ಲಕ್ಷ್ಮೇಶ್ವರ: ತಾಲ್ಲೂಕು ಕೇಂದ್ರ ಅಂದ ಮೇಲೆ ಸರ್ಕಾರದ ಎಲ್ಲ ಇಲಾಖೆಗಳು ಅಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಆದರೆ, ಲಕ್ಷ್ಮೇಶ್ವರ ಹೆಸರಿಗಷ್ಟೇ ತಾಲ್ಲೂಕು ಕೇಂದ್ರವಾಗಿದ್ದು, ಇಲ್ಲಿ ಸರ್ಕಾರಿ ಕಚೇರಿಗಳು ಇನ್ನೂ ಆರಂಭವಾಗಿಲ್ಲ. ಇದರಿಂದಾಗಿ ಕಚೇರಿ ಕೆಲಸ ಕಾರ್ಯಗಳಿಗಾಗಿ ಲಕ್ಷ್ಮೇಶ್ವರ ತಾಲ್ಲೂಕಿನ ಜನತೆ ಶಿರಹಟ್ಟಿ ತಾಲ್ಲೂಕು ಕಚೇರಿಗೆ ಅಲೆಯುವುದು ಮಾತ್ರ ತಪ್ಪಿಲ್ಲ. ಇದು ಏಳು ವರ್ಷಗಳ ಹಿಂದೆ ಹೊಸ ತಾಲ್ಲೂಕಾಗಿ ಘೋಷಣೆಯಾದ ಲಕ್ಷ್ಮೇಶ್ವರದ ಸದ್ಯದ ಪರಿಸ್ಥಿತಿಯಾಗಿದೆ.

ಲಕ್ಷ್ಮೇಶ್ವರ ನೂತನ ತಾಲ್ಲೂಕು ವ್ಯಾಪ್ತಿಗೆ ಹದಿನಾಲ್ಕು ಗ್ರಾಮ ಪಂಚಾಯಿತಿಗಳು, ಒಂಬತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಮತ್ತು ಮೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಒಳಪಡುತ್ತವೆ. ಇನ್ನು ಮಾಡಳ್ಳಿ, ಬಾಲೆಹೊಸೂರು, ಗೋವನಾಳ, ಬಸಾಪುರ, ಶೆಟ್ಟಿಕೇರಿಗಳು ಲಕ್ಷ್ಮೇಶ್ವರ ತಾಲ್ಲೂಕಿನ ಕೊನೆ ಗ್ರಾಮಗಳಾಗಿವೆ.

ಲಕ್ಷ್ಮೇಶ್ವರ ಹೊಸ ತಾಲ್ಲೂಕಾಗಿ ಘೋಷಣೆ ಮಾಡಬೇಕು ಎಂದು ತಾಲ್ಲೂಕು ಹೋರಾಟ ಸಮಿತಿ ರಚಿಸಿಕೊಂಡು ಮುಖಂಡರು ಹೋರಾಟ ನಡೆಸಿದ್ದರು. ಅವರೆಲ್ಲರ ಹೋರಾಟದ ಫಲವಾಗಿ 2018ರ ಜ.24ರಂದು ನೂತನ ತಾಲ್ಲೂಕಾಗಿ ಅಧಿಕೃತವಾಗಿ ಘೋಷಣೆಯಾಗಿ, ವಿಜಯೋತ್ಸವ ಕೂಡ ಆಚರಿಸಲಾಗಿತ್ತು. ಆದರೆ, ತಾಲ್ಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸಬೇಕಾದ ಅಷ್ಟೂ ಕಚೇರಿಗಳು ಮಾತ್ರ ಇಂದಿಗೂ ಆರಂಭವಾಗಿಯೇ ಇಲ್ಲ. ಹೀಗಾಗಿ ಕಚೇರಿ ಕೆಲಸಕ್ಕಾಗಿ ತಾಲ್ಲೂಕಿನ ಜನತೆ ಇನ್ನೂ ಶಿರಹಟ್ಟಿ ತಾಲ್ಲೂಕಿನ ಕಚೇರಿಗಳಿಗೆ ಅಲೆಯುತ್ತಲೇ ಇದ್ದಾರೆ.

ಸದ್ಯ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ತಹಶೀಲ್ದಾರ್ ಕಚೇರಿ, ನ್ಯಾಯಾಂಗ ಇಲಾಖೆ, ತಾಲ್ಲೂಕು ಪಂಚಾಯಿತಿ ಮತ್ತು ನೋಂದಣಿ ಇಲಾಖೆ ಕಚೇರಿಗಳನ್ನು ಹೊರತುಪಡಿಸಿದರೆ ಉಳಿದ ಇಲಾಖೆಗಳು ಆರಂಭವಾಗಿಲ್ಲ. ಇವುಗಳಲ್ಲಿ ತಹಶೀಲ್ದಾರ್ ಕಚೇರಿ ಒಂದನ್ನು ಬಿಟ್ಟು ಉಳಿದ ಎರಡೂ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಜನಸಂಖ್ಯೆ, ಭೌಗೋಳಿಕ ಹಾಗೂ ಸಾಗುವಳಿ ಕ್ಷೇತ್ರಗಳನ್ನು ಪರಿಗಣಿಸಿದಾಗ ಲಕ್ಷ್ಮೇಶ್ವರ ತಾಲ್ಲೂಕು ಸಾಕಷ್ಟು ದೊಡ್ಡದಿದೆ. ಆದರೂ ಎಲ್ಲ ಸರ್ಕಾರಿ ಕಚೇರಿಗಳು ಬಂದಿಲ್ಲ. ತಾಲ್ಲೂಕು ಕೇಂದ್ರಕ್ಕಾಗಿ ಹೋರಾಟ ಮಾಡಿದ ತಾಲ್ಲೂಕು ಹೋರಾಟ ಸಮಿತಿ ಕೂಡ ನಂತರದ ದಿನಗಳಲ್ಲಿ ನಿಷ್ಕ್ರಿಯಗೊಂಡಿದ್ದು ಈವರೆಗೆ ಕಚೇರಿಗಳ ಆರಂಭಕ್ಕೆ ಯಾವುದೇ ಹೋರಾಟ ನಡೆಸಿಲ್ಲ. ಹೀಗಾಗಿ ಸರ್ಕಾರ ಸಹ ಕಚೇರಿಗಳನ್ನು ತೆರೆಯಲು ಮುಂದಾಗಿಲ್ಲ.

ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಶಿಕ್ಷಣಾಧಿಕಾರಿಗಳ ಕಚೇರಿ, ಕಾರ್ಮಿಕ ಇಲಾಖೆ, ಪೊಲೀಸ್ ಠಾಣೆ, ಸಮಾಜ ಕಲ್ಯಾಣ ಇಲಾಖೆಗಳು, ಅರಣ್ಯ ಇಲಾಖೆ ಕಚೇರಿ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸೇರಿದಂತೆ 27 ಸರ್ಕಾರಿ ಕಚೇರಿಗಳು ಹೊಸ ತಾಲ್ಲೂಕಿಗೆ ಬರಬೇಕಿದೆ. ಅದರೊಂದಿಗೆ ಪ್ರತಿದಿನ ಐದು ನೂರು ರೋಗಿಗಳು ಭೇಟಿ ನೀಡುವ ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯನ್ನಾಗಿ ತುರ್ತಾಗಿ ಮೇಲ್ದರ್ಜೆಗೇರಿಸಬೇಕಾದ ಅಗತ್ಯ ಇದೆ. ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸುಮಾರು ಹತ್ತು ವಸತಿನಿಲಯಗಳು ಇದ್ದು, ಅವುಗಳ ಕಚೇರಿ ಇಲ್ಲದ ಕಾರಣ ಸುಗಮ ಆಡಳಿತಕ್ಕೆ ಅಡೆತಡೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೇಶ್ವರ ತಾಲ್ಲೂಕು ವ್ಯಾಪ್ತಿಯಲ್ಲಿ 135ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಇವೆ. ಆದರೆ ಕಚೇರಿಯ ಯಾವುದೇ ಸಣ್ಣ ಕೆಲಸ ಇದ್ದರೂ ಕೂಡ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶಿರಹಟ್ಟಿ ಬಿಇಒ ಕಚೇರಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಇಲಾಖೆಯ ಕೆಲಸಗಳಿಗೆ ಹಿನ್ನಡೆ ಉಂಟಾಗುತ್ತಿದೆ.

ಹೊಸ ತಾಲ್ಲೂಕು ಘೋಷಣೆ ಮಾಡುವುದರ ಜತೆಗೆ ಸರ್ಕಾರ ಹೊಸ ತಾಲ್ಲೂಕುಗಳ ಅಭಿವೃದ್ಧಿಗೆ ಬೇಕಿರುವ ಅನುದಾನ ಹಾಗೂ ಸೌಲಭ್ಯಗಳನ್ನು ಕಲ್ಪಿಸಬೇಕು. ಒಂದು ತಾಲ್ಲೂಕು ಕೇಂದ್ರದಲ್ಲಿ ಇರಬೇಕಾದ ಎಲ್ಲ ಕಚೇರಿಗಳನ್ನೂ ಆರಂಭಿಸಬೇಕು. ಇಲ್ಲವಾದರೆ, ಹೆಸರಿಗಷ್ಟೇ ತಾಲ್ಲೂಕು ಅನ್ನಿಸಿಕೊಳ್ಳುವುದರ ಜತೆಗೆ, ಜನರು ಪ್ರತಿಯೊಂದು ಕೆಲಸಕ್ಕೂ ಹಳೆ ತಾಲ್ಲೂಕನ್ನೇ ಆಶ್ರಯಿಸಬೇಕಾದ ಅನಿರ್ವಾಯತೆ ಮುಂದುವರಿಯುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಲಕ್ಷ್ಮೇಶ್ವರದಲ್ಲಿ ಈಗಾಗಲೇ ಪ್ರಜಾಸೌಧ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದ್ದು ಇದರಿಂದ ಕಂದಾಯ ಇಲಾಖೆಗೆ ಅನುಕೂಲ ಆಗಲಿದೆ. ಉಳಿದ ಇಲಾಖೆಗಳನ್ನು ಆರಂಭಿಸಬೇಕು ಎಂದು ಈ ಬಾರಿಯ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ
ಡಾ.ಚಂದ್ರು ಲಮಾಣಿ ಶಾಸಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.