ಶ್ರವಣಬೆಳಗೊಳ: ಕ್ಷೇತ್ರದ ಭಂಡಾರ ಬಸದಿಯ ಚವ್ವೀಸ ತೀರ್ಥಂಕರರ ಸನ್ನಿಧಿಯ ಪ್ರಾಂಗಣದಲ್ಲಿ ವಿರಾಜಮಾನರಾಗಿರುವ ಚಿಕ್ಕ ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಶುಕ್ರವಾರ, ವೃಷಭನಾಥ ಸ್ವಾಮಿಯ ಲಘು ಪಂಚಕಲ್ಯಾಣದ ಧಾರ್ಮಿಕ ವಿಧಿಗಳು ನಡೆದವು.

ಆಚಾರ್ಯರು, ತ್ಯಾಗಿಗಳು ಭಟ್ಟಾರಕರ ಸಾನಿಧ್ಯ ಮತ್ತು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪುರೋಹಿತ ವರ್ಗದವರು ಶುಕ್ರವಾರ ವಿಧಿಗಳನ್ನು ನೆರವೇರಿಸಿದರು.

ಭಂಡಾರ ಬಸದಿಯ ಮುಂಭಾಗ ಬೆಳಿಗ್ಗೆ ವಿವಿಧ ಮಂಗಲ ವಾದ್ಯಗಳೊಂದಿಗೆ ಧ್ವಜಾರೋಹಣವನ್ನು ಬೆಂಗಳೂರಿನ ಅನಿಲ್ ಸೇಠಿ, ವೇದಿಕೆಯ ಉದ್ಘಾಟನೆಯನ್ನು ಚಂಪಾಲಾಲ್ ಭಂಡಾರಿ ನೆರವೇರಿಸಿದರು. ಕಂಕಣ ಧಾರಣೆಯೊಂದಿಗೆ ಮಕರ ಲಗ್ನದಲ್ಲಿ ಸಕಲೀಕರಣ, ಇಂದ್ರಪ್ರತಿಷ್ಠೆ ನಾಂದಿ ಮಂಗಲ, ಅಖಂಡ ದೀಪ ಸ್ಥಾಪನೆ, ಅಂಕುರಾರ್ಪಣೆ ನೆರವೇರಿಸಲಾಯಿತು.

ನೂತನ ಬಾಹುಬಲಿ ಬಿಂಬಕ್ಕೆ ಧಾಮ ಸಂಪ್ರೋಕ್ಷಣೆ, ವಿಮಾನ ಶುದ್ಧಿ, ಹೋಮಗಳು ನಡೆದ ನಂತರ, 14 ನದಿಗಳ ಶುದ್ಧ ಜಲದಿಂದ ಮೂರ್ತಿಯನ್ನು ಮಂತ್ರಗಳೊಂದಿಗೆ ಶುದ್ಧಿ ಮಾಡಲಾಯಿತು. ಕಿರೀಟ ಧರಿಸಿದ್ದ ಅಷ್ಟ ಕನ್ನಿಕೆಯರು ಮತ್ತು ಶ್ರಾವಕ, ಶ್ರಾವಕಿಯರು ಸೇರಿ ಬಿಂಬಕ್ಕೆ ಅರಿಷಿಣ, ಕೇಸರಿಮಯ ಕ್ಷೀರ, ಗಂಧಗಳಿಂದ ಸಂಪ್ರೋಕ್ಷಿಸಿ ಶುದ್ಧಿ ಮಾಡಲಾಯಿತು.

ರಚಿಸಿದ್ದ ಯಾಗ ಮಂಟಪದಲ್ಲಿ ವಾಸ್ತು ವಿಧಾನ, ನವಗ್ರಹ ಹೋಮಗಳು ನಡೆದವು. ಮಂಡಲದ ಮಧ್ಯೆ ರಜತದ ಪೀಠದಲ್ಲಿ ತೀರ್ಥಂಕರರ ಬಿಂಬಗಳನ್ನು ಅಭಿನವ ಶ್ರೀಗಳು ಪ್ರತಿಷ್ಠಾಪಿಸಿದರು. ನಂತರ ಮಂಟಪದಲ್ಲಿ 9 ಮಂಗಲ ಕಲಶ, ಅಷ್ಟ ಮಂಗಲಗಳು, ಅಷ್ಟ ಆಯುಧಗಳು, ಚಾಮರಗಳು, ಧರ್ಮಧ್ವಜದ ಬಾವುಟಗಳನ್ನು ಯಂತ್ರದೊಂದಿಗೆ ಪ್ರತಿಷ್ಠಾಪಿಸಲಾಯಿತು.

ಮಹಾಮಂತ್ರಗಳೊಂದಿಗೆ ಧಾರ್ಮಿಕ ವಿಧಿಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವಾನು ದೇವತೆಗಳಿಗೆ, ಆಚಾರ್ಯರಿಗೆ, ಸಮಸ್ತ ತ್ಯಾಗಿವೃಂದಕ್ಕೆ, ದ್ವಾರಪಾಲಕರಿಗೆ, ಕ್ಷೇತ್ರದ ಅಧಿದೇವತೆ ಮತ್ತು ಭೂಮಿಗೆ ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಫಲಗಳನ್ನು ಅರ್ಪಿಸಿ, ಶಾಂತಿಧಾರದೊಂದಿಗೆ ಮಹಾರ್ಘ್ಯ ಸಮರ್ಪಿಸಲಾಯಿತು. ನೆರೆದಿದ್ದ ಭಕ್ತರು ಜಯಘೋಷಗಳನ್ನು ಮೊಳಗಿಸಿದರು.

ಪೂಜೆಯ ನೇತೃತ್ವವನ್ನು ಎಸ್.ಡಿ.ನಂದಕುಮಾರ್ ಶಾಸ್ತ್ರಿ, ಪ್ರತಿಷ್ಠಾಚಾರ್ಯರಾದ ಶ್ರೀಮಂಧರ ಉಪಾಧ್ಯೆ, ಎಸ್.ಪಿ. ಜಿನೇಶ್ ಕುಮಾರ್, ರಾಜ್ ಕುಮಾರ್ ಶಾಸ್ತ್ರಿ ಹಾಗೂ ಪಂಡಿತ ವರ್ಗ ವಹಿಸಿದ್ದರು. ಪೂಜಾಷ್ಟಕಗಳಿಗೆ ಸಂಗೀತ ಹಾಡುಗಾರಿಕೆಯನ್ನು ಉದ್ಗಾಂವ್ನ ಸಚಿನ್ ಚೌಗಲೆ ತಂಡದವರು ನಿರ್ವಹಿಸಿದರು.

ಸಾನಿಧ್ಯವನ್ನು ಆಚಾರ್ಯ ಕುಂಥುಸಾಗರ ಮಹಾರಾಜರು, ಸಂಘಸ್ಥ ತ್ಯಾಗಿಗಳು, ಮಾತಾಜಿಯವರು, ಅರಹಂತಗಿರಿಯ ಧವಲಕೀರ್ತಿ ಸ್ವಾಮೀಜಿ, ವಿಚಾರಪಟ್ಟ ಕ್ಷುಲ್ಲಕ ಪ್ರಮೇಯ ಸಾಗರ ಸ್ವಾಮೀಜಿ ವಹಿಸಿದ್ದರು.

ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ | ನೂತನ ಬಾಹುಬಲಿ ಬಿಂಬಕ್ಕೆ ಧಾಮ ಸಂಪ್ರೋಕ್ಷಣೆ | ಅಭಿನವ ಶ್ರೀಗಳಿಂದ ತೀರ್ಥಂಕರರ ಬಿಂಬಗಳ ಪ್ರತಿಷ್ಠಾಪನೆ

ಶ್ರೀಫಲಗಳ ಅರ್ಪಣೆ

ಸಮವಸರಣ ಯಾಗ ಮಂಟಪದ ಸನ್ನಿಧಿಯಲ್ಲಿ ಭೂತ ವರ್ತಮಾನ ಭವಿಷ್ಯತ್ ಕಾಲದ 24 ತೀರ್ಥಂಕರರಿಗೆ ಪಂಚಕಲ್ಯಾಣ ನಡೆಯಿತು. ಅತ್ತೆ–ಮಾವರಾಗಿ ಶ್ಯಾಮಲಾ– ವಿಜಯಕುಮಾರ್ ಸೌಧರ್ಮ ಇಂದ್ರ ಇಂದ್ರಾಣಿಯರಾಗಿ ರಾಜುಲ್ ಮಹಾವೀರ ಪ್ರಸಾದ್ ಜೈನ್ ಸನತ್ಕುಮಾರರಾಗಿ ಪ್ರಮೀಳಾ ಸುನೀಲ್ ಕುಮಾರ್ ಜೈನ್ ಮಹೇಂದ್ರರಾಗಿ ದೀಕ್ಷಾ –ವಿವೇಕ್ ಕುಮಾರ್ ತೀರ್ಥಂಕರರ ಮಾತಾ– ಪಿತರಾಗಿ ಆಶಾ– ಜಿನೇಂದ್ರ ಈಶಾನ್ಯ ಇಂದ್ರರಾಗಿ ಶ್ವೇತಾ– ನೀಲೇಶ್ ಕುಬೇರರಾಗಿ ಪೂರ್ಣಿಮಾ– ಅನಂತಪದ್ಮನಾಭ್ ಯಜ್ಞ ನಾಯಕರಾಗಿ ಸುಪ್ರಿಯಾ– ಹೇಮಂತ್ ಕುಮಾರ್ ದಂಪತಿ ಮತ್ತು ಚಕ್ರವರ್ತಿಯಾಗಿ ಪ್ರಖರ್ ಜೈನ್ ಅಷ್ಟ ವಿಧಾರ್ಚನೆ ಮಾಡಿ ಶ್ರೀಫಲಗಳನ್ನು ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.