ನಗರಸಭೆ ಕಾರ್ಯವೈಖರಿಗೆ ರೈತರು, ವರ್ತಕರು, ನಾಗರಿಕರ ಅಸಮಾಧಾನ
ಸಂತೋಷ್ ಸಿ.ಬಿ.
Published : 16 ಏಪ್ರಿಲ್ 2025, 6:23 IST
Last Updated : 16 ಏಪ್ರಿಲ್ 2025, 6:23 IST
ಫಾಲೋ ಮಾಡಿ
Comments
ರೈತರಿಂದ ವಸೂಲಿ ಮಾಡುವ ಸುಂಕದ ರಸೀದಿ
ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳಾಗಿವೆ. ಸಂತೆ ಸಮಸ್ಯೆ ಹಾಗೂ ಸುಂಕ ವಸೂಲಿ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ರಮೇಶ್ ಪ್ರಭಾರ ಆಯುಕ್ತ
ಸೌಕರ್ಯ ಕಲ್ಪಿಸದೇ ಸುಂಕ ವಸೂಲಿ ಮಾಡಲಾಗುತ್ತಿದೆ. ಬಡ ರೈತರು ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗಿದೆ.
ರಂಗಸ್ವಾಮಿ ಸಾಲಗಾಮೆ ರೈತ
ಬೇಕಾಬಿಟ್ಟಿ ಸುಂಕ ವಸೂಲಿ
ನಗರದ ಯಾವುದೇ ಮಾರುಕಟ್ಟೆ ವಾಣಿಜ್ಯ ಸ್ಥಳದಲ್ಲಿ ನಗರಸಭೆ ಸುಂಕ ವಸೂಲಿ ಮಾಡುತ್ತಿದ್ದರೆ ಅಲ್ಲಿ ಮೂಲಸೌಕರ್ಯ ಒದಗಿಸಬೇಕು. ಪ್ರತಿಯೊಬ್ಬರಿಗೂ ಸುಂಕದ ರಸೀದಿ ನೀಡಬೇಕು. ಆದರೆ ಹಲವರಿಗೆ ಸುಂಕದ ಚೀಟಿ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ರೈತರು ಹಾಗೂ ರಸ್ತೆ ಬದಿ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡದಂತೆ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಸೂಚನೆ ನೀಡಿದ್ದರು. ಕೆಲ ದಿನಗಳ ಹಿಂದೆ ನಗರಸಭೆ ಅಧಿಕಾರಿಗಳು ಟೆಂಡರ್ ಕರೆದು ಸುಂಕ ವಸೂಲಿ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.