ನರೇಗಲ್: ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಲಿಂ. ಗುರು ಅನ್ನದಾನ ಸ್ವಾಮೀಜಿ 47ನೇ ಪುಣ್ಯಸ್ಮರಣೋತ್ಸವ, ಮಹಿಳಾ ಆರೋಗ್ಯ ಶಿಬಿರ, ಉಡಿ ತುಂಬುವ ಸಮಾರಂಭ ಹಾಗೂ ಬೆಳ್ಳಿ ರಥೋತ್ಸವ ಕಾರ್ಯಕ್ರಮಗಳು ಸೋಮವಾರ ವೈಭವಯುತವಾಗಿ ನೆರವೇರಿದವು.
ಹಾಲಕೆರೆ ಕ್ಷೇತ್ರಕ್ಕೆ ಆಗಮಿಸಿದ್ದ ಎಲ್ಲ ಹಿರಿ- ಕಿರಿಯ ಸ್ವಾಮೀಜಿಗಳು, ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳ್ಳಿ ರಥೋತ್ಸವಕ್ಕೆ ಪೂಜೆಗೈದರು. ನಂತರ ಸಂಜೆ 6.30ಕ್ಕೆ ಮಹಿಳೆಯರಿಂದ ಎಳೆಯಲ್ಪಟ್ಟ ಬೆಳ್ಳಿ ರಥೋತ್ಸವಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಚಾಲನೆ ನೀಡಿದರು. ನಂತರ ಮಹಿಳೆಯರು, ವಿದ್ಯಾರ್ಥಿನಿಯರು ಬೆಳ್ಳಿ ರಥ ಎಳೆದು ಸಂಭ್ರಮಿಸಿದರು. ಜಯ ಘೋಷಗಳು ಮೊಳಗಿದವು.
ಗದಗ, ಧಾರವಾಡ, ಕೊಪ್ಪಳ, ಬಾಗಲಕೋಟ, ವಿಜಯನಗರ, ಬಳ್ಳಾರಿ, ರಾಯಚೂರು, ದಾವಣಗೇರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.