ನವೋದಯ ವಿದ್ಯಾಸಂಘದ ಚುನಾವಣೆ ಶೇ84 ರಷ್ಟು ಮತದಾನ
ಚನ್ನರಾಯಪಟ್ಟಣ: ಪಟ್ಟಣದ ನವೋದಯ ವಿದ್ಯಾಸಂಘದ 13 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 84ರಷ್ಟು ಮತದಾನ ನಡೆದಿದೆ.
13 ನಿರ್ದೇಶಕರ ಸ್ಥಾನಕ್ಕೆ ಒಟ್ಟು 36 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆ 8ಕ್ಕೆ ಮತದಾನ ಆರಂಭವಾಯಿತು. ಮತದಾನ ಚುರುಕಿನಿಂದ ನಡೆಯಿತು. ಮಧ್ಯಾಹ್ನ 3ಕ್ಕೆ ಮತದಾನ ಮುಕ್ತಾಯವಾಯಿತು. 2584 ಮತದಾರರ ಪೈಕಿ 2188 ಮತದಾರರು ಹಕ್ಕು ಚಲಾಯಿಸಿದರು. ಹೊರಭಾಗದಲ್ಲಿ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ಮತಯಾಚನೆಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು. ನವೋದÀಯ ಶಿಕ್ಷಣ ಸಂಸ್ಥೆಯ ಮುಂಭಾಗದ ಮೈಸೂರು ರಸ್ತೆಯಲ್ಲಿ ಅಭ್ಯರ್ಥಿಗಳ ಫ್ಲೆಕ್ಸ್‍ಗಳು ರಾರಾಜಿಸಿದವು. 1944ರಲ್ಲಿ ಶಿಕ್ಷಣ ಸಂಸ್ಥೆ ಆರಂಭವಾಯಿತು. ನೂತನವಾಗಿ ಆಯ್ಕೆಯಾಗುವ ನಿರ್ದೇಶಕರು ಸಂಸ್ಥೆಯ ಪುನರ್‍ತ್ಥಾನಕ್ಕೆ ಶ್ರಮಿಸಬೇಕು ಎನ್ನುತ್ತಾರೆ ಮತದಾರರು.