ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯದರ್ಶಿನಿ ಸಂಘಕ್ಕೆ ₹8.09 ಲಕ್ಷ ನಿವ್ವಳ ಲಾಭ

Published 26 ಸೆಪ್ಟೆಂಬರ್ 2023, 3:03 IST
Last Updated 26 ಸೆಪ್ಟೆಂಬರ್ 2023, 3:03 IST
ಅಕ್ಷರ ಗಾತ್ರ

ಗಜೇಂದ್ರಗಡ: ‘ಸಹಕಾರಿ ಸಂಘಗಳು, ಬ್ಯಾಂಕ್‌ಗಳು ಆರ್ಥಿಕವಾಗಿ ಸಬಲವಾಗಲು ಗ್ರಾಹಕರ ಸಹಕಾರ ಅಗತ್ಯ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರ ಸಂಘಗಳ ಮೂಲಕ ತ್ವರಿತಗತಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು’ ಎಂದು ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹೇಳಿದರು.

ಪಟ್ಟಣದ ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಸೋಮವಾರ ನಡೆದ ಪ್ರಿಯದರ್ಶಿನಿ ವಿವಿಧೋದ್ದೇಶಗಳ ಸಹಕಾರಿ ಸಂಘದ 24ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲರ ಸಹಕಾರದಿಂದ ನಮ್ಮ ಸಹಕಾರ ಸಂಘ 2022–23ನೇ ಸಾಲಿನಲ್ಲಿ ಒಟ್ಟು ₹8.09 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದರು.

ಪ್ರೀಯದರ್ಶಿನಿ ವಿವಿದೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಶರಣಪ್ಪ ಕೊಟಗಿ (ಮತ್ತಿಕಟ್ಟಿ) ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಘದಲ್ಲಿನ ಸದಸ್ಯರ 21 ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನದ ಜೊತೆಗೆ ಸನ್ಮಾನಿಸಲಾಯಿತು. 10 ಜನ ವಿಶೇಷ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಆಡಳಿತ ಮಂಡಳಿಯ ಉಪಾಧ್ಯಕ್ಷ ಅಪ್ಪು ಕೊಟಗಿ, ಆಡಳಿತ ಮಂಡಳಿಯ ಕಳಕಪ್ಪ ಪಟ್ಟಣಶೆಟ್ಟಿ, ಲಕ್ಷ್ಮಣ ಮಾಳೋತ್ತರ, ಫಕೀರಶೆಟ್ಟರ ಕುರುಡಗಿ, ಮಹಾಂತೇಶ ಸೋಮನಕಟ್ಟಿ, ಗೀತಾ ವಾಲಿ, ಕಂಠೇಪ್ಪ ಸಂಗನಾಳ, ಅವಿನಾಶ ಕೊಟಗಿ, ನಾಗರಾಜ ಕೊಟಗಿ, ಕಾರ್ಯದರ್ಶಿ ಅಮರಯ್ಯ ಗೌರಿಮಠ, ಸಿಬ್ಬಂದಿಯಾದ ಬಸವರಾಜ ಕರಬಾಶೆಟ್ರ, ದಾವಲಸಾಬ ತಾಳಿಕೋಟಿ, ಅಶೋಕ ಬುಗಡಿ, ಹನಮಂತರಾವ್ ಕುಲಕರ್ಣಿ, ವಿಶ್ವನಾಥ ಕಂಚಗಾರ, ಸಿದ್ದು ಹದ್ಲಿ, ಸುಮಂಗಲಾ ಯಂಕಂಚಿ, ನಾಗೇಶ ಕವಡಿಮಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT