ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಸಾಧಾರಣ ಮಳೆಯಾಗಿದೆ.
ನಗರದಲ್ಲಿ ತಡರಾತ್ರಿ ಆರಂಭವಾದ ಮಳೆ ಒಂದು ತಾಸಿಗೂ ಅಧಿಕ ಸುರಿಯಿತು. ಬೆಳಿಗ್ಗೆಯಿಂದ ಮೋಡದ ವಾತಾವರಣ
ಇತ್ತು. ಮಧ್ಯಾಹ್ನ ನಂತರ ಸುರಿದ ಜಿಟಿಜಿಟಿ ಮಳೆಯಲ್ಲಿಯೇ ಹಲವರು ತೊಯ್ದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.
ನಗರದ ಶುಭೋದಯ ಕಲ್ಯಾಣ ಮಂಟಪದ ಎದುರಿನ ವುಡನ್ ಫರ್ನಿಚರ್ ಹಾಗೂ ಹಾಸಿಗೆ ಮಳಿಗೆಗೆ ನೀರು ನುಗ್ಗಿ ಸಾಕಷ್ಟು ತೊಂದರೆ ಆಯಿತು. ನೀರು ಹೊರ ಹಾಕಲು ಮಾಲೀಕರು ಹರಸಾಹಸ ಪಟ್ಟರು.
ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಹಾನುಬಾಳು, ಶುಕ್ರವಾರ ಸಂತೆ, ಯಸಳೂರು, ಹಾಸನ ತಾಲ್ಲೂಕಿನ ಕಟ್ಟಾಯ
ಗೊರೂರು, ಶಾಂತಿಗ್ರಾಮ, ಹಳೇಬೀಡು, ಹೊಳೆನರಸೀಫುರ, ಚನ್ನರಾಯಪಟ್ಟಣ, ಅರಕಲಗೂಡಿನಲ್ಲಿ ಉತ್ತಮ
ಮಳೆಯಾಗಿದೆ. ಬೇಲೂರಿನಲ್ಲಿ ಒಂದು ತಾಸಿಗೂ ಹೆಚ್ಚು ರಭಸದ ಮಳೆಯಾಗಿದೆ.
ಬುಧವಾರದ ಬೆಳಿಗ್ಗೆವರೆಗಿನ 24 ಗಂಟೆಯಲ್ಲಿ ದಾಖಲಾದ ಹೋಬಳಿವಾರು ಮಳೆ ವರದಿ: ಸಕಲೇಶಪುರ 21 ಮಿ.ಮೀ,
ಬಾಳ್ಳುಪೇಟೆ 28 ಮಿ.ಮೀ, ಬೆಳಗೋಡು 27.04 ಮಿ.ಮೀ, ಹೆತ್ತೂರು 26.2 ಮಿ.ಮೀ, ಹಾನುಬಾಳು 16.6 ಮಿ.ಮೀ, ಶುಕ್ರವಾರಸಂತೆ 22 ಮಿ.ಮೀ, ಯಸಳೂರು 12 ಮಿ.ಮೀ, ಹೊಸೂರು 15 ಮಿ.ಮೀ, ಮಾರನಹಳ್ಳಿ 16.2 ಮಿ.ಮೀ ಮಳೆಯಾಗಿದೆ.
ಹೊಳೆನರಸೀಪುರ 6.6 ಮಿ.ಮೀ, ಹಳೆಕೋಟೆ 12.6 ಮಿ.ಮೀ, ಹಳ್ಳಿಮೈಸೂರು 9.8 ಮಿ.ಮೀ. ಆಲೂರು 34 ಮಿ.ಮೀ, ಪಾಳ್ಯ56 ಮಿ.ಮೀ, ಕುಂದೂರು 26 ಮಿ.ಮೀ, ಕೆ.ಹೊಸಕೋಟೆ 37 ಮಿ.ಮೀ, ಬೇಲೂರು 104.7 ಮಿ.ಮೀ, ಹಳೇಬೀಡು 20 ಮಿ.ಮೀ, ಹಗಡೆ 91 ಮಿ.ಮೀ, ಇಬ್ಬೀಡು 72.4 ಮಿ.ಮೀ, ಗೆಂಡೆಹಳ್ಳಿ 22 ಮಿ.ಮೀ, ಅರೇಹಳ್ಳಿ 43 ಮಿ.ಮೀ, ಮಳೆ ಸುರಿದಿದೆ.
ಚನ್ನರಾಯಪಟ್ಟಣ ಕಸಬಾ 15.6 ಮಿ.ಮೀ, ಉದಯಪುರ 48 ಮಿ.ಮೀ, ಬಾಗೂರು 32 ಮಿ.ಮೀ, ನುಗ್ಗೆಹಳ್ಳಿ 12.4 ಮಿ.ಮೀ, ಹಿರೀಸಾವೆ 17.3 ಮಿ.ಮೀ, ಶ್ರವಣಬೆಳಗೊಳ 11 ಮಿ.ಮೀ, ಅರಕಲಗೂಡು ಕಸಬಾ 20 ಮಿ.ಮೀ, ದೊಡ್ಡಮಗ್ಗೆ 35.2 ಮಿ.ಮೀ, ಮಲ್ಲಿಪಟ್ಟಣ 8 ಮಿ.ಮೀ, ದೊಡ್ಡ ಬೆಮ್ಮತ್ತಿ 12.4 ಮಿ.ಮೀ, ಕೊಣನೂರು 20 ಮಿ.ಮೀ, ರಾಮನಾಥಪುರ 31.4 ಮಿ.ಮೀ, ಬಸವಪಟ್ಟಣ 26.4ಮಿ.ಮೀ ಮಳೆಯಾಗಿದೆ.
ಹಾಸನ 29.6 ಮಿ.ಮೀ, ಕಟ್ಟಾಯ 42.2 ಮಿ.ಮೀ, ದುದ್ದ 28.6 ಮಿ.ಮೀ, ಗೊರೂರು 38.1 ಮಿ.ಮೀ,
ಶಾಂತಿಗ್ರಾಮ 68 ಮಿ.ಮೀ, ಸಾಲಗಾಮೆ 7.6 ಮಿ.ಮೀ, ಅರಸೀಕೆರೆ ತಾಲ್ಲೂಕಿನ ಗಂಡಸಿ 29.4 ಮಿ.ಮೀ, ಕಸಬಾ
6 ಮಿ.ಮೀ, ಜಾವಗಲ್ 7.4 ಮಿ.ಮೀ, ಕಣಕಟ್ಟೆ 12.2 ಮಿ.ಮೀ, ಯಳವಾರೆ 3.8 ಮಿ.ಮೀ. ಮಳೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.