ಕೊಣನೂರು: ಚಿನ್ನಾಭರಣ ಅಂಗಡಿಯ ಮಾಲೀಕನ ಕಣ್ತಪ್ಪಿಸಿ ₹ 1.80 ಲಕ್ಷ ಮೌಲ್ಯದ ಆಭರಣಗಳನ್ನು ಕಳ್ಳನೊಬ್ಬ ಸೋಮವಾರ ಕದ್ದೊಯ್ದಿದ್ದಾನೆ.

ಇಲ್ಲಿನ ಬಸ್ ನಿಲ್ದಾಣದ ಸಮೀಪವಿರುವ ಚಾಮುಂಡೇಶ್ವರಿ ಜ್ಯುವೆಲ್ಲರಿ ಶಾಪ್‌ಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಅಪರಿಚಿತ, 10.80 ಗ್ರಾಂ ತೂಕದ ಚಿನ್ನದ ಸರ, 5.90 ಗ್ರಾಂನ ಉಂಗುರ, 20.70 ಗ್ರಾಂ ತೂಕದ ಬ್ರಾಸ್ಲೆಟ್ ಪಡೆದಿದ್ದಾನೆ.

ನನ್ನ ಬಳಿ ನಗದಿಲ್ಲ. ನಿಮ್ಮ ಖಾತೆಗೆ ಫೋನ್ ಪೇ ಮೂಲಕ ಹಣ ವರ್ಗಾಯಿಸುವೆ ಎಂದು ಹೇಳಿ, ಒಡವೆಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ. ಈ ಸಂದರ್ಭ ಅಂಗಡಿಗೆ ಬೇರೆ ಗ್ರಾಹಕರು ಬಂದಿದ್ದಾರೆ. ಮಾಲೀಕ ಅವರಿಗೆ ಒಡವೆ ತೋರಿಸಲು ಗಮನ ಹರಿಸುತ್ತಿದ್ದಂತೆ, ಅಪರಿಚಿತ ತನ್ನಲ್ಲಿದ್ದ ಒಡವೆಗಳೊಂದಿಗೆ ಪರಾರಿಯಾಗಿದ್ದಾನೆ.

ಆನಂದ್ ರಾಮ್ ಕೊಣನೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.