ಹೆತ್ತೂರು: ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಲು ಸಾಲ ಸೌಲಭ್ಯ ನೀಡಲಾಗುವುದು ಎಂದು ಎಚ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಹೇಳಿದರು.

ಗ್ರಾಮದಲ್ಲಿ ನಡೆದ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರಿಗೆ ಕೃಷಿ ಸಾಲವಲ್ಲದೇ ನಮ್ಮ ಸಂಘದಿಂದ ಹಲವು ರೀತಿಯ ಸಾಲ ನೀಡುತ್ತದೆ. ಹೈನುಗಾರಿಕೆಯೂ ಆದಾಯದ ಮೂಲವಾಗಿದ್ದು, ಇದನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಾಲದ ಸೌಲಭ್ಯ ನೀಡಲಾಗುವುದು.
ಇದರ ಸದುಪಯೋಗ ಪಡೆದುಕೊಂಡು, ಈ ಭಾಗದ ರೈತರು ಸ್ವಾವಲಂಬಿ ಜೀವನ ನಡೆಸಬೇಕು. ನಮ್ಮ ಸಹಕಾರ ನಿಮ್ಮ ಜೊತೆ ಸದಾ ಇರುತ್ತದೆ ಎಂದರು

ಎಚ್ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿ, ಹೋಬಳಿ ಮಟ್ಟದ ಸಹಕಾರ ಸಂಘವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದು ಖುಷಿಯ ವಿಚಾರ. ಹೈನುಗಾರಿಕೆಯಿಂದ ರೈತರು ಹೆಚ್ಚು ಆದಾಯ ಪಡೆಯಬಹುದು. ಜಿಲ್ಲಾ ಕೇಂದ್ರ ಬ್ಯಾಂಕ್ನಿಂದ ಸಹಕಾರ ಸಂಘದ ಉನ್ನತಿಗೆ ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ಅಧ್ಯಕ್ಷರ ಜೊತೆ ಮಾತನಾಡಿ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಈ. ನಾಗಭೂಷಣ ಮಾತನಾಡಿ, ₹ 4.17 ಕೋಟಿಯನ್ನು ಬೆಳೆ ಸಾಲ, ಪಿಗ್ಮಿ ಸಾಲ, ಎಂಟಿಎಲ್ ಯೋಜನೆ ಅಡಿ ಷೇರುದಾರರಿಗೆ ನೀಡಲಾಗಿದ್ದು, ಸಂಘವು ಪ್ರಸ್ತುತ ಸಾಲಿನಲ್ಲಿ ₹ 6.59 ಲಕ್ಷ ಲಾಭ ಗಳಿಸಿದೆ ಎಂದರು.

ಸರಿಯಾದ ಸಮಯದಲ್ಲಿ ಬಡ್ಡಿ ಕಟ್ಟುತ್ತಿರುವುದರಿಂದ ಸಂಘವು ಲಾಭದತ್ತ ಮುಖ ಮಾಡಿದೆ. ಪಾರದರ್ಶಕ ಆಡಳಿತ ನೀಡುವ ಮೂಲಕ ರಾಜ್ಯದಲ್ಲಿ ಮಾದರಿ ಸಂಘವನ್ನು ಮಾಡಲಾಗುವುದು. ನಿರ್ದೇಶಕರು ಹಾಗೂ ಷೇರುದಾರರ ಬೆಂಬಲ ಅಗತ್ಯ ಎಂದರು.

ಎಚ್ಡಿಸಿಸಿ ಬ್ಯಾಂಕ್ ನಿರ್ದೇಶಕ ಜಯರಾಂ, ಸಕಲೇಶಪುರ ವೃತ್ತ ಮೇಲ್ವಿಚಾರಕ ನವೀನ್, ಉಪಾಧ್ಯಕ್ಷೆ ನೇತ್ರಾ ಸುರೇಶ್, ನಿರ್ದೇಶಕರಾದ ಶ್ರೀಧರ್, ಕೃಷ್ಣಪ್ರಸಾದ್, ವೇದಮೂರ್ತಿ, ಪ್ರತಾಪ್, ಸತೀಶ್, ಮಲ್ಲೇಶ್, ದೀಪ್ತಿ, ಕುಶಾಲರಾಜ್, ರೋಹಿತ್, ಚಂದ್ರಕುಮಾರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್, ಸಿಬ್ಬಂದಿ ಅನಿತಾ ಎ., ಎಚ್.ಕೆ. ಹೂವಣ್ಣ, ತಮ್ಮಣ್ಣ ಹೊಸಹಳ್ಳಿ, ಮೇಘರಾಜು, ಪೂಜಾ ಎಚ್.ಎನ್., ಷೇರುದಾರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.