ಸಕಲೇಶಪುರ: ತಾಲ್ಲೂಕಿನ ದೋಣಿಗಾಲ್ ಬಳಿ ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದ್ದ ಕಾರಿನ ನಾಲ್ಕೂ ಚಕ್ರಗಳು ಹಾಗೂ ಕಾರಿನಲ್ಲಿದ್ದ ಟೂಲ್ಸ್ಗಳನ್ನು ಕಳವು ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಕುಡುಗರಹಳ್ಳಿ ಬಡಾವಣೆ ನಿವಾಸಿ ಮನೋಜ್ ಎಂಬುವವರು ಭಾನುವಾರ ರಾತ್ರಿ ದೋಣಿಗಾಲ್ ಕಡೆಯಿಂದ ಪಟ್ಟಣಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ. ರಸ್ತೆಯಿಂದ ಸುಮಾರು 80 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಕಾರಿನ ಹಿಂಭಾಗ ಬರುತ್ತಿದ್ದ ಆನೇಮಹಲ್ ಕಾಫಿ ಬಡ್ಡೆ ಮೋಣು ಎಂಬುವವರು ಹಾಗೂ ಅವರ ಸ್ನೇಹಿತರು ಗಾಯಗೊಂಡಿದ್ದ ಮನೋಜ್ ಅವರನ್ನು ಮೇಲೆ ಎತ್ತಿಕೊಂಡು ಬಂದು ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದರು.

ಹೊಂಡದಲ್ಲಿ ಬಿದ್ದಿದ್ದ ಕಾರನ್ನು ಮೇಲೆತ್ತಲು ಬೆಳಿಗ್ಗೆ ಹೋದಾಗ ಕಳ್ಳರು ಕಾರಿನ ನಾಲ್ಕೂ ಚಕ್ರಗಳನ್ನು, ಕಾರಿನಲ್ಲಿದ್ದ ಜಾಕ್ ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.