ರೈತರನ್ನು ವಂಚಿಸುತ್ತಿರುವ ಕೇಂದ್ರ ರಾಜ್ಯ ಸರ್ಕಾರಗಳು
ಕಳಸಾ ಬಂಡೂರಿ ಯೋಜನೆ ಅನುಷ್ಠಾನ ರಾಜ್ಯ ಸರ್ಕಾರವೇ ಮಾಡಬಹುದಾದ ಯೋಜನೆ. ಈಗಾಗಲೇ ಕಳಸಾ ನಾಲೆ ಕಾಮಗಾರಿ 4 ಕಿ.ಮೀ. ಮಾತ್ರ ಇದೆ. ಅದನ್ನು ಪೂರ್ಣಗೊಳಿಸಿದರೆ ನಮಗೆ 1 ಟಿಎಂಸಿ ಅಡಿ ನೀರು ಹರಿದು ಬರುತ್ತದೆ. ಬಂಡೂರಿ ಕಾಮಗಾರಿಗೆ ಟೆಂಡರ್ ಕರೆದರೆ ಯೋಜನೆ ಸಂಪೂರ್ಣ ಸಾಕಾರಗೊಳ್ಳುತ್ತದೆ. ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆರೋಪ ಪ್ರತ್ಯಾರೋಪ ಮಾಡುತ್ತ ರೈತರನ್ನು ವಂಚಿಸುತ್ತಿವೆ. –ವಿಜಯ ಕುಲಕರ್ಣಿ ಕಳಸಾ ಬಂಡೂರಿ ಸಮಿತಿ ಸಂಸ್ಥಾಪಕ ಅಧ್ಯಕ್ಷ