ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಗದಗ ಜಿಲ್ಲೆಯ ಮಹೇಶಕುಮಾರ

Last Updated 31 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಲಾಕ್‍ಡೌನ್ ಸಮಯದಲ್ಲಿ ಸ್ಥಳೀಯ ಪುರಸಭೆ, ಪೊಲೀಸ್, ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಗಲೂ ರಾತ್ರಿ ಕೊರೊನಾ ವಿರುದ್ಧ ಕರ್ತವ್ಯ ನಿರ್ವಹಿಸಬೇಕಾಗಿ ಬಂತು. ಅವರಿಗೆ ಬೆಳಿಗ್ಗೆ ಮತ್ತು ಸಂಜೆ ಚಹಾ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಸ್ವಂತ ಖರ್ಚಿನಲ್ಲಿ ಅವರಿಗೆ ಕಷಾಯ ಮಿಶ್ರಿತ ಚಹಾ ಕೊಡಲು ಆರಂಭಿಸಿದೆ.

ನಾನು 20 ವರ್ಷಗಳಿಂದ ಕಷಾಯ ಮಿಶ್ರಿತ ಚಹಾ ಕುಡಿಯುತ್ತಿದ್ದೆ. ನನಗೆ ಕೆಮ್ಮ ಮತ್ತು ಕಫದ ಸಮಸ್ಯೆ ಕಾಡಿರಲಿಲ್ಲ. ಕೇವಲ ನೌಕರರಿಗೆ ಮಾತ್ರವಲ್ಲದೆ ಎದುರು ಬಂದವರಿಗೆಲ್ಲ ಚಹಾ ಕೊಟ್ಟು ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದೆ.

ಲಕ್ಷ್ಮೇಶ್ವರದಲ್ಲಿ ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬರಿಗೆ ಚಹಾ ಕೊಡುತ್ತಿರುವ ಮಹೇಶಕುಮಾರ ರಾಕೇಶ್
ಲಕ್ಷ್ಮೇಶ್ವರದಲ್ಲಿ ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬರಿಗೆ ಚಹಾ ಕೊಡುತ್ತಿರುವ ಮಹೇಶಕುಮಾರ ರಾಕೇಶ್

ಶುಂಠಿ, ಏಲಕ್ಕಿ, ಲವಂಗ, ಕಾಳು ಮೆಣಸು, ಕೊತ್ತಂಬರಿಬೀಜಗಳಿಂದ ಸಿದ್ಧಪಡಿಸಿದ ಪುಡಿಯನ್ನು ಕುದಿಯುವ ಚಹಾದಲ್ಲಿ ಬೆರೆಸಿ ಚಹಾ ತಯಾರಿಸಿ ಹಂಚುತ್ತಿದ್ದೆ. ಬೆಳಿಗ್ಗೆ ಮತ್ತು ಸಂಜೆ ಸೇರಿ ದಿನಕ್ಕೆ ಆರೇಳು ಕ್ಯಾನ್ ಚಹಾ ವಿತರಿಸಿದ್ದೇನೆ.

–ಮಹೇಶಕುಮಾರ ಸಿ. ರಾಕೇಚ್, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT