ಗದಗ: ‘ಇತ್ತೀಚೆಗೆ ಮಹಾರಾಷ್ಟ್ರದ ಜತ್ತ್ ತಾಲ್ಲೂಕಿನ ಬೀಳೂರ ಗ್ರಾಮದ ಸಮಾರಂಭದಲ್ಲಿ ಕನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧಿಪತಿಗಳನ್ನು ಅಸಾಂವಿಧಾನಿಕ ಪದಗಳಲ್ಲಿ ನಿಂದಿಸಿರುವುದು ಖಂಡನಾರ್ಹ’ ಎಂದು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಸಿದ್ಧರಾಮ ಸ್ವಾಮೀಜಿ ತಿಳಿಸಿದ್ದಾರೆ.

‘ಲಿಂಗಾಯತ ಧರ್ಮ ಹಾಗೂ ಬಸವಾದಿ ಶರಣ ಪರಂಪರೆಯ ಬಗ್ಗೆ ಅಸಮಾಧಾನ ಹಾಗೂ ಪೂರ್ವಾಗ್ರಹ ಹೊಂದಿರುವ ಅವರ ಮಾತುಗಳು ಕರ್ಣಕಠೋರವಾಗಿರುವುದಷ್ಟೇ ಅಲ್ಲ ಅವರು ತಾವೊಬ್ಬ ಅನಾಗರಿಕ ವ್ಯಕ್ತಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಜನಸಾಮಾನ್ಯರೂ ಕೂಡ ಬಳಸಲು ಹಿಂದೇಟು ಹಾಕುವ ಕೀಳು ಪದಗಳನ್ನು ಬಳಸಿದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು ತಾವೂ ಒಬ್ಬ ಮಠಾಧಿಪತಿ ಎಂಬುದನ್ನು ಮರೆತು ಎಲ್ಲ ಮಠಾಧಿಪತಿಗಳ ತಾಯಂದಿರನ್ನು ಆಕ್ಷೇಪಾರ್ಹ ಪದ ಬಳಕೆ ಮಾಡಿ ನಿಂದಿಸುವ ಮೂಲಕ ಸಮಸ್ತ ಸ್ತ್ರೀ ಸಂಕುಲಕ್ಕೆ ಅಪಮಾನವೆಸಗಿದ್ದಾರೆ. ಮಠಾಧಿಪತಿಗಳನ್ನು ‘....’ನಿಂದ ಹೊಡೆಯಬೇಕು ಎಂದು ಹೇಳುವ ಇವರ ಮಾತುಗಳು ಭಾರತೀಯ ಸಂಸ್ಕೃತಿಗೆ ಕಳಂಕ. ನಾಲಿಗೆ ಕುಲವನ್ನು ಹೇಳಿತು ಎಂಬಂತಿದೆ ಇವರ ನಡವಳಿಕೆ. ಸಮಾಜದಲ್ಲಿ ಅಶಾಂತಿ, ದೊಂಬೆ, ಗಲಭೆಯನ್ನುಂಟು ಮಾಡುವ ಇಂತಹ ವ್ಯಕ್ತಿಗಳ ನಡವಳಿಕೆಗೆ ಸರ್ಕಾರ ಪ್ರತಿಬಂಧ ವಿಧಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.