ಲಕ್ಷ್ಮೇಶ್ವರ: ಪಟ್ಟಣದಲ್ಲಿ 'ಮದ್ರಾಸ್ ಐ' ರೋಗ ಕಾಣಿಸಿಕೊಂಡಿದೆ. ಈಗಾಗಲೇ ಬಹಳಷ್ಟು ಜನರಿಗೆ ಈ ರೋಗ ಬಂದ ಬಗ್ಗೆ ವರದಿಯಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಕಾಂತ ಕಾಟೆವಾಲೆ ಅವರ ಸೂಚನೆ ಮೇರೆಗೆ ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕ ಬಿ.ಎಸ್.ಹಿರೇಮಠ ಬುಧವಾರ ಪಟ್ಟಣದ ಕೆಲ ಶಾಲೆ ಮತ್ತು ಓಣಿಗಳಿಗೆ ಭೇಟಿ ನೀಡಿ ಮದ್ರಾಸ್ ಐ ಕುರಿತು ಮಾಹಿತಿ ನೀಡಿದರು.
'ಮದ್ರಾಸ್ ಐ' ವೈರಾಣುವಿನಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಗುಲಾಬಿ ಕಣ್ಣಿನ ರೋಗ ಎಂದೂ ಕರೆಯುತ್ತಾರೆ. ಇದು ತೀವ್ರ ಅಪಾಯಕರ ಅಲ್ಲದಿದ್ದರೂ ಕೂಡ ನಿರ್ಲಕ್ಷ್ಯ ಮಾಡಬಾರದು. ರೋಗಪೀಡಿತ ಕಣ್ಣಿನಿಂದ ಆಗಾಗ ದ್ರವ ಬರುತ್ತದೆ. ಕೆಲವರಲ್ಲಿ ಪಿಚ್ಚು ಬರುತ್ತದೆ. ಕಣ್ಣು ಚುಚ್ವುವುದರೊಂಗೆ ಸ್ವಲ್ಪ ನೋವೂ ಇರುವುದು. ಈ ರೋಗದ ಲಕ್ಷಣ. ಇದೊಂದು ಸಾಂಕ್ರಾಮಿಕ ರೋಗ. ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡಬಲ್ಲದು.
ಸೋಂಕಿತರು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಕಣ್ಣುಗಳನ್ನು ಉಜ್ಜುವುದು, ಕೆರೆದುಕೊಳ್ಳುವುದನ್ನು ಮಾಡಬಾರದು. ಕಣ್ಣುಗಳ ಮೇಲೆ ತಣ್ಣನೆಯ ಬಟ್ಟೆ ಅಥವಾ ಸೌತೆಕಾಯಿ ತುಂಡುಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು’ ಎಂದು ಬಿ.ಎಸ್.ಹಿರೇಮಠರು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.