ಹೊಳೆನರಸೀಪುರ: ‘ರಾಜ್ಯ ಸರ್ಕಾರಿ ನೌಕರರ ಸಂಘದ ಐದು ವರ್ಷ ಅವಧಿಗಾಗಿ ಚುನಾವಣೆ ಅ. 28ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ’ ಎಂದು ಚುನಾವಣಾಧಿಕಾರಿಯಾದ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಚ್. ಸಪ್ನಾ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅ. 9ರಿಂದ ಅ. 18ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. 19 ರಂದು ನಾಮಪತ್ರ ಪರಿಶೀಲನೆ, 21 ರಂದು ಸಂಜೆ 5.30 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಚುನಾವಣೆಯ ಮತದಾನ ಸೇರಿದಂತೆ ಎಲ್ಲಾ ಮತದಾನ ಪ್ರಕ್ರಿಯೆಗಳು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ’ ಎಂದು ಹೇಳಿದರು.

‘ಚುನಾವಣೆಗೆ ಸ್ಪರ್ಧಿಸುವವರು ₹ 2ಸಾವಿರ ಠೇವಣಿಯನ್ನು ಚುನಾವಣಾಧಿಕಾರಿ ಕಚೇರಿಗೆ ಪಾವತಿಸಿ ರಸೀದಿ ಪಡೆಯಬೇಕು. 5 ವರ್ಷ ಸದಸ್ಯತ್ವ ಹೊಂದಿರುವ ನೌಕರರು ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ನಾಮ ಪತ್ರಕ್ಕೆ 5 ವರ್ಷದ ಸದಸ್ಯತ್ವ ಇರುವ ಸದಸ್ಯರಲ್ಲಿ ಒಬ್ಬರು ಸೂಚಕರಾಗಿ ಮತ್ತೊಬ್ಬರು ಅನುಮೋದಕರಾಗಿ ಒಬ್ಬ ಅಭ್ಯರ್ಥಿಗೆ ಮಾತ್ರ ಸಹಿ ಹಾಕಬೇಕು. ಸೂಚಕರಾಗಿ, ಅನುಮೋದಕರಾಗಿ, ಸಹಿ ಹಾಕಿದವರು ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಆಯಾ ಇಲಾಖೆಯ ಸದಸ್ಯರು ತಮ್ಮ ಇಲಾಖೆಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗೆ ಮಾತ್ರ ಮತದಾನ ಮಾಡಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.