ಮೆಟ್ಟಿಲು ಹತ್ತಲಾಗದೇ ಭಕ್ತರು ನಿರಾಸೆಯಿಂದ ಹಿಂದಿರುಗಬಾರದು ಎಂದು ಹಿಂದಿನ ಶ್ರೀಗಳು ಮೂರ್ತಿ ಕೆತ್ತಿಸಿದ್ದರು. ಅದರ ಪ್ರಥಮ ಮಸ್ತಕಾಭಿಷೇಕ ನೆರವೇರಲಿದೆ.
ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ಷೇತ್ರದ ಪೀಠಾಧಿಪತಿ
ವಿವಿಧ ಧಾರ್ಮಿಕ ಕಾರ್ಯಕ್ರಮ
ಫೆ.14ರಂದು ಬೆಳಗಿನ ಜಾವ 4.50ರಿಂದ ಸಕಲೀಕರಣ ಇಂದ್ರಪ್ರತಿಷ್ಠೆ ನಾಂದಿ ಮಂಗಲ ಅಖಂಡ ದೀಪ ಸ್ಥಾಪನೆ ಧ್ವಜಾರೋಹಣ ಚತುರ್ದಿಕ್ ಹೋಮ ವಾಸ್ತು ವಿಧಾನ ನವಗ್ರಹ ಹೋಮ ಯಾಗ ಮಂಡಲ ವಿಧಾನ ಸಂಜೆ ಗರ್ಭಾವತರಣ ಕಲ್ಯಾಣ ವಿಧಿಗಳು ಪ್ರಾರಂಭವಾಗುತ್ತವೆ. ರಾತ್ರಿ 8 ರಿಂದ ಹಾಸನದ ವಿದುಷಿ ಅಂಬಳೆ ರಾಜೇಶ್ವರಿ ಶಿಷ್ಯ ತಂಡದಿಂದ ಭರತ ಬಾಹುಬಲಿ ಚರಿತ್ರೆ ನೃತ್ಯ ರೂಪಕ ನಾಟಕ ಏರ್ಪಡಿಸಲಾಗಿದೆ. ಫೆ.15ರಂದು ಬೆಳಿಗ್ಗೆ 6 ಗಂಟೆಯಿಂದ ಅಭಿಷೇಕದ ನಂತರ ನಾಭಿರಾಜರ ಸಭೆಯೊಂದಿಗೆ ಜನ್ಮ ಕಲ್ಯಾಣ ಪಾಂಡುಕ ಶಿಲೆಯಲ್ಲಿ ಜನ್ಮಾಭಿಷೇಕ ಪೂಜೆ ತೊಟ್ಟಿಲು ಪೂಜೆ ನಾಮಕರಣ ಬಾಲಕ್ರೀಡೆ ನಡೆಯಲಿದೆ. ಮಧ್ಯಾಹ್ನ 2ರಿಂದ ರಾಜ್ಯಾಭಿಷೇಕ 56 ರಾಜರಿಂದ ಕಪ್ಪ ಕಾಣಿಕೆ ಲೌಕಾಂತಿಕ ದೇವರ ಆಗಮನ ವೈರಾಗ್ಯದ ನಂತರ ದೀಕ್ಷಾ ಕಲ್ಯಾಣದ ವಿಧಿಗಳು ಜರುಗಲಿವೆ. ಫೆ. 16ರಂದು ಬೆಳಿಗ್ಗೆ 6ರಿಂದ ಅಭಿಷೇಕ ಸರ್ವದೋಷ ಪ್ರಾಯಶ್ಚಿತ್ತ ವಿಧಾನ ಆಹಾರ ದಾನ ಬೆಳಿಗ್ಗೆ 10.30ರಿಂದ ಕೇವಲ ಜ್ಞಾನ ಕಲ್ಯಾಣ ಮತ್ತು ಪ್ರತಿಷ್ಠಾ ವಿಧಿ ಸಮವಸರಣ ಪೂಜೆ ಮೋಕ್ಷ ಕಲ್ಯಾಣದ ನಂತರ ಲಘು ಸಿದ್ಧ ಚಕ್ರ ವಿಧಾನದೊಂದಿಗೆ ಮಧ್ಯಾಹ್ನ 2ರಿಂದ ಬಾಹುಬಲಿ ಸ್ವಾಮಿಗೆ ಪ್ರಥಮ ಮಹಾಮಸ್ತಕಾಭಿಷೇಕ ನೆರವೇರಲಿದೆ. ರಾತ್ರಿ 7.30ರಿಂದ ಬಾಹುಬಲಿ ಸ್ವಾಮಿಯ ಸುವರ್ಣ ರಥ ಯಾತ್ರೆಯ ಭವ್ಯ ಮೆರವಣಿಗೆ ಪಟ್ಟಣದಲ್ಲಿ ನೆರವೇರಲಿದೆ ಎಂದು ಎಸ್‌ಡಿಜೆಎಂಐಎಂಸಿ ಟ್ರಸ್ಟ್ ಕಾರ್ಯದರ್ಶಿ ಎಸ್.ಬಿ.ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.