ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆಯ ದರ್ಶನ್‌ಗೆ 594ನೇ ರ್‍ಯಾಂಕ್‌

ಕನ್ನಡದಲ್ಲೇ ಪರೀಕ್ಷೆ: ನಾಲ್ಕನೇ ಬಾರಿಗೆ ಸಫಲ‌
Last Updated 4 ಆಗಸ್ಟ್ 2020, 13:05 IST
ಅಕ್ಷರ ಗಾತ್ರ

ಹಾಸನ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅರಸೀಕೆರೆ ತಾಲ್ಲೂಕಿನ ಹರಳಕಟ್ಟ ಗ್ರಾಮದ ದರ್ಶನ್‌ 594ನೇ ರ‍್ಯಾಂಕ್ ಪಡೆದು
ಉತ್ತಮ ಸಾಧನೆ ಮಾಡಿದ್ದಾರೆ.

2009ರಲ್ಲಿ ಮೆಕಾನಿಕಾಲ್‌ ಎಂಜಿನಿಯರಿಂಗ್ ಪದವಿ ಪಡೆದು ಇನ್ಪೋಸಿಸ್‌ನಲ್ಲಿ ಮೂರು ವರ್ಷ ಬೆಂಗಳೂರಿನಲ್ಲಿ ಕೆಲಸ
ಮಾಡಿದರು. ಅದೇ ಕಂಪನಿಯಲ್ಲಿ ಅಮೆರಿಕಾದಲ್ಲಿ ಎರಡೂವರೆ ವರ್ಷ ಕೆಲಸ ಮಾಡಿ, ಯುಪಿಎಸ್‍ಸಿ ತಯಾರಿಗಾಗಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರು.

ಒಂದರಿಂದ ಎಂಟನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ, ಪರೀಕ್ಷೆಯನ್ನು ಕನ್ನಡದಲ್ಲೇ ಬರೆದು, ನಾಲ್ಕನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್‌ ಮಾಡಿದ್ದಾರೆ.

‘ಮೊದಲ ರ್‍ಯಾಂಕ್‌ ಬರಬೇಕೆಂಬ ಆಸೆ ಎಲ್ಲರಿಗೂ ಇರುವುದು ಸಹಜ. ಸಾಕಷ್ಟು ಸ್ಪರ್ಧೆ ಇದ್ದ ಕಾರಣ ಪರೀಕ್ಷೆ ಪಾಸ್‌
ಮಾಡಲೇಬೇಕೆಂಬ ಗುರಿ ಹೊಂದಿದೆ. ‘ಪ್ರಜಾವಾಣಿ’ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಗಳು ಕನ್ನಡದಲ್ಲಿ ಪಾಸು ಮಾಡಲು ಸ್ಪೂರ್ತಿ ನೀಡಿತು. ಸಂಪಾದಕೀಯ ಲೇಖನಗಳನ್ನು ಸಂಗ್ರಹಿಸಿಕೊಂಡಿದ್ದು ಬಹಳ ಅನುಕೂಲವಾಯಿತು. ಆರಂಭದಲ್ಲಿ ತುಂಬ ಕಷ್ಟವಾಗಿತ್ತು. ಮೊದಲ ಬಾರಿ ಪರೀಕ್ಷೆ ಬರೆದಾಗ 10 ತಾಸು, ಎರಡನೇ ಬಾರಿ 7 ರಿಂದ 8 ತಾಸು ಓದುತ್ತಿದೆ. ಮೊದಲ ಎರಡು ಪರೀಕ್ಷೆಗೆ ದೆಹಲಿಯಲ್ಲಿ ಕೋಚಿಂಗ್ ಪಡೆದೆ. ಕೊನೆ ಪ್ರಯತ್ನದಲ್ಲಿ ಸ್ನೇಹಿತರು ಸೇರಿ ‘ಜ್ಞಾನ ದರ್ಶನ’ಎಂಬ ಸಣ್ಣ ತಂಡ ಕಟ್ಟಿಕೊಂಡು, ಸ್ವ ಪ್ರಯತ್ನ ಮಾಡಿದ್ದರ ಫಲವಾಗಿ ಯಶಸ್ಸು ಸಿಕ್ಕಿದೆ’ಎಂದು ಹೇಳಿದರು.

‘1 ರಿಂದ 4 ನೇ ತರಗತಿಯವರೆಗೆ ಹುಟ್ಟೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ. ಯಾವುದೇ ಹುದ್ದೆ ಸಿಕ್ಕಿದರೂ ಸಂತೋಷ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT