ಸೌಲಭ್ಯ ಒದಗಿಸಲು ಕ್ರಮ ಗ್ರಾಮೀಣ ಬಸ್ ನಿಲ್ದಾಣದ ಆವರಣವನ್ನು ಕಾಂಕ್ರೀಟಿಕರಣ ಮಾಡಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಬಸ್ ನಿಲ್ದಾಣದ ಸ್ವಚ್ಛತೆ ಕಾಪಾಡಲು ನಿತ್ಯ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಬಹರ್ದೆಸೆ ತಪ್ಪಿಸಲು ಸ್ವಚ್ಛತೆ ಕಾಪಾಡಲು ಪುರಸಭೆ ಮೂಲಕ ಸ್ವಚ್ಛ ಭಾರತ ಮಿಷನ್ ಅಡಿ ಸುಮಾರು ₹27 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ಮೂತ್ರಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬೈಕ್ ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.–ಪರುಶರಾಮ ಪ್ರಭಾಕರ ವ್ಯವಸ್ಥಾಪಕರು ಕೆಎಸ್ಆರ್‌ಟಿಸಿ ನರಗುಂದ
ಆಂತರಿಕ ಭದ್ರತೆ ಹೆಚ್ಚಿಸಲು ಕ್ರಮ ಕಳ್ಳತನ ಪ್ರಕರಣಗಳು ಹೆಚ್ಚದಂತೆ ಕ್ರಮ ವಹಿಸಲಾಗುವುದು. ಇದಕ್ಕೆ ಪೊಲೀಸ್ ಇಲಾಖೆ ಸಹಾಯ ಅಗತ್ಯವಿದೆ. ನಿತ್ಯ 730ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಪ್ರಯಾಣಿಕರ ಸುರಕ್ಷತೆಗೆ ಆಂತರಿಕ ಭದ್ರತೆ ಹೆಚ್ಚಿಸುವುದರೊಂದಿಗೆ ಹೆಚ್ಚು ಪೊಲೀಸರನ್ನು ನಿಯೋಜಿಸಲು ಪೊಲೀಸ್ ಠಾಣೆಗೆ ಮನವಿ ಮಾಡಲಾಗುವುದು.– ವಿ.ಬಿ.ಕರಿಸಕ್ರಣ್ಣವರ ನಿಯಂತ್ರಕರು ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ನರಗುಂದ
ನರಗುಂದ ಬಸ್ ನಿಲ್ದಾಣಕ್ಕೆ ಪೊಲೀಸ್ ರಕ್ಷಣೆ ನಿರಂತರವಾಗಿ ಸಿಗುವಂತಾಗಬೇಕು. ಬೆಳಿಗ್ಗೆ 8ರಿಂದ ರಾತ್ರಿ 10 ಗಂಟೆಯವರೆಗೆ ಒಬ್ಬ ಪುರುಷ ಹಾಗೂ ಒಬ್ಬ ಮಹಿಳಾ ಪೊಲೀಸರು ಇರಬೇಕು. ಪೊಲೀಸ್ ಚೌಕಿ ನಿರ್ಮಾಣಗೊಳ್ಳಬೇಕು.–ಕೃಷ್ಣ ಮಹಾಲಿನಮನಿ
ರಗುಂದ ಬಸ್ ನಿಲ್ದಾಣದ ಆವರಣ ಸ್ವಚ್ಛತೆಗೆ ಸಾರಿಗೆ ಸಂಸ್ಥೆ ಮುತುವರ್ಜಿ ವಹಿಸಬೇಕು. ಖಾಲಿ ಇರುವ ಜಾಗವನ್ನು ಬಳಕೆ ಮಾಡಬೇಕು.–ವಿ.ಬಿ.ಕರಿಸಕ್ರಣ್ಣವರ
ನನರಗುಂದ ಬಸ್ ನಿಲ್ದಾಣದ ಆವರಣದಲ್ಲಿ ಹೆಚ್ಚಿನ ಜಾಗ ಖಾಲಿ ಇದೆ. ಅದನ್ನು ಸ್ವಚ್ಛಗೊಳಿಸಿ ಸಸಿಗಳನ್ನು ನೆಡಬೇಕು. ಪ್ರಯಾಣಿಕರ ವಿಶ್ರಾಂತಿಗೆ ಉದ್ಯಾನ ಅಥವಾ ಹಸಿರೀಕರಣ ಮಾಡಬೇಕು.–ಜಗದೀಶ ಗೊಂಡಬಾಳ ಪರಿಸರ ಪ್ರೇಮಿ
ನರಗುಂದ ನರಗುಂದ ಪಟ್ಟಣ ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮೂಲಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು–ಚನ್ನು ನಂದಿ ನರಗುಂದ
ನರಗುಂದ ಬಸ್ ನಿಲ್ದಾಣದ ಆವರಣದಲ್ಲಿ ಸುತ್ತಲಿನ ಅಂಗಡಿಗಳ ತ್ಯಾಜ್ಯ ಬಂದು ಸೇರುತ್ತದೆ. ಕಠಿಣ ಕ್ರಮಗಳಿಂದ ಕಡಿವಾಣ ಹಾಕಬೇಕು.–ನಾಗೇಶ ಅಪ್ಪೋಜಿ ನರಗುಂದ ಬಸ್ ನಿಲ್ದಾಣ ಸ್ವಚ್ಛತೆಗೆ ನಿರಂತರ ಜಾಗೃತಿ ನಡೆಯಬೇಕು. ಮೊಬೈಲ್ ಕಳ್ಳತನ ಹೆಚ್ಚುತ್ತಿವೆ. ಅಂಥವರ ಪತ್ತೆಗೆ ಕ್ರಮ ಆಗಬೇಕು–ಎಸ್.ಎಸ್.ಪಾಟೀಲ ಕಿಸಾನ್ ಸಂಘ ನರಗುಂದ
ಶಕ್ತಿ ಯೋಜನೆ ಜಾರಿ ಆದಾಗಿನಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ ನಮ್ಮಂಥ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಆದ್ದರಿಂದ ವಿದ್ಯಾರ್ಥಿನಿಯರ ಸುರಕ್ಷತೆಗೆ ಸಾರಿಗೆ ಸಂಸ್ಥೆ ಕ್ರಮ ಕೈಗೊಳ್ಳಬೇಕು–ಗಂಗಮ್ಮ ಪಾಟೀಲ ಪಿಯು ವಿದ್ಯಾರ್ಥಿನಿ
ನರಗುಂದ ರಾಯಚೂರಿನಿಂದ ಬಂದು ಯಲ್ಲಮಗುಡ್ಡಕ್ಕೆ ಹೊಂಟೇವಿ. ಆದರೆ ಇಲ್ಲಿ ಹೆಣ್ಣುಮಕ್ಕಳಿಗೆ ಸರಿಯಾದ ಶೌಚಾಲಯಗಳಿಲ್ಲ. ಮಹಿಳಾ ಪ್ರಯಾಣಿಕರಿಗೆ ಆಗುವ ತೊಂದರೆ ತಪ್ಪಿಸಲು ಶೌಚಾಲಯ ನಿರ್ಮಿಸಬೇಕು–ಸಾಬವ್ವ ಗುಡ್ಡದ ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.