ಮಂಗಳವಾರ, ಆಗಸ್ಟ್ 20, 2019
24 °C

ಭಾರೀ ಮಳೆ | ಹಳಿ ಮೇಲೆ ಮಣ್ಣು ಕುಸಿದು ಬೆಂಗಳೂರು–ಮಂಗಳೂರು ರೈಲು ಸಂಚಾರ ಸ್ಥಗಿತ

Published:
Updated:

ಹಾಸನ, ಸಕಲೇಶಪುರ: ತಾಲೂಕಿನ ಪಶ್ಚಿಮಘಟ್ಟ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 

ಮಳೆಗೆ ಬೆಂಗಳೂರು-ಮಂಗಳೂರು ನಡುವಿನ 86/100 ಮೈಲಿನಲ್ಲಿ ಗುಡ್ಡ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ, ಭಾನುವಾರ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ರೈಲು ಹಳಿ ತುಂಬೆಲ್ಲಾ ನೀರು ತುಂಬಿರುವುದು ಒಂದೆಡೆಯಾದರೆ, ಹಳಿ ಅಕ್ಕಪಕ್ಕದ ಗುಡ್ಡ ಯಾವಾಗ ಬೇಕಾದರೂ ಹಳಿ ಮೇಲೆ ಕುಸಿಯಬಹುದು ಎನ್ನುವ ಆತಂಕ ಎದುರಾಗಿದೆ.


ಹಳಿ ಮೇಲೆ ಮಣ್ಣು ಕುಸಿದಿರುವ ಸ್ಥಳದಲ್ಲಿ ಮತ್ತೆ ಕುಸಿಯಬಹುದಾದ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಳೆ ಹೀಗೇ ಮುಂದುವರಿದರೆ ಕಲ್ಲು ಬಂಡೆ ಮತ್ತು ಗುಡ್ಡ ರೈಲ್ವೆ ಹಳಿಯ ಮೇಲೆ ಜಾರುವ ಸಂಭವವಿರುವುದರಿಂದ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಈಗಲೂ ಸಣ್ಣಪುಟ್ಟ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 
 

Post Comments (+)