ಬಾಗಿಲು ಒಡೆದು ಭತ್ತ ತಿಂದ ಸಲಗ

ಭಾನುವಾರ, ಜೂಲೈ 21, 2019
22 °C

ಬಾಗಿಲು ಒಡೆದು ಭತ್ತ ತಿಂದ ಸಲಗ

Published:
Updated:

ಹಾಸನ: ಆಲೂರು ತಾಲ್ಲೂಕಿನ ಕಾಡ್ಲೂರು ಕೊಪ್ಪಲಿನಲ್ಲಿ ಒಂಟಿ ಸಲಗವೊಂದು ಹಳೆ ಮನೆ ಬಾಗಿಲು ಒಡೆದು ಭತ್ತ ತಿಂದು ಕಾಲ್ಕಿತ್ತಿರುವ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ.

ಕುಮಾರ್‌ ಅವರು ತಮ್ಮ ಕುಟುಂಬದ ಸದಸ್ಯರ ಜತೆ ಹೊಸ ಮನೆಯಲ್ಲಿ ವಾಸವಾಗಿದ್ದರು. ಅದರ ಸನಿಹದಲ್ಲಿಯೇ ಹಳೆಯ ಮನೆ ಕಣಜದಲ್ಲಿದ್ದ ಭತ್ತವನ್ನು ಸಲಗ ತಿಂದು, ಚೆಲ್ಲಾಪಿಲ್ಲಿ ಮಾಡಿದೆ. ಶಬ್ಧಕ್ಕೆ ಎಚ್ಚರಗೊಂಡು ಹೊರ ಬಂದಾಗ ಸಲಗ ಭತ್ತ ತಿನ್ನುವುದನ್ನ ನೋಡಿ ಗಾಬರಿಗೊಂಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ವಾಸದ ಮನೆ ಬಾಗಿಲು ಎದುರು ಕೆಲ ಕಾಲ ನಿಂತು ಆತಂಕ ಸೃಷ್ಟಿಸಿತು.

ಈವರೆಗೆ ಗದ್ದೆಯಲ್ಲಿ ಫಸಲು ಹಾಳು ಮಾಡುತ್ತಿದ್ದ ಆನೆ ಮನೆಗೂ ಪ್ರವೇಶ ಮಾಡಿರುವುದು ಜನರಲ್ಲಿ ಭಯ ಉಂಟು ಮಾಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 4

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !