ಮಠಗಳ ಆಶೀರ್ವಾದದಿಂದ ಧರ್ಮದ ಜಾಗೃತಿ ಸಾಮಾಜಿಕ ಪ್ರಗತಿ ಆಗಿದ್ದು ಶೈಕ್ಷಣಿಕ ಪ್ರಗತಿಯಾಗಿ ನಮ್ಮ ದೇಶ ಅಭಿವೃದ್ಧಿಪಥದಲ್ಲಿ ಹೋಗುತ್ತಿದೆ. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಸಂವಾದ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಬಸವೇಶ್ವರರ ಸಂದೇಶಗಳನ್ನ ತಿಳಿಸುವುದು ಅರ್ಥಪೂರ್ಣವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ದಯಪಾಲಿಸಿದವರು ಬಸವಣ್ಣನವರು. ಈ ಪ್ರಪಂಚದ ಜನಸಂಖ್ಯೆ 850 ಕೋಟಿ ಇದ್ದು ಅದರಲ್ಲಿ ಭಾರತದ ನಮ್ಮ ಜನಸಂಖ್ಯೆ 150 ಕೋಟಿ ಇದೆ. ಗಟ್ಟಿ ಪ್ರಜಾಪ್ರಭುತ್ವಕ್ಕೆ ಬಸವಣ್ಣನವರ ಆಶೀರ್ವಾದದಿಂದ ಒಳ್ಳೆಯ ತಳಹದಿ ಸಿಕ್ಕಿದೆ ಎಂದರು. ಹಾಸನದಲ್ಲಿ ಬಸವೇಶ್ವರರ ಪುತ್ಥಳಿ ನಿರ್ಮಾಣ ಮಾಡಲು ಶಾಸಕ ಎಚ್.ಪಿ. ಸ್ವರೂಪ್ ಚಿಂತನೆ ಮಾಡಿದ್ದು ಚನ್ನರಾಯಪಟ್ಟಣದಲ್ಲೂ ಪ್ರತಿಮೆ ನಿಮಾಣ ಮಾಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ವಾಮೀಜಿಗಳು ಈ ಕಾರ್ಯಕ್ರಮಕ್ಕೆ ಬಂದಿರುವುದು ಶಕ್ತಿ ಬಂದಂತಾಗಿದೆ ಎಂದರು.