ಹಾಸನ: ಅರಸೀಕೆರೆ ತಾಲ್ಲೂಕಿನ ಎಸ್.ಡಿಗ್ಗೇನಹಳ್ಳಿ ಗ್ರಾಮದಲ್ಲಿ ಚಿನ್ನದ ಸರಕ್ಕಾಗಿ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಆರೋಪಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗ್ರಾಮದ ಪಾಲಾಕ್ಷ ಅವರು ಆ. 20ರಂದು ತೋಟಕ್ಕೆ ಹೋಗಿದ್ದು, ಮನೆಯಲ್ಲಿ ಅವರ ಪತ್ನಿ ಶಕುಂತಲಾ (48) ಇದ್ದರು. ತೋಟದಿಂದ ಮಧ್ಯಾಹ್ನ ಮನೆಗೆ ವಾಪಸ್ ಬಂದು ನೋಡಿದಾಗ, ಅಡುಗೆ ಕೋಣೆಯಲ್ಲಿ ಪತ್ನಿಯ ಶವ ಬಿದ್ದಿತ್ತು. ಈ ಬಗ್ಗೆ ಆ.21ರಂದು ಪಾಲಾಕ್ಷ ಅವರು ಜಾವಗಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಶಕುಂತಲ ಕೊಲೆಯಾದ 4 ದಿವಸಗಳ ನಂತರ ಶಿವಮೂರ್ತಿಯೂ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಅನುಮಾನ ವ್ಯಕ್ತಪಡಿಸಿರುವ ಪಾಲಾಕ್ಷ ಸೆ.9ರಂದು ಮತ್ತೊಂದು ದೂರು ಸಲ್ಲಿಸಿದ್ದಾರೆ.

ಶಕುಂತಲ ಅವರ ಸಂಬಂಧಿ ಎಸ್.ಡಿಗ್ಗೇನಹಳ್ಳಿ ಗ್ರಾಮದ ಶಿವಮೂರ್ತಿ ಆಗಾಗ್ಗೆ ತಮ್ಮ ಮನೆಗೆ ಬಂದು ಹೋಗುತ್ತಿದ್ದು, ಅತಿಯಾದ ಸಾಲ ಮಾಡಿಕೊಂಡಿದ್ದರಿಂದ ಶಕುಂತಲ ಬಳಿ ಸಾಲ ಕೇಳುತ್ತಿದ್ದ. ಮಾಡಿಕೊಂಡಿದ್ದಾನೆ. ಶಿವಮೂರ್ತಿಯೇ ತನ್ನ ಪತ್ನಿ ಶಕುಂತಲಾ ಕೊಲೆ ಮಾಡಿ, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ತೆಗೆದುಕೊಂಡು ಹೋಗಿದ್ದಾನೆ. ನಂತರ ತಾನೂ ಹೆದರಿ ನೇಣು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಜಾವಗಲ್ ಪೊಲೀಸರು, ತನಿಖೆ ನಡೆಸಿದ್ದಾರೆ.

ದೇವಸ್ಥಾನದ ಆಭರಣ ಕಳವು

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಜಕ್ಕವಳ್ಳಿ ಗ್ರಾಮದ ಗಂಗಮಾಳಮ್ಮ ಹಾಗೂ ಬೀರಲಿಂಗೇಶ್ವರ ದೇವಸ್ಥಾನದ ಬೀಗ ಮುರಿದು ₹1.01 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ದೇವಸ್ಥಾನ ಅರ್ಚಕ ಗಂಗಾನಾಯಕ ಸೆ.3ರಂದು ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗಿದ್ದು, ಸೆ. 4ರಂದು ಬೆಳಿಗ್ಗೆ ಬಂದು ನೋಡಿದಾಗ, ಬೀರುವಿನಲ್ಲಿಟ್ಟಿದ್ದ ಹಿತ್ತಾಳೆ, ತಾಮ್ರ, ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಕಳವಾಗಿದ್ದವು. ಈ ಕುರಿತು ಹೊಳೇನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.