ಹಾಸನ: ಒಂದು ಪುಟ್ಟ ಗುಡಿ. ವರ್ಷಕ್ಕೊಮ್ಮೆ ತೆರೆಯುವ ಬಾಗಿಲು. ಕೆಲವೇ ಮಂದಿ ಭಕ್ತರು. ವಿಜೃಂಭಣೆ, ಆಡಂಬರವಿಲ್ಲ. ಸರಳ ಪೂಜೆ...

–12 ನೇ ಶತಮಾನದಲ್ಲಿ ನಿರ್ಮಿಸಿದ್ದೆನ್ನಲಾದ ಹಾಸನಾಂಬ ತಾಯಿ ಗುಡಿಯು ಹೀಗೆ ನಗರದ ಹಾಗೂ ಜಿಲ್ಲೆಯ ಜನರಿಗಷ್ಟೇ ಪರಿಚಿತವಾಗಿತ್ತು. ನಗರದ ಹೃದಯ ಭಾಗದಲ್ಲಿ ಪುಟ್ಟ ಗುಡಿ ಇತ್ತು. ಈಗ ಇದರ ಖ್ಯಾತಿ ಎಲ್ಲೆಡೆ ಹಬ್ಬಿದೆ. ನೂರು, ಸಾವಿರ ಮೀರಿ ಲಕ್ಷಾಂತರ ಭಕ್ತರು ಎಲ್ಲ ದಿಕ್ಕುಗಳಿಂದಲೂ ಬರುತ್ತಿದ್ದಾರೆ.

‘ಗುಡಿಯ ಬಾಗಿಲು ಮುಚ್ಚುವಾಗ ದೇವರಿಗೆ ಇಡುವ ನೈವೇದ್ಯ, ಹೂವು, ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಹಸನಾಗಿಯೇ ಹಾಸನಾಂಬ ತಾಯಿಯ ಮಡಿಲಲ್ಲಿ ಇರುತ್ತದೆ’ ಎಂಬ ನಂಬಿಕೆಯ ಕಾರಣಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇವಾಲಯದ ಗೋಪುರವನ್ನು ನವೀಕರಿಸಲು ₹ 1 ಕೋಟಿ ಮಂಜೂರು ಮಾಡಿದರು. ಬಳಿಕ ಜಿಲ್ಲಾಡಳಿತ, ಮುಜರಾಯಿ ಇಲಾಖೆ ವ್ಯಾಪ್ತಿಯಡಿ ಹಾಸನಾಂಬ ದೇವಸ್ಥಾನ ಆಡಳಿತ ಮಂಡಳಿ ಮತ್ತಷ್ಟು ಅಭಿವೃದ್ಧಿಪಡಿಸಿತು. ಗುಡಿಯಾಗಿದ್ದ ಪುಟ್ಟ ದೇಗುಲ ಇಂದು ಬೃಹತ್ ರಾಜಗೋಪುರದ ದೇವಾಲಯವಾಗಿದೆ.

ಪ್ರತಿ ವರ್ಷ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದ್ದು, ಜೊತೆಗೆ ದೇವಾಲಯದ ಹುಂಡಿ ಕಾಣಿಕೆ ಹಾಗೂ ವಿಶೇಷ ದರ್ಶನದ ಟಿಕೆಟ್ ಖರೀದಿಯು ಹೆಚ್ಚಾಗಿದೆ. ಲಕ್ಷವಿದ್ದ ಆದಾಯ ಕಳೆದ ವರ್ಷ ₹ 12 ಕೋಟಿವರೆಗೂ ತಲುಪಿದೆ. ಇದು ಈಗ ರಾಜ್ಯದ ಎ ಗ್ರೇಡ್ ದೇವಾಲಯ.

ದೇವಾಲಯದ ಆವರಣದಲ್ಲಿರುವ ಸಿದ್ದೇಶ್ವರ ಸ್ವಾಮಿ ಪ್ರಸಾದವೂ ಪ್ರಖ್ಯಾತ. ಯಾವುದೇ ಶುಭಕಾರ್ಯ, ಹೊಸ ಹೆಜ್ಜೆ ಇಡುವ ಮಂದಿ ಸ್ವಾಮಿಯಲ್ಲಿ ಪ್ರಸಾದ ಕೇಳುವುದು ಇಂದಿಗೂ ರೂಢಿಯಲ್ಲಿದೆ. ಪಕ್ಕದಲ್ಲೇ ಇರುವ ಪುಟ್ಟ ವೀರಭದ್ರಸ್ವಾಮಿ ದೇವರ ವಿಗ್ರಹವೂ ಕೋರಿಕೆ ಈಡೇರಿಸುವ ಪ್ರಸಾದ ಕರುಣಿಸಲು ಪ್ರಸಿದ್ಧಿ ಹೊಂದಿದೆ.

ವೈಷ್ಣವಿ, ಮಹೇಶ್ವರಿ, ಕೌಮರಿ..

‘ಸಪ್ತಮಾತೃಕೆಯರ ಪೈಕಿ ವೈಷ್ಣವಿ, ಮಹೇಶ್ವರಿ ಮತ್ತು ಕೌಮರಿ ಹಾಸನದ ಗರ್ಭಗುಡಿಯಲ್ಲಿ ನೆಲೆಸಿದ್ದು, ಚಾಮುಂಡಿ, ವಾರಾಹಿ ಮತ್ತು ಇಂದ್ರಾಣಿಯರು ದೇವಾಲಯದ ಬಳಿಯ ದೇವಿಗೆರೆ ತೊಟ್ಟಿಯಲ್ಲಿದ್ದಾರೆ. ಆದರೆ ಬ್ರಾಹ್ಮಿ ದೇವಿಯು ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದ್ದಾಳೆ’ ಎಂಬುದು ಜನರ ನಂಬಿಕೆ.

ಪುರಾಣ ಪ್ರಸಿದ್ಧಿ ಪಡೆದ ದೇವಾಲಯದ ಕುರಿತು ಹಲವು ದಂತಕತೆಗಳೂ ಇವೆ. ಕಠಿಣ ತಪಸ್ಸಿನ ನಂತರ ಬ್ರಹ್ಮನಿಂದ ವರದ ಪಡೆದ ಅಂಧಕಾಸುರನ ಹಾವಳಿಯನ್ನು ತಡೆಯಲು ಸಾಧ್ಯವಾಗದೆ ಶಿವನು ತನ್ನ ಶಕ್ತಿಗಳಿಂದ ಯೋಗೇಶ್ವರಿಯನ್ನು ಸೃಷ್ಟಿಸುತ್ತಾನೆ. ಅವಳು ಸಪ್ತಮಾತೃಕೆಗಳಾದ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ಜೊತೆಗೆ ರಾಕ್ಷಸನ ಅಂತ್ಯ ಮಾಡುತ್ತಾಳೆ. ನಂತರ ವಾರಣಾಸಿಯಿಂದ ದಕ್ಷಿಣಕ್ಕೆ ಪ್ರಯಾಣಿಸುವ ಸಪ್ತಮಾತೃಕೆಯರು ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ಉಳಿಯಲು ನಿರ್ಧರಿಸಿದರು. ಸುಂದರವಾದ ಆ ಸ್ಥಳವೇ ಇಂದಿನ ಹಾಸನವಾಯಿತು ಎಂಬ ಪ್ರತೀತಿ ಇದೆ.

‘ಭಕ್ತೆಯನ್ನು ಕಲ್ಲಾಗಿಸಿದ ದೇವಿ..’

‘ಅತ್ತೆಯ ಹಲ್ಲೆಯಿಂದ ರಕ್ಷಿಸಲೆಂದು ದೇವಿಯು ಸೊಸೆ ಭಕ್ತೆಯೊಬ್ಬಳನ್ನು ಕಲ್ಲಾಗಿಸಿದಳು. ಈಗಲೂ ದೇವಾಲಯದ ಒಳಗೆ ಒಂದು ಕಲ್ಲಿದೆ. ಅದು ಭಕ್ತೆಯ ಪ್ರತೀಕ’ ಎಂಬ ನಂಬಿಕೆಯೂ ಇದೆ.

‘ಸೊಸೆ ಸಹಾಯಕ್ಕಾಗಿ ಕೂಗಿದಾಗ, ಹಾಸನಾಂಬೆ ಅವಳನ್ನು ಕಲ್ಲನ್ನಾಗಿ ಪರಿವರ್ತಿಸಿದಳು.

ಅದು ಪ್ರತಿ ವರ್ಷ ದೇವತೆಯ ಕಡೆಗೆ ಒಂದು ಮಿ.ಮೀ.ನಷ್ಟು ಸರಿಯುತ್ತದೆ ಎಂಬ ನಂಬಿಕೆ ಇದೆ. ಅದು ಇರುವೆ ಗುಡ್ಡವನ್ನು ತಲುಪಿದಾಗ, ಪ್ರಸ್ತುತ ಕಲಿಯುಗವು ಕೊನೆಗೊಳ್ಳುತ್ತದೆ’ ಎಂದು ಹೇಳಲಾಗುತ್ತದೆ.

ಮತ್ತೊಂದು ಜಾನಪದ ಕಥೆಯ ಪ್ರಕಾರ, ‘ಒಮ್ಮೆ ನಾಲ್ವರು ದರೋಡೆಕೋರರು ದೇವಾಲಯದಲ್ಲಿದ್ದ ಆಭರಣ ಕದಿಯಲು ಪ್ರಯತ್ನಿಸಿದರು. ಅವು ಕಲ್ಲುಗಳಾಗಿ ಹೆಪ್ಪುಗಟ್ಟಿದ್ದವು. ಪಕ್ಕದ ಕಲ್ಲಪ್ಪನ ಗುಡಿಯಲ್ಲಿ ಈ ಕಲ್ಲುಗಳು ನಮಗೆ ನೋಡಲು ಇಂದಿಗೂ ಇದೆ’.

ಚಿಕ್ಕ ಗುಡಿ ಇದ್ದಾಗಿನಿಂದಲೂ ಹಾಸನಾಂಬ ದೇವಿಯ ದರ್ಶನ ಪಡೆಯುತ್ತಿದ್ದು 70 ವರ್ಷದಿಂದ ಅಪಾರ ಶ್ರದ್ಧಾ ಭಕ್ತಿಯಿಂದ ತಾಯಿಯ ಆಶೀರ್ವಾದ ನಮ್ಮ ಕುಟುಂಬದ ಮೇಲಿದೆ.
ಜಯಲಕ್ಷ್ಮಿ, ಕೆ.ಆರ್. ಪುರಂ, ಹಾಸನ

ಹಿಂದೆ ಸುತ್ತಲಿನ ಹತ್ತಾರು ಹಳ್ಳಿಗಳ ಜನರು ಬಾಯಿ ಕಟ್ಟಿಕೊಂಡು, ಮಡಿಯುಟ್ಟು, ದೇವಿಗೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸುತ್ತಿದ್ದರು. ಇಂದು ದೊಡ್ಡ ದೇವಾಲಯವಾಗಿ ಬೆಳೆದಿದೆ.

ಸುಭದ್ರಾ ದೇವಿ, ಸಂತೇಪೇಟೆ, ಹಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.