌಜಗೇರಿ ಹೇಳಿದರು. ‘ಕನ್ನಡ ಕನ್ನಡಿಗ ಕರ್ನಾಟಕತ್ವ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ‘ಕನ್ನಡ ನಾಡಿಗೆ ಬಂದ ಕರ್ನಾಟಕ ಎಂಬ ಹೆಸರು ಇಂದು ಉಸಿರಾಗಬೇಕಿದೆ. ಕನ್ನಡದ ಜ್ಞಾನ ಸಂಪತ್ತು ಶಬ್ದ ಸಂಪತ್ತು ಬೆಳೆಯಬೇಕು. ಇದು ಸಾಧ್ಯವಾಗಬೇಕಾದರೆ ಕೇವಲ ಶಿಕ್ಷಕರು ಸಾಹಿತಿಗಳಷ್ಟೇ ಕನ್ನಡದಲ್ಲಿ ಬರೆದರೆ ಸಾಲದು. ವೈದ್ಯರು ವಕೀಲರು ವಿಜ್ಞಾನಿಗಳು ಹೀಗೆ ಸಮಾಜದ ವಿವಿಧ ವರ್ಗಗಳು ಕನ್ನಡವನ್ನು ಬಳಸಬೇಕು ಕನ್ನಡದಲ್ಲಿಯೇ ಬರೆಯಬೇಕು ಮತ್ತು ವ್ಯವಹರಿಸಬೇಕು’ ಎಂದು ಹೇಳಿದರು. ‘ಕನ್ನಡ ಚೈತನ್ಯವುಳ್ಳ ಭಾಷೆ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನವನ್ನು ಹೇಳಲಿಕ್ಕೆ ಬರುವುದಿಲ್ಲ ಎನ್ನುವ ಪೂರ್ವ ನಿರ್ಧರಿತ ಅಭಿಪ್ರಾಯದಿಂದ ಹೊರಬರಬೇಕು’ ಎಂದರು.