ಬುಧವಾರ, ಅಕ್ಟೋಬರ್ 28, 2020
18 °C
ಸಹಾಯಕ್ಕಾಗಿ 1908 ಟೋಲ್ ಫ್ರೀ ಕರೆ ಸೇವೆ ಆರಂಭ

ಹಾಸನ: ಮಾದಕ ವಸ್ತು ವಿರುದ್ಧ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1908 ಟೋಲ್‌ ಫ್ರೀ ಕರೆ ಸೇವೆ

ಹಾಸನ: ಜಿಲ್ಲೆಯಲ್ಲಿ ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದು ಹೆಚ್ಚುತ್ತಿರುವುದರಿಂದ ಡ್ರಗ್ಸ್‌–ಮಾದಕ ವಸ್ತುಗಳ ವಿರುದ್ಧ ಅಭಿಯಾನ ( 1908 ಟೋಲ್‌ ಫ್ರೀ ಕರೆ ಸೇವೆ) ಆರಂಭಿಸಿರುವ ಪೊಲೀಸ್ ಇಲಾಖೆ , ‘ಬನ್ನಿ ಮಾದಕ ವಸ್ತುಗಳ ನಿರ್ಮೂಲನೆಗೆ ನಾವೆಲ್ಲರೂ ಒಟ್ಟಾಗಿ ಸೇರಿ ಪಣ ತೊಡೋಣ’ ಎಂದು ಮನವಿ ಮಾಡಿದೆ.

‘ಮಾದಕ ವಸ್ತುಗಳ ಕೃಷಿ, ತಯಾರಿಕೆ, ವಶದಲ್ಲಿಟ್ಟುಕೊಳ್ಳುವುದು, ಸಂಗ್ರಹಣೆ, ಸಾಗಣೆ, ಮಾರಾಟ, ಖರೀದಿ, ಸೇವನೆ ಮಾಡುವುದು, ಮಾದಕ ವಸ್ತುಗಳ ಮಾರಾಟಕ್ಕೆ ಪ್ರಚೋದನೆ ನೀಡುವುದು, ಸಂಚು ರೂಪಿಸುವುದು, ನೆರವು, ಆಶ್ರಯ ನೀಡುವುದು, ಎನ್‌ಡಿಪಿಎಸ್‌ ಕಾಯ್ದೆ ಪ್ರಕಾರ ಗಂಭೀರ ಸ್ವರೂಪದ ಅಪರಾಧವಾಗಿದೆ. ಉತ್ತಮ ಸಮಾಜ ನಿರ್ಮಾಣ ಎಲ್ಲರ ಸಂಕಲ್ಪ’ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್ ಗೌಡ ಮನವಿ ಮಾಡಿದ್ದಾರೆ.

ಗಾಂಜಾ ಬೆಳೆಯುತ್ತಿರುವವರು ಹಾಗೂ ಮಾದಕ ವಸ್ತು ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಬಹುದು. ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು. ಜತೆಗೆ ಐಪಿಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಬಗ್ಗೆಯೂ ಮಾಹಿತಿ ನೀಡುವಂತೆ ಅವರು ಕೋರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಸುದ್ದಿಗಳ ಸತ್ಯಾಂಶ ತಿಳಿಯಲು ಪೊಲೀಸ್‌ ಇಲಾಖೆ ಡಿಜಿಟಲ್‌ ಸೇವೆ ಆರಂಭಿಸಿದೆ. factcheck.ksp.gov.in ಲಿಂಕ್‌ಗೆ ಲಾಗಿನ್ ಆಗಬಹುದು ಎಂದು ಹೇಳಿದೆ.

ನಾಗರಿಕ ಕೇಂದ್ರದ ಪೋರ್ಟಲ್‌ನಿಂದ https://policeseva.ksp.gov.in/login.aspx ಲಿಂಕ್‌ನಿಂದ ಮೊಬೈಲ್ ಕಳವು, ಹಿರಿಯ ನಾಗರಿಕರಿಗೆ ಸಂಬಂಧಪಟ್ಟ ದೂರುಗಳನ್ನು ದಾಖಲಿಸಬಹುದು. ಹಾಗೆಯೇ ಆನ್‌ಲೈನ್ ಸೈಬರ್‌ ಅಪರಾಧಗಳಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ cybercrime.gov.in ದೂರು ದಾಖಲಿಸಲು ಕೋರಲಾಗಿದೆ.

ತುರ್ತು ಸಂದರ್ಭದಲ್ಲಿ ಸ್ಮಾರ್ಟ್‌ ಫೋನ್‌ ಮೂಲಕ karnataka state police (official) ಆ್ಯಪ್‌ನಲ್ಲಿ ದೂರು ದಾಖಲಿಸಬಹುದು.

ಮಾಹಿತಿಗೆ ಸೇವಾ ಸಿಂಧು ಸಹಾಯವಾಣಿ 08044554455, 080 22370281 ಮತ್ತು ಕಚೇರಿ ದೂರವಾಣಿ ಸಂಖ್ಯೆ 08172260819 ಸಂಖ್ಯೆಗಳಿಗೆ ಕರೆ ಮಾಡಬಹುದು. ಇನ್ನು ಮುಂದೆ ಅರ್ಜಿದಾರರು ಅರ್ಜಿ ಅಲ್ಲಿಸಲು ಅಥವಾ ರಿಫೋರ್ಟ್‌ ಪಡೆಯಲು ಕಚೇರಿಗೆ ಭೇಟಿ ನೀಡುವ ಅಗತ್ಯವಿರುವುದಿಲ್ಲ. ಅರ್ಜಿ ಪರಿಶೀಲನಾ ಅವಧಿ 20 ದಿನಗಳು ಎಂದು ಎಸ್ಪಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.